Udayavni Special

ಬಾಲ್ಯ ವಿವಾಹ ತಡೆಗೆ ಹೈರಾಣ


Team Udayavani, Dec 6, 2020, 3:10 PM IST

ಬಾಲ್ಯ ವಿವಾಹ ತಡೆಗೆ ಹೈರಾಣ

ಮಾನ್ವಿ: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬಾಲ ಕಾರ್ಮಿಕತೆ ಮತ್ತು ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದು, ಪಾಲಕರಿಗೆ ಜಾಗೃತಿ ಮೂಡಿಸಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರ ರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ, ಲಿಂಗಾನುಪಾತ, ವರದಕ್ಷಣೆ, ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಇಲಾಖೆಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್‌ ಭೀತಿಯಲ್ಲಿನ ಲಾಕ್‌ಡೌನ್‌ ಸಂದರ್ಭದಲ್ಲಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಂಕಿ-ಅಂಶ: 2019ರಲ್ಲಿ ಕೊರವಿ ಗ್ರಾಮದಲ್ಲಿ ಬಾಲಕಿಯ ಬಾಲ್ಯವಿವಾಹಒಂದೇ ಒಂದು ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮದುವೆ ತಡೆದಿದ್ದರು. ಆದರೆ, 2020ರ ಜನೆವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 7ಪ್ರಕರಣಗಳು ಬೆಳಕಿಗೆ ಬಂದಿವೆ. ಸೀಕಲ್‌, ಮುಸ್ಟೂರು, ಕಂಬಳತ್ತಿ ಮತ್ತು ತಿಮ್ಮಾಪುರ ಗ್ರಾಮಗಳಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ತಡಕಲ್‌ ಹಾಗೂ ಕಂಬಳತ್ತಿ ಗ್ರಾಮದಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣವನ್ನು ಸಿಡಿಪಿಒ ಸುಭದ್ರಾ ದೇವಿಯವರು ಆಯಾ ವ್ಯಾಪ್ತಿಯ ಕವಿತಾಳ ಮತ್ತು ಮಾನ್ವಿ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಬೊಮ್ಮನಾಳ ಮತ್ತು ನಸ್ಲಾಪುರ ಗ್ರಾಮದ ಬಾಲಕಿಯರ ಮದುವೆ ಸಿಂಧನೂರು ತಾಲೂಕಿನಲ್ಲಿ ನಡೆದಿದ್ದು, ಅಲ್ಲಿನ ಸಿಡಿಪಿಒ ಅಧಿಕಾರಿಗಳಿಗೆ ಕ್ರಮಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 45 ಪ್ರಕರಣಗಳಿದ್ದು, ಇದರಲ್ಲಿ ಈಗಾಗಲೇ 10 ಬಾಲ್ಯ ವಿವಾಹ ಬಗ್ಗೆ ದೂರು ದಾಖಲಿಸಲಾಗಿದೆ.

ಕಠಿಣ ಕ್ರಮ: ಪೋಷಕರ ತಿಳಿವಳಿಕೆ ಕೊರತೆಯೇ ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದ್ದು, ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕರನ್ನು ತಡೆಯುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಅಧಿಕಾರಿಗಳು ಜಾಗೃತಿ ಮತ್ತು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. 18 ವರ್ಷ ತುಂಬುವವರೆಗೂ ಮದುವೆ ಮಾಡಿದರೆ 2 ವರ್ಷ ಜೈಲು, 1 ಲಕ್ಷ ರೂ. ದಂಡದ ಒಪ್ಪಿಗೆ ಮುಚ್ಚಳಿಕೆ ಪತ್ರಕ್ಕೆ ಪಾಲಕರಿಂದ ಸಹಿ ಪಡೆಯಲಾಗುತ್ತಿದೆ. ಅಲ್ಲದೆ ಆಯಾ ಅಂಗನವಾಡಿ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ನೀಡಬೇಕು. ಪಾಲಕರಿಗೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಬಾಲ್ಯ ವಿವಾಹ ನಡೆದರೆ ಅಂಗನವಾಡಿ ಶಿಕ್ಷಕಿಯರೇ ಹೊಣೆಗಾರರಾಗಿದ್ದು, ಅವರ ಮೇಲೆ ಕ್ರಮ ಜರುಗಿಸಲಾಗುವುದು ಎನುತ್ತಾರೆ ಸಿಡಿಪಿಒ ಮೇಲಧಿಕಾರಿಗಳು.

ರಾಜ್ಯದಲ್ಲಿ ಬಾಲ ಕಾರ್ಮಿಕತೆ, ಬಾಲ್ಯ ವಿವಾಹ ಹೆಚ್ಚಾಗುತ್ತಿರುವುದು ನಿಜ. ರಾಜ್ಯಾದ್ಯಂತ ಪ್ರವಾಸಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ರಾಯಚೂರು ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಬಾಲ್ಯ ವಿವಾಹ ಮಾಹಿತಿದಾರರಿಗೆ ಇಂತಿಷ್ಟು ಹಣ ನಿಗದಿಪಡಿಸುವ ಯೋಚನೆ ಇದೆ. ಗ್ರಾಪಂ ಚುನಾವಣೆ ನಂತರ ಕಾರ್ಯ ಆರಂಭಿಸಲಾಗುವುದು. – ಜಯಶ್ರೀ ಚನ್ನಾಳ್‌, ರಾಜ್ಯ ನಿರ್ದೇಶಕ, ರಾಜ್ಯ ಮಕ್ಕಳ ಸಂರಕ್ಷಣ ಘಟಕ

ಈ ವರ್ಷ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ತಾಲೂಕಿನ 7 ಪ್ರಕರಣಗಳಿದ್ದು, ಕೆಲ ಮದುವೆಗಳನ್ನು ನಿಲ್ಲಿಸಲಾಗಿದೆ. ತಡಕಲ್‌ ಗ್ರಾಮದಲ್ಲಿ ನಡೆದ ಬಾಲ್ಯ ವಿವಾಹ ಬಗ್ಗೆ ಕವಿತಾಳ ಠಾಣೆಯಲ್ಲಿ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ಆಯಾ ಗ್ರಾಮದಲ್ಲಿ ನಡೆಯುವ ಬಾಲ್ಯ ವಿವಾಹಗಳ ಮಾಹಿತಿ ಕಲೆಹಾಕಲುಅಂಗನವಾಡಿ ಶಿಕ್ಷಕಿಯರಿಗೆ ತಿಳಿಸಲಾಗಿದೆ. ಮಾಹಿತಿ ಬಂದಲ್ಲಿ ಮದುವೆಗಳನ್ನು ನಿಲ್ಲಿಸಿ ಪಾಲಕರಿಗೆ ಜಾಗೃತಿ ಮೂಡಿಸಿ, ಮುಚ್ಚಳಿಕೆ ಬರೆಯಿಸಿಕೊಳ್ಳಲಾಗುತ್ತಿದೆ. – ಸುಭದ್ರಾದೇವಿ, ಮಾನ್ವಿಯ ಸಿಡಿಪಿಒ

 

-ರವಿ ಶರ್ಮಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

Big update: No extra attempt for UPSC preliminary examination, Centre tells SC

‘ಯುಪಿಎಸ್‌ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ರೈಲ್ವೆ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ.10ರಷ್ಟು ರಿಯಾಯ್ತಿ, ಏನಿದು ಆಫರ್

ರೈಲ್ವೆ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ.10ರಷ್ಟು ರಿಯಾಯ್ತಿ, ಏನಿದು ಆಫರ್!

ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Team India’s series win over Australia is a huge life lesson: PM Narendra Modi

ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಗೆಲುವು ಬದುಕಿಗೆ ದೊಡ್ಡ ಪಾಠ: ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ರಾಯಚೂರು: 30ರಂದು ಸ್ಲಂ ಜನರ ಹಬ್ಬ-21

ರಾಯಚೂರು: 30ರಂದು ಸ್ಲಂ ಜನರ ಹಬ್ಬ-21

ಕಾಡಾ ಎಂಜಿನಿಯರ್ ಲೆಕ್ಕವೇ ಬುಡಮೇಲು; ಹಣ ಉಳಿಸಿಕೊಟ್ಟ ಗುತ್ತಿಗೆದಾರರು

ಕಾಡಾ ಎಂಜಿನಿಯರ್ ಲೆಕ್ಕವೇ ಬುಡಮೇಲು; ಹಣ ಉಳಿಸಿಕೊಟ್ಟ ಗುತ್ತಿಗೆದಾರರು

All rights reserved.

ನಾಲ್ಕು ವರ್ಷವಾದ್ರೂ ಅಲೆಮಾರಿಗಳಿಗಿಲ್ಲ ಸೂರು!

Illegal Shelter issu

ಗೊಂದಲದ ಗೂಡಾದ ಆಶ್ರಯದ ಅಕ್ರಮವಾಸ!

MUST WATCH

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

ಹೊಸ ಸೇರ್ಪಡೆ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

Chandrahas Guruswamy who got the Sabarimala Ayyappa Darshan

ಶಬರಿಮಲೆ ಅಯ್ಯಪನ ದರ್ಶನ ಪಡೆದ ಚಂದ್ರಹಾಸ್‌ ಗುರುಸ್ವಾಮಿ, ಸತೀಶ್‌ ಗುರುಸ್ವಾಮಿ, ಶಿಷ್ಯ ವೃಂದ

davanagere

23-24ಕ್ಕೆ ಸರ್ಕಾರಿ ನೌಕರರ ಒಕ್ಕೂಟದ ಸಮಾವೇಶ

ನಿಜಶರಣ ಅಂಬಿಗರ ಚೌಡಯ್ಯ ಸ್ಮರಣೆ

ನಿಜಶರಣ ಅಂಬಿಗರ ಚೌಡಯ್ಯ ಸ್ಮರಣೆ

Bhayandar Sri Swamy Sharanam Ayyappa Honored by Bhaktavrundra Charitable Trust

ಭಾಯಂದರ್‌ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್‌ನಿಂದ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.