
ನಗರ ವ್ಯಾಪಿಗೆ ವಾರ ಪೂರ್ತಿ ಕುಡಿವ ನೀರು ಪೂರೈಕೆ
Team Udayavani, Apr 21, 2021, 3:26 PM IST

ರಾಮನಗರ: ನಗರದಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ಆರಂಭವಾಗಿದ್ದ ಯೋಜನೆಗೆ ಇದ್ದ ಎಲ್ಲಾ ತೊಡಕುಗಳು ನಿವಾರಣೆಯಾಗಿದೆ. 2022ನೇ ಸಾಲಿನಲ್ಲಿ ವಾರದ ಎಲ್ಲಾ ದಿನಗಳಲ್ಲೂ ಕುಡಿ ಯುವ ನೀರು ಪೂರೈಸುವ ಯೋಜನೆ ಜಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ರಾಮನಗರ ನಗರಸಭೆಯ ಚುನಾವಣೆ ಹಿನ್ನೆಲೆ ಯಲ್ಲಿ ನಗರದ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ರಾಮನಗರ ಸೇರಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ಇದೆ. ನಗರಸಭೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರಕ್ಕೆ ಇನ್ನು ಹೆಚ್ಚಿನ ಬಲ ಬಂದತಾಗುತ್ತದೆ ಎಂದು ಹೇಳಿದರು.
ಅರ್ಕಾವತಿ ನದಿ ಪುನರುಜ್ಜೀವನ: ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಹೀಗಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದಅವರು, ನಗರವ್ಯಾಪ್ತಿಯಲ್ಲಿ ಎರಡು ಕೆರೆ ಗಳಿದ್ದು, ಅವು ಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ ವಾಯುವಿಹಾರಕ್ಕೆ ವ್ಯವಸ್ಥೆ ಮಾಡುವ ಉದ್ದೇಶವಿದೆ. ಎಲ್ಲಾ ಪಾರ್ಕ್ ಗಳನ್ನು ಅಭಿವೃದ್ಧಿ ಮಾಡಲಾಗವುದು. ರಾಮನಗರದ ಜೀವಸೆಲೆ ಯಾದ ಅರ್ಕಾವತಿ ನದಿ ಯನ್ನು ಪುನರುಜ್ಜೀವನಗೊಳಿಸ ಲಾಗುವುದು ಎಂದು ತಿಳಿಸಿದರು.
ನಗರಪಾಲಿಕೆಯಾಗಲಿದೆ: ರಾಮನಗರ ನಗರಾಭಿ ವೃದ್ಧಿ ಪ್ರಾಧಿಕಾರ 1994ರಿಂದ ಅಸ್ತಿತ್ವದಲ್ಲಿದೆ. ಆದರೆ, ನಗರಾಭಿವೃದ್ದಿಗೆ ಬೇಕಾದ ಮಾಸ್ಟರ್ ಪ್ಲಾನ್ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳನ್ನಾಗಿ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಕೊಳ್ಳುವುದಾಗಿ ತಿಳಿಸಿದ ಡೀಸಿಎಂ, ಮುಂದಿನ ಐದು ವರ್ಷಗಳಲ್ಲಿ ರಾಮನಗರ ನಗರಸಭೆ, ನಗರಪಾಲಿಕೆಯಾಗಲಿದೆ. ನಗರ ಪಾಲಿಕೆ ಮಾಡುವುದಾಗಿ ನಾವು ಕೇವಲ ಬಾಯಿ ಮಾತಿನ ವಾಗ್ಧಾನ ಮಾಡುತ್ತಿಲ್ಲ. ಇದು ಬಿಜೆಪಿಯ ಗುರಿಯೂ ಹೌದು ಎಂದು ಹೇಳಿದರು.
ಇನ್ನೂ ಮಣ್ಣು ರಸ್ತೆ ಇದೆ!: ರಾಮನಗರದಲ್ಲಿ 190 ಕಿ.ಮೀ ಉದ್ದದ ರಸ್ತೆ ಇದೆ. ಇದರಲ್ಲಿ 150 ಕಿ.ಮೀ. ನಷ್ಟು ರಸ್ತೆ ಡಾಂಬರೀಕರಣಗೊಂಡಿದೆ. ಉಳಿದ 40 ಕಿ. ಮೀ. ರಸ್ತೆಯಲ್ಲಿ ಬರೀ ಮಣ್ಣು ಬಿಟ್ಟರೆ ಅಲ್ಲಿ ಏನೂ ಇಲ್ಲ. ಇರುವ ಡಾಂಬರು ರಸ್ತೆ ಕೂಡ ಪರಮ ಕಳಪೆ. ಆಧುನಿಕ ಮಾನದಂಡಗಳ ಪ್ರಕಾರ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗು ವುದು ಎಂದು ವಿವರಿಸಿದರು. ನಗರಸಭೆಯ ಆಡಳಿತ: ತಮ್ಮ ಪಕ್ಷ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಪಾರದರ್ಶಕ ಆಡಳಿತಕ್ಕೆ ಪ್ರಾಮುಖ್ಯತೆ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಡೀಸಿಎಂ ಅಶ್ವತ್ಥನಾರಾಯಣ ತಿಳಿಸಿದರು.
ಇ-ಖಾತೆ ಸಮಸ್ಯೆ, ಮನೆ ನಿರ್ಮಿಸಿಕೊಡುವ ಯೋಜನೆ ಜಾರಿ ಹೀಗೆ ಸಮರ್ಥ ಆಡಳಿತ ನೀಡುವುದಾಗಿ ತಿಳಿಸಿದರು. ನಗರಸಭೆಯ ಆದಾಯದ ಬಗ್ಗೆಯೂ ಕಾಳಜಿವಹಿಸಿ ನಾಗರಿಕರು ತೆರಿಗೆಯನ್ನು ಪಾವತಿಸುವಂತೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ, ರಾಮನಗರ ನಗರಾಭಿವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಮುರಳೀಧರ, ನಗರ ಬಿಜೆಪಿ ಅಧ್ಯಕ್ಷ ಪಿ.ಶಿವಾನಂದ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಮಾಧ್ಯಮ ವಕ್ತಾರ ಚಂದ್ರಶೇಖರ ರೆಡ್ಡಿ, ಪ್ರಮುಖರಾದ ಬಿ.ನಾಗೇಶ್, ರಾಜೇಶ್, ಡಿ.ನರೇಂದ್ರ, ಬಿಜೆಪಿ ಮಂಜು, ಜಿ.ವಿ.ಪದ್ಮನಾಭ ಮುಂತಾ ದವರು ಹಾಜರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ

ಕಾರ್ಕಳ: ಗೇರು ಬೀಜ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನ ಕೊಲೆ

ಉಡುಪಿ ಸಂತೆಕಟ್ಟೆ: ವಿದ್ಯಾರ್ಥಿಗಳಿದ್ದ ಕಾರಿಗೆ ಲಾರಿ ಢಿಕ್ಕಿ; ಲಾರಿ ಸಹಿತ ಚಾಲಕ ಪರಾರಿ

ಚಡಚಣದಲ್ಲಿ ಕೆ.ಆರ್.ಪಿ ಪಕ್ಷದ ರ್ಯಾಲಿ: ಪಕ್ಷ ಸೇರ್ಪಡೆ ಕಾರ್ಯಕ್ರಮ

ಹಾಲಿ- ಮಾಜಿ ಸಿಎಂ ಗಳು ಪುಡಿ ರೌಡಿಗಳಂತೆ ಮಾತನಾಡುತ್ತಿದ್ದಾರೆ: ಎಚ್.ವಿಶ್ವನಾಥ ಅಸಮಾಧಾನ