ಸೈಬರ್‌ ವಂಚನೆಗೆ ಅತಿಯಾಸೆಯೇ ಕಾರಣ: ನಿಖೀಲ್‌


Team Udayavani, Apr 5, 2022, 6:01 PM IST

18crime

ರಾಯಚೂರು: ಸೈಬರ್‌ ಪ್ರಕರಣಗಳಿಗೆ ಅತಿಯಾಸೆಯೇ ಮುಖ್ಯ ಕಾರಣ. ನಮ್ಮದಲ್ಲದ ಸ್ವತ್ತಿಗೆ ಆಸೆ ಪಡುವುದನ್ನು ಬಿಟ್ಟರೆ ಸೈಬರ್‌ ವಂಚನೆಗೆ ಕಡಿವಾಣ ಹಾಕಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖೀಲ್‌ ಬುಳ್ಳಾವರ್‌ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್‌ರ್ ಗಿಲ್ಡ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಬರ್‌ ಅಪರಾಧ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಲಾಭವಿಲ್ಲದೇ ಒಂದು ಹೊತ್ತು ಊಟ ಕೂಡ ಪುಗÕಟ್ಟೆ ಕೊಡುವುದಿಲ್ಲ ಎಂದ ಮೇಲೆ ಹಣ ಯಾರು ಕೊಡುತ್ತಾರೆ ಎಂಬುದನ್ನು ಜನ ಅರಿಯಬೇಕು ಎಂದರು.

ಸೈಬರ್‌ ಅಪರಾಧದ ಬಗ್ಗೆ ಜನ ಎಚ್ಚೆತ್ತುಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ. ಬ್ಯಾಂಕ್‌ಗಳು ಡಬಲ್‌ ಒಟಿಪಿ ವ್ಯವಸ್ಥೆ ಜಾರಿಗೊಳಿಸಿವೆ. ಈಗ ಅಷ್ಟು ಸುಲಭಕ್ಕೆ ವಂಚನೆ ಮಾಡುವುದು ಕಷ್ಟ. ಆದರೂ ಸೈಬರ್‌ ಅಪರಾಧಗಳು ಮಾತ್ರ ಕಡಿಮೆಯಾಗಿಲ್ಲ ಎಂದರು. ತಂತ್ರಜ್ಞಾನ ಬೆಳೆದಂತೆ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತದೆ. ಪೊಲೀಸರು ಇಂಥ ಪ್ರಕರಣ ಭೇದಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೆಲವೊಂದು ಪ್ರಕರಣಗಳ ಭೇದಿಸುವುದು ಕಷ್ಟ. ಅಪಘಾತವಾದಾಗ ಗೋಲ್ಡನ್‌ ಟೈಂ ಇರುವಂತೆ ಸೈಬರ್‌ ಅಪರಾಧ ನಡೆದಾಗಲೂ ಅಂಥ ಸಮಯವಿರುತ್ತದೆ. ವಂಚನೆ ಆಗಿದೆ ಎಂದು ಗೊತ್ತಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಧ್ಯವಾದಷ್ಟು ಹಣ ದುರ್ಬಳಕೆ ಆಗುವುದನ್ನು ತಡೆಯಬಹುದು ಎಂದರು.

ಈ ವಿಚಾರದಲ್ಲಿ ಪೊಲೀಸರ ಜತೆ ಮಾಧ್ಯಮಗಳ ಪಾತ್ರವೂ ಬಹಳ ಮುಖ್ಯವಾಗಿದೆ. ಸೈಬರ್‌ ಅಪರಾಧಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಇಂಥದ್ದೊಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ಸೈಬರ್‌ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ರಾಜಕುಮಾರ ವಾಜಂತ್ರಿ ಸೈಬರ್‌ ಅಪರಾಧ ಕುರಿತು ವಿಶೇಷ ಉಪನ್ಯಾಸ ನೀಡಿದರು. 2000ನೇ ಇಸ್ವಿಯಲ್ಲಿ ಸೈಬರ್‌ ಕಾಯ್ದೆ ಜಾರಿಗೊಳಿಸಲಾಯಿತು. ನಾನಾ ರೀತಿಯ ವಂಚನೆಗಳು ದಾಖಲಾಗುತ್ತಿವೆ. ಅಕ್ಷರಸ್ಥರೇ ಹೆಚ್ಚು ವಂಚನೆಗೆ ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅನಾಮಧೆಯ ಸಂದೇಶಗಳಿಗೆ, ವ್ಯಕ್ತಿಗಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ಅದರಲ್ಲೂ ಆಕರ್ಷಣೀಯ ಜಾಹೀರಾತುಗಳಿಗೆ ಮೊರೆ ಹೋಗಿ ನಮ್ಮ ಹಣ ಕಳೆದುಕೊಳ್ಳದಂತೆ ಜಾಗರೂಕತೆ ವಹಿಸಬೇಕು ಎಂದರು.

ಪತ್ರಕರ್ತರಾದ ಬಸವರಾಜ ನಾಗಡದಿನ್ನಿ, ಶಿವಮೂರ್ತಿ ಹಿರೇಮಠ, ಚನ್ನಬಸವಣ್ಣ, ವಿಜಯ ಜಾಗಟಗಲ್‌, ಆರ್‌.ಗುರುನಾಥ, ಪಾಷಾ ಹಟ್ಟಿ ವೇದಿಕೆ ಮೇಲಿದ್ದರು. ಪತ್ರಕರ್ತರಾದ ವೆಂಕಟೇಶ ಹೂಗಾರ ನಿರೂಪಿಸಿದರೆ, ಜಗನ್ನಾಥ ದೇಸಾಯಿ ಪ್ರಾರ್ಥಿಸಿದರು.

ಟಾಪ್ ನ್ಯೂಸ್

ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ

cm

ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ

NIA, Punjab Police crack Ludhiana bomb blast case

ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್ಐಎ; ಪ್ರಮುಖ ಆರೋಪಿಯ ಬಂಧನ

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

twenty one hours kannada movie review

‘ಟ್ವೆಂಟಿ ಒನ್‌ ಅವರ್’ ಚಿತ್ರ ವಿಮರ್ಶೆ: ನಿಗೂಢ ಇಪ್ಪತ್ತೂಂದು ಗಂಟೆ

s-r-patl

ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ; ನಾನು ಲಾಬಿ ಮಾಡಲ್ಲ: ಎಸ್.ಆರ್.ಪಾಟೀಲ್

ಸಿದ್ದರಾಮಯ್ಯ ಜೊತೆ ಕೂತು ಪರಿಷತ್ ಟಿಕೆಟ್ ಶಿಫಾರಸು ಅಂತಿಮಗೊಳಿಸಿದ್ದೇವೆ: ಡಿ.ಕೆ.ಶಿವಕುಮಾರ್

ಸಿದ್ದರಾಮಯ್ಯ ಜೊತೆ ಕೂತು ಪರಿಷತ್ ಟಿಕೆಟ್ ಶಿಫಾರಸು ಅಂತಿಮಗೊಳಿಸಿದ್ದೇವೆ: ಡಿ.ಕೆ.ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15dam

ಒಂದೇ ಮಳೆಗೆ ಮಾರಲದಿನ್ನಿ ಡ್ಯಾಂ ಭರ್ತಿ!

12chaild

ವಿಕಲಚೇತನರ ವಿಶೇಷ ಕೌಶಲ ಬೆಳಗಲಿ: ಡಾ| ಪಾಟೀಲ್

11socity

ರಡ್ಡಿ ಸಮಾಜದವರು ಗುಲಾಮರಲ್ಲ

10govt

ನಗರೋತ್ಥಾನ ಯೋಜನೆಯಡಿ 25.50 ಕೋಟಿ ರೂ.

ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ

ನಮ್ಮೂರಿನಲ್ಲಿ ಪಾನಿಪುರಿ, ಪಾನ್ ಮಸಾಲಾ ಮಾರುವವರು ಗುಜರಾತ್ ನವರು: ಸಿ.ಎಂ.ಇಬ್ರಾಹಿಂ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ

6student

ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಿ: ಡಾ| ಪಟ್ಟದ್ದೇವರು

7

ನಿಯಮ ಬಾಹಿರ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ

cm

ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ

6

ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.