“ಸಪ್ತಪದಿ’ ಕಲ್ಯಾಣಕ್ಕೆ ಕೋವಿಡ್ ವಿಘ್ನ

ರಾಯಚೂರಿನ ಮೂರು ದೇಗುಲಗಳಲ್ಲಿ 440ಕ್ಕೂ ಹೆಚ್ಚು ನೋಂದಣಿ,ರದ್ದಾಯ್ತು ವಿವಾಹ

Team Udayavani, Dec 19, 2020, 5:53 PM IST

“ಸಪ್ತಪದಿ’ ಕಲ್ಯಾಣಕ್ಕೆ ಕೋವಿಡ್ ವಿಘ್ನ

ರಾಯಚೂರು: ಸರ್ಕಾರ ಜಾರಿಗೊಳಿಸಿದ್ದ ಸಪ್ತಪದಿ ಹೆಸರಿನ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೋವಿಡ್ ಅಡ್ಡಗಾಲುಹಾಕಿದೆ. ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳಲ್ಲಿ ನೋಂದಣಿ ಮಾಡಿಸಿದ್ದ ಬಹುತೇಕ ವಿವಾಹಗಳು ರದ್ದಾಗುವ ಮೂಲಕ ಯೋಜನೆಗೆ ಆರಂಭಿಕ ವಿಘ್ನ ಉಂಟಾಗಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈ ವರ್ಷ ಶಾದಿಭಾಗ್ಯದ ಮಾದರಿಯಲ್ಲಿ ಸಪ್ತಪದಿಯೋಜನೆ ಅನುಷ್ಠಾನಗೊಳಿಸಿತ್ತು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವಂಥ ದೇವಸ್ಥಾನಗಳಲ್ಲಿ ಉಚಿತ ಸಾಮೂಹಿಕವಿವಾಹ ಮಾಡಿಕೊಡುವ ಕಾರ್ಯಕ್ರಮ ಇದಾಗಿತ್ತು. ಕಳೆದ ಬೇಸಿಗೆಯಲ್ಲಿಯೇ ಕಾರ್ಯಕ್ರಮ ಆರಂಭಿಸಿತ್ತು. ಅದಕ್ಕೆ ಜಿಲ್ಲೆಯಲ್ಲೂ ವ್ಯಾಪಕ ಸ್ಪಂದನೆ ಸಿಕ್ಕಿತ್ತು. ಆದರೆ, ಕೋವಿಡ್‌-19 ಹಾವಳಿಯಿಂದ ಕಾರ್ಯಕ್ರಮಕ್ಕೆ ಹಿನ್ನಡೆಯಾಯಿತು.

ಎಲ್ಲ ಮದುವೆಗಳು ರದ್ದು: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿ ಹಲವು ದೇವಸ್ಥಾನಗಳಲ್ಲಿದ್ದು, ಅದರಲ್ಲಿ ಮೂರು ಪ್ರಮುಖ ದೇವಸ್ಥಾನಗಳಿವೆ. ಸಿಂಧನೂರಿನ ಅಂಬಾ ಮಠದಲ್ಲಿ 300 ಅರ್ಜಿಗಳುಸಲ್ಲಿಕೆಯಾಗಿದ್ದರೆ, ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ 100 ಹಾಗೂ ತಾಲೂಕಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ 40ಕ್ಕೂ ಅಧಿಕ ಮದುವೆಗಳು ನೋಂದಣಿಯಾಗಿದ್ದವು. ಆದರೆ, ಇನ್ನೇನು ಶುಭ ಮೂಹೂರ್ತದಲ್ಲಿಮದುವೆ ನಡೆಸಬೇಕು ಎನ್ನುವಷ್ಟರಲ್ಲಿ ಕೋವಿಡ್ ಹಾವಳಿ ಶುರುವಾಗಿ ಲಾಕ್‌ ಡೌನ್‌ ಜಾರಿಗೊಳಿಸಲಾಯಿತು. ಇದರಿಂದ ಜನ ಒಗ್ಗೂಡುವುದಕ್ಕೆ ಸರ್ಕಾರವೇ ನಿಷೇಧಹೇರಿದ್ದರಿಂದ ಸಪ್ತಪದಿ ಕೂಡ ರದ್ದಾಯಿತು.

ಬಹುತೇಕ ಮದುವೆ ಪೂರ್ಣ: ನೋಂದಣಿಯಾಗಿದ್ದ ಬಹುತೇಕ ಮದುವೆಗಳು ಲಾಕ್‌ಡೌನ್‌ ವೇಳೆಯಲ್ಲಿ ಮುಗಿದು ಹೋಗಿವೆ. ಕುಟುಂಬಸ್ಥರುತಮ್ಮಷ್ಟಕ್ಕೆ ತಾವು ಮದುವೆ ಮಾಡಿ ಮುಗಿಸಿದ್ದಾರೆ. ಕೆಲವರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಸ್ವ-ಗ್ರಾಮಗಳಲ್ಲೇ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಈಚೆಗೆ ಸರ್ಕಾರ ಮತ್ತೆ ಸಪ್ತಪದಿ ಆರಂಭಿಸಲು ಸೂಚನೆ ನೀಡಿದ್ದು, ನೋಂದಣಿ ಮಾಡಿಸಿದವರಿಗೆ ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ.

ಮುಂದುವರಿದ ಯೋಜನೆ: ಮೊದಲ

ಪ್ರಯತ್ನಕ್ಕೆ ಕೋವಿಡ್ ಅಡ್ಡಿ ಮಾಡಿದ್ದರೂಜನರಿಂದ ಸಿಕ್ಕ ಸ್ಪಂದನೆ ಸರ್ಕಾರಕ್ಕೂ ಪ್ರೇರಣೆನೀಡಿದೆ. ಹೀಗಾಗಿ ಮುಜರಾಯಿ ಸಚಿವರುಈಚೆಗೆ ಮತ್ತೂಮ್ಮೆ ಸಭೆ ನಡೆಸಿ ಸಪ್ತಪದಿಯೋಜನೆ ಮುಂದುವರಿಸಲು ಸೂಚನೆ ನೀಡಿದ್ದು, ಜನವರಿ, ಫೆಬ್ರವರಿಯಲ್ಲಿ ಆರು ದಿನಗಳನ್ನು ನಿಗದಿ ಮಾಡಿದ್ದಾರೆ. ಈ ಬಗ್ಗೆ ಪ್ರಚಾರ ನಡೆಸಿ ಬಡವರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಏನಿದು ಸಪ್ತಪದಿ?: ಬಡವರು ಮಕ್ಕಳ ಮದುವೆ ಮಾಡಲು ನಾನಾ ಕಷ್ಟ ಪಡುತ್ತಾರೆ.ಸಾಲ ಮಾಡಿ ದುಂದು ವೆಚ್ಚ ಮಾಡುತ್ತಾರೆ.ಅದರ ಬದಲಿಗೆ ಸರ್ಕಾರವೇ ಸಪ್ತಪದಿಯೋಜನೆ ಹೆಸರಿನಲ್ಲಿ ಸಾಮೂಹಿಕವಿವಾಹ ಮಾಡಲು ಮುಂದಾಗಿತ್ತು.ಈ ರೀತಿ ಮದುವೆಯಾದ ವರನಿಗೆ 5 ಸಾವಿರ ರೂ. ವಧುವಿಗೆ 10 ರೂ.ಹಾಗೂ 8 ಗ್ರಾಂ ತಾಳಿಯನ್ನು ಸರ್ಕಾರವೇನೀಡುತ್ತಿತ್ತು. ಇನ್ನು ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆಯನ್ನು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಯೇ ನೋಡಿಕೊಳ್ಳಬೇಕಿತ್ತು. ಒಂದು ಬಾರಿ

25ರಿಂದ 50 ಮದುವೆಗಳನ್ನು ಮಾಡಲು ಅವಕಾಶವಿತ್ತು. ಅದಕ್ಕಿಂತ ಹೆಚ್ಚು ಮದುವೆ ನೋಂದಣಿಯಾಗಿದ್ದರೆ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇನ್ನು ಮದುವೆಯಾದಲ್ಲಿ ಸ್ಥಳದಲ್ಲೇ ಸಹಾಯಧನದ ಚೆಕ್‌ ವಿತರಿಸಿದರೆ,ಉಪನೋಂದಣಾಧಿಕಾರಿ ಮದುವೆ ನೋಂದಣಿ ಮಾಡಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇತ್ತು.

ರಾಜ್ಯ ಸರ್ಕಾರ ಆರಂಭಿಸಿದ್ದ ಸಪ್ತಪದಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಕೋವಿಡ್ ಕಾರಣಕ್ಕೆ ಯಾವ ಮದುವೆಗಳೂ ನಡೆದಿಲ್ಲ. ನೋಂದಣಿ ಮಾಡಿದವರನ್ನು ಸಂಪರ್ಕಿಸಿದ್ದು, ಅವರೆಲ್ಲ ಈಗಾಗಲೇ ಮದುವೆಗಳನ್ನು ಮುಗಿಸಿದ್ದಾರೆ. ಈಗ ಮತ್ತೂಂದು ಸೂಚನೆ ಬಂದಿದ್ದು ಜನವರಿ, ಫೆಬ್ರವರಿಯಲ್ಲಿ ಮತ್ತೆ ಮದುವೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಪ್ರಚಾರ ನೀಡಲಾಗುವುದು.  –ಸೆಲ್ವಮಣಿ, ದತ್ತಿ ಸಹಾಯಕ, ಧಾರ್ಮಿಕ ದತ್ತಿ ಇಲಾಖೆ, ರಾಯಚೂರು

 

-ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ದಾವಣಗೆರೆ: ಬಾಲ್ಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ಪಕ್ಷ, ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

1-dddsd

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

cOW HUG

ವ್ಯಾಲೆಂಟೈನ್ಸ್‌ ಡೇ ಬದಲು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ: ಪತ್ರ ವೈರಲ್‌

ವೈ.ಬಿ. ಅಣ್ಣಿಗೇರಿ ಮಹಾವಿದ್ಯಾಲಯ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆ

ವೈ.ಬಿ. ಅಣ್ಣಿಗೇರಿ ಮಹಾವಿದ್ಯಾಲಯ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JAGGERY

ʻಮಿಶ್ರಾʼ ಸಾವಯವ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ

wAste

ಘನತ್ಯಾಜ್ಯ ವಿಲೇವಾರಿಗೆ ರಾಯಚೂರು ಜಿಪಂನಿಂದ ವಾಹನ

1-sadsaad

ದುಷ್ಕರ್ಮಿಗಳಿಂದ ಬೆಂಕಿ; 7ಎಕರೆಯಲ್ಲಿ ಬೆಳೆದಿದ್ದ ಜೋಳದ ರಾಶಿ ಭಸ್ಮ

ಪಂಚರತ್ನ ಯಾತ್ರೆಯಲ್ಲಿ ತೆಲಂಗಾಣ ಮಾದರಿ ಜಪ

ಪಂಚರತ್ನ ಯಾತ್ರೆಯಲ್ಲಿ ತೆಲಂಗಾಣ ಮಾದರಿ ಜಪ

ರಾಯರ ದರ್ಶನ ಪಡೆದ ಎಚ್ ಡಿ ಕುಮಾರಸ್ವಾಮಿ ದಂಪತಿ

ರಾಯರ ದರ್ಶನ ಪಡೆದ ಎಚ್ ಡಿ ಕುಮಾರಸ್ವಾಮಿ ದಂಪತಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ದಾವಣಗೆರೆ: ಬಾಲ್ಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ದಾವಣಗೆರೆ: ಅಪ್ರಾಪ್ತೆಯ ವಿವಾಹಕ್ಕೆ ತಯಾರಿ… ಅಧಿಕಾರಿಗಳಿಂದ ವಿವಾಹಕ್ಕೆ ತಡೆ

ಪಕ್ಷ, ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

ಚಾರ್ಮಾಡಿ ಘಾಟ್‌: ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ

1-dddsd

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.