ಅರಕೇರಾ ತಾಲೂಕು ಕೇಂದ್ರ ಕೈ ಬಿಡಲು ಒತ್ತಾಯ

Team Udayavani, Oct 16, 2021, 12:47 PM IST

17

ರಾಯಚೂರು: ಅರ್ಹತೆ ಇಲ್ಲದಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಅರಕೇರಾವನ್ನು ತಾಲೂಕು ಕೇಂದ್ರ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು, ಈ ಕುರಿತು ಜಿಲ್ಲಾಡಳಿತ ಕೂಡ ತಪ್ಪು ಮಾಹಿತಿ ನೀಡಿದೆ ಎಂದು ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ದೇವದುರ್ಗ ತಾಲೂಕನ್ನು ಅಭಿವೃದ್ಧಿಗೊಳಿಸದೇ ಅರಕೇರಾ ತಾಲೂಕು ಮಾಡಲು ಮುಂದಾಗಿರುವುದೇ ಅವೈಜ್ಞಾನಿಕ ನಿರ್ಧಾರ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಶಾಸಕ ಶಿವನಗೌಡ ನಾಯಕರ ರಾಜಕೀಯ ಒತ್ತಡಕ್ಕೆ ಮಣಿದು ಒಂದು ಗ್ರಾಪಂ ಕೇಂದ್ರವನ್ನು ತಾಲೂಕನ್ನಾಗಿ ಮಾಡಲಾಗಿದೆ.

ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಮರುಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಆಕ್ಷೇಪಣೆಗೆ ಅರ್ಜಿ ಕರೆದಾಗ ಸುಮಾರು 4 ಸಾವಿರಕ್ಕೂ ಅ ಧಿಕ ಅರ್ಜಿ ಸಲ್ಲಿಕೆಯಾಗಿವೆ. ಇಷ್ಟಾದರೂ ಜಿಲ್ಲಾಡಳಿತ ಒತ್ತಡಕ್ಕೆ ಮಣಿದು ತಾಲೂಕು ಕೇಂದ್ರ ಮಾಡಬಹುದು ಎಂದು ವರದಿ ನೀಡಿದೆ ಎಂದು ದೂರಿದರು.

ದೇವದುರ್ಗ ತಾಲೂಕು ಅತೀ ಹಿಂದುಳಿದ ತಾಲೂಕಾಗಿದೆ. ಅದನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕಿದೆ. ಆದರೆ, ಶಾಸಕ ಶಿವನಗೌಡ ನಾಯಕ ಅವರು ರಾಜಕೀಯ ದುರುದ್ದೇಶದಿಂದ ತಮ್ಮ ಗ್ರಾಮ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.

ಅರಕೇರಾದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ, ಈ ಹಿಂದೆ ಸಿರವಾರ ಹಾಗೂ ಮಸ್ಕಿ ತಾಲೂಕು ಕೇಂದ್ರ ಮಾಡಿದ್ದು, ಇವುಗಳಿಗೆ ಈವರೆಗೆ ಮೂಲ ಸೌಲಭ್ಯ ಕಲ್ಪಿಸಲಿಲ್ಲ. ಈಗ ಮತ್ತೊಂದು ಹೊಸ ಅರಕೇರಾ ತಾಲೂಕು ಘೋಷಣೆ ಮಾಡಿದ್ದಾರೆ. ಇದೇ ತಾಲೂಕಿನ ಗಬ್ಬೂರು ಹೋಬಳಿ ತಾಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದ್ದರೂ ಮಾಡದೆ ಕನಿಷ್ಠ ಸೌಲಭ್ಯವಿಲ್ಲದ ಅರಕೇರಾವನ್ನು ತಾಲೂಕು ಮಾಡಿರುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಹೈ ಕೋರ್ಟ್‌ ಮೊರೆ ಹೋಗಲಾಗುವುದು ಎಂದರು. ಈ ಸಂದರ್ಭದಲ್ಲಿ ಶಿವರಾಜ ನಾಯಕ, ಮಲ್ಲಯ್ಯ, ಧರ್ಮರಾಜ, ಶಿವಪ್ಪ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನ್ವಿಯ ಅಗರಬತ್ತಿ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

ಮಾನ್ವಿಯ ಅಗರಬತ್ತಿ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

31chaild

ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಜವಾಬ್ದಾರಿ

27social

ಜೀವನದಲ್ಲಿ ಉತ್ತಮ ಗುರಿ ಇರಲಿ

ಗುಡಿಸಲು ಮುಕ್ತಿಗಾಗಿ ಶ್ರಮಿಸುವವರಿಗೆ ಮತ ನೀಡಿ

ಗುಡಿಸಲು ಮುಕ್ತಿಗಾಗಿ ಶ್ರಮಿಸುವವರಿಗೆ ಮತ ನೀಡಿ

ನಿವೇಶನ ನಿರ್ಮಾಣದಲ್ಲಿ ಅಕ್ರಮ; ಆರೋಪ

ನಿವೇಶನ ನಿರ್ಮಾಣದಲ್ಲಿ ಅಕ್ರಮ; ಆರೋಪ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.