ಜ್ಯೋತಿಷಿಗಳೇ ದೊಡ್ಡ ಭಯೋತ್ಪಾದಕರು: ಕುಂವೀ

Team Udayavani, Sep 11, 2017, 4:33 PM IST

ರಾಯಚೂರು: ಮಾಧ್ಯಮಗಳಲ್ಲಿ ಬೆಳ್ಳಂಬೆಳಗ್ಗೆ ಬರುವಂಥ ಜ್ಯೋತಿಷಿಗಳು ದೇಶದ ದೊಡ್ಡ ಭಯೋತ್ಪಾದಕರು. ಸರ್ಕಾರ ಇಂಥ ಕಾರ್ಯಕ್ರಮಗಳನ್ನು ಮೊದಲು ನಿಷೇಧಿಸಲಿ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಆಗ್ರಹಿಸಿದರು.

ನಗರದ ಪಂ|ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ರವಿವಾರ ಹಮ್ಮಿಕೊಂಡ
ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕರಿಗೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು
ಮಾತನಾಡಿದರು. ಮಾಧ್ಯಮಗಳು ಸಮಾಜಕ್ಕೆ ಅಪಾಯಕಾರಿ ಅಂಶಗಳನ್ನು ತೋರಿಸುತ್ತಿವೆ. ಸರ್ಕಾರ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ಮೂಲಕ ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಮಠಗಳನ್ನು ಕಟ್ಟಿಕೊಂಡ ಗುರುಗಳು ಸಮಾಜಕ್ಕೆ ಬೇಕಿಲ್ಲ. ಮಠಗಳು ಅನುಯಾಯಿಗಳಲ್ಲಿ ಎಷ್ಟು ಜನರನ್ನು ಉದ್ಧಾರ
ಮಾಡಿವೆ. ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳದ, ಒಪ್ಪಿಕೊಳ್ಳದ ಮಠಗಳು, ಮಠಾಧಿಧೀಶರ ಅಗತ್ಯ ಸಮಾಜಕ್ಕಿಲ್ಲ.

ಎಷ್ಟು ಮಠಗಳಿಂದ ಸಮಾಜ ಉದ್ಧಾರವಾಗುತ್ತಿದೆ. ಶಿಕ್ಷಣಕ್ಕೆ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಯಾವ ಮಠಗಳು ನೆರವಾಗಿವೆ? ಕೊರಳಲ್ಲಿ ಚಿನ್ನದ ಸರ ಹಾಕಿ ಆಶೀರ್ವದಿಸಿದರೆ ಅಭಿವೃದ್ಧಿ ಆಗುವುದಿಲ್ಲ, ಲಿಂಗ ಕಟ್ಟಿ ಪಾದಪೂಜೆ ಮಾಡಿಸಿಕೊಳ್ಳುವ ಗುರುಗಳು ನಮಗೆ ಬೇಕಿಲ್ಲ ಎಂದರು.

ಚುನಾಯಿತ ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ಬಿಟ್ಟು ಡಾಲರ್ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ
ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗುತ್ತಿದೆ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖೀಸಿದ ಯಾವೊಂದು ಅಂಶಗಳು
ಜಾರಿಯಾಗುತ್ತಿಲ್ಲ ಎಂದರು. ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ ಮಾತನಾಡಿದರು.

ಪ್ರಶಸ್ತಿ ಪ್ರದಾನ: ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಸಮಾಜ ಸೇವಾರತ್ನ, ವರ್ಷದ ವ್ಯಕ್ತಿ, ಜನನಾಯಕ, ಉತ್ತಮ ಚಾಲಕ ಹಾಗೂ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಶಾಸಕ ಡಾ|ಶಿವರಾಜ ಪಾಟೀಲ, ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರ, ಡಾ| ಮನೋಹರ ವೈ.ಪತ್ತಾರ, ಎಂ. ಈರಣ್ಣ ಮಾನ್ವಿ, ಶರಣಪ್ಪಗೌಡ ಜಾಡಲದಿನ್ನಿ, ಮಹ್ಮದ್‌ ನಿಜಾಮುದ್ದೀನ್‌, ಕರೆಮ್ಮ ನಾಯಕ, ಇಲ್ಲೂರು ಗೋಪಾಲಯ್ಯ, ಗಿರಿಜಾ, ಗುಂಡಪ್ಪ, ವೀರಭದ್ರಪ್ಪ, ರಾಮಕೃಷ್ಣ, ಕಲಾ ಸಂಕುಲದ ಅಧ್ಯಕ್ಷೆ ರೇಖಾ ಬಡಿಗೇರ, ಮಾರುತಿ ಬಡಿಗೇರ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಯಚೂರು: ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ ಬಿಸಿಲೂರಿನಲ್ಲಿ ಶುಕ್ರವಾರ ಜೋರಾಗಿ ನಡೆಯಿತು. ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕೃಷ್ಣ ಜನಾಷ್ಟಮಿಯನ್ನು ಸಂಭ್ರಮದಿಂದ...

  • ರಾಯಚೂರು: ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರ ಮನವಿ ಆಲಿಸುವಲ್ಲಿ ಅಸಡ್ಡೆ ತೋರಿದ ಜಿಲ್ಲಾಧಿಕಾರಿ ಬಿ.ಶರತ್‌ ನಡೆ ಖಂಡಿಸಿ...

  • ರಂಗಪ್ಪ ಗಧಾರ ಕಲಬುರಗಿ: ರೈತರು ತಾವು ಬೆಳೆದ ಹಣ್ಣು, ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಮೊಬೈಲ್ ವೆಂಡಿಂಗ್‌ ವಾಹನವನ್ನು ರಾಜ್ಯ...

  • ದೇವಪ್ಪ ರಾಠೊಡ ಮುದಗಲ್ಲ: ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಸ್ವಂತ ಹಣ ಹಾಕಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಈವರೆಗೆ ಇಲಾಖೆಯಿಂದ ಅನುದಾನ...

  • ನಾಗರಾಜ ತೇಲ್ಕರ್‌ ದೇವದುರ್ಗ: ಕೃಷ್ಣಾ ನದಿ ಪ್ರವಾಹಕ್ಕೆ ದೇವದುರ್ಗ ತಾಲೂಕಿನಲ್ಲಿ ಅಪಾರ ಬೆಳೆ, ನೂರಾರು ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ಕಾರ್ಯಕ್ಕಾಗಿ...

ಹೊಸ ಸೇರ್ಪಡೆ