Udayavni Special

ಅಗತ್ಯ ಕ್ರಮಕ್ಕೆ ಸನ್ನದ್ಧರಾಗಲು ಡಿಸಿ ಸೂಚನೆ


Team Udayavani, Jun 8, 2021, 8:47 PM IST

07rcr02

ರಾಯಚೂರು: ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾಗಿದ್ದ ಪ್ರವಾಹ ಹಿನ್ನೆಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿಯೂ ಪ್ರವಾಹ ಏರ್ಪಟ್ಟರೆ, ಜನ ಹಾಗೂ ಜಾನುವಾರುಗಳನ್ನು ರಕ್ಷಿಸಲು ಸಂಬಂ ಧಿಸಿದ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈಗಿನಿಂದಲೇ ಸನ್ನದ್ದರಾಗಬೇಕು ಎಂದು ಜಿಲ್ಲಾಧಿ ಕಾರಿ ಆರ್‌.ವೆಂಕಟೇಶ ಕುಮಾರ ಅ ಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸೋಮವಾರ ಮಳೆಗಾಲ ಪ್ರವಾಹ ಪರಿಸ್ಥಿತಿ ಎದುರಿಸಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಹವಾಮಾನ ಇಲಾಖೆ ಈ ಬಾರಿ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಗತ್ಯ ಮಳೆಯಾಗಲಿದೆ. ಅಲ್ಲದೆ ಪ್ರವಾಹ ಬರುವ ಸಾಧ್ಯತೆಗಳು ಇವೆ. ಜಿಲ್ಲೆಯಲ್ಲಿ ಹರಿಯುವ ಎರಡು ನದಿ ಪಾತ್ರದ ಪ್ರದೇಶಗಳಲ್ಲಿ ಸಂಭವನೀಯ ಮುಳುಗಡೆ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು. ತುಂಗಭದ್ರಾ ನದಿ ಪಾತ್ರದ 33 ಗ್ರಾಮಗಳು ಹಾಗೂ ಕೃಷ್ಣ ನದಿ ಪಾತ್ರದ 72 ಗ್ರಾಮಗಳಿಗೆ ನದಿಯ ನೀರು ನುಗ್ಗಲಿವೆ.

ಅಲ್ಲಿ ವಾಸ ಮಾಡುತ್ತಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಂಬಂಧಿ ಸಿದ ಇಲಾಖೆಗಳ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಸನ್ನದ್ದರಾಗಬೇಕು ಎಂದು ಹೇಳಿದರು. ತುಂಗಭದ್ರ ನದಿ ಪಾತ್ರದ 33 ಗ್ರಾಮಗಳಲ್ಲಿ 66,764 ಜನ ವಾಸ ಮಾಡುತ್ತಿದ್ದು ಹಾಗೂ ಕೃಷ್ಣ ನದಿ ಪಾತ್ರದ 72 ಗ್ರಾಮಗಳಲ್ಲಿ 82 ಸಾವಿರ ಜನ ವಾಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಬಾ ಧಿತರಾಗುವ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು.

ರಾಯಚೂರು ಮತ್ತು ಲಿಂಗಸುಗೂರು ತಾಲೂಕುಗಳಲ್ಲಿ ಮಾತ್ರ ನಡುಗಡ್ಡೆ ಗ್ರಾಮಗಳಿದ್ದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯಿಂದ ಪ್ರವಾಹ ಮುನ್ನೆಚ್ಚರಿಕೆಗಾಗಿ ನಡುಗಡ್ಡೆ ಗ್ರಾಮಗಳ ಜನ ಮತ್ತು ಜಾನುವಾರುಗಳು ಸಹಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಪ್ರಕೃತಿ ವಿಕೋಪದಿಂದ ಉಂಟಾಗುವ ಕೃಷಿ, ತೋಟಗಾರಿಕೆ ಬೆಳೆಗಳು, ಮಾನವ ಹಾಗೂ ಜಾನುವಾರು, ಮನೆ ಹಾನಿ ವರದಿಯನ್ನು ಪ್ರತಿ ತಾಲೂಕಿನಿಂದ ನಿಯೋಜಿತ ಅ ಧಿಕಾರಿಗಳು ಸಲ್ಲಿಸಬೇಕು. ಗ್ರಾಮಲೆಕ್ಕಾ ಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಅತಿವೃಷ್ಟಿ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ಸಂದೇಶ ನೀಡಬೇಕು ಎಂದು ಹೇಳಿದರು.

ಜಲಾಶಯಗಳಲ್ಲಿ ಶೇಖರಣೆಯಾದ ನೀರಿನ ಪ್ರಮಾಣ, ಒಳ ಹಾಗೂ ಹೊರ ಹರಿವಿನ ಮೇಲೆ ನಿಗಾವಹಿಸಬೇಕು. ಮುನ್ಸೂಚನೆ ಇಲ್ಲದೇ ಏಕಾಏಕಿ ಜಲಾಶಯಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸದಂತೆ ಅತ್ಯಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಜಿಲ್ಲಾ ಧಿಕಾರಿ ಕೆ.ಆರ್‌ ದುರುಗೇಶ್‌, ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು ಹಾಗೂ ಎನ್‌ಡಿಆರ್‌ಎಫ್‌ ತಂಡದ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು ಸಭೆಯಲ್ಲಿದ್ದರು.

ಟಾಪ್ ನ್ಯೂಸ್

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ಪ್ರಕರಣದ ತನಿಖೆಗೆ ಆದೇಶ

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

Korea

ಅಬ್ಬಾ… ಉ.ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆಜಿ ಬಾಳೆಹಣ್ಣು ಬೆಲೆ 3,300 ರೂಪಾಯಿ!

E4Yxf5sUYAE70FF

‘ನೋಡಿ ಸ್ವಾಮಿ ಇವರ ಬರ್ತ್ ಡೇ ಇವತ್ತು’

ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿದ ರಾಜ್ಯ ಸರ್ಕಾರ

ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿದ ರಾಜ್ಯ ಸರ್ಕಾರ

ದಾವಣಗೆರೆ:  ಲಾಕ್ ಡೌನ್ ನಿಯಮ ಸಡಿಲಿಕೆ, ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ

ದಾವಣಗೆರೆ: ಲಾಕ್ ಡೌನ್ ನಿಯಮ ಸಡಿಲಿಕೆ, ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ

health-tips-for-healthy-life

  ತಿನ್ನಲು ಕಹಿ, ಆರೋಗ್ಯಕ್ಕೆ ಸಿಹಿ ಈ ಹಾಗಲಕಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು ಪಿಎಸ್‌ಐ ದರ್ಪ

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು ಪಿಎಸ್‌ಐ ದರ್ಪ

asdfghgfdsdfghgffg

ವಿಮಾನ ಹಾರಾಟ ಮೊದಲೇ ಹೆಸರಿಗೆ ಕಿತ್ತಾಟ

sindhanuru news

ಮನೆ-ಮನೆಗೂ ನೀರು; ಆರಂಭದಲ್ಲೇ ವಿಘ್ನ!

d್ಗಹಜಕಜಹಗ್ದ್ಗಹಜಕಜಹಗ್

ಮರಳಿ ಮಹಾನಗರಗಳತ್ತ ಜನ

sದ್ಗಹಜಹಗ್ದಸ

ಸ್ವಚ್ಛತೆಯನ್ನೇ ಮರೆತ ರಾಯಚೂರು ನಗರಸಭೆ!

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

Today is Yoga Day

ಇಂದು ಯೋಗ ದಿನಾಚರಣೆ

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ಪ್ರಕರಣದ ತನಿಖೆಗೆ ಆದೇಶ

ಶಿರ್ವ ಡಾನ್‌ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶಿರ್ವ ಡಾನ್‌ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

Korea

ಅಬ್ಬಾ… ಉ.ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆಜಿ ಬಾಳೆಹಣ್ಣು ಬೆಲೆ 3,300 ರೂಪಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.