ಡೆಂಘೀ ಉಲ್ಬಣ: ಸ್ವಚ್ಛತೆ ಮರೆತ ಸ್ಥಳೀಯ ಸಂಸ್ಥೆಗಳು


Team Udayavani, Sep 27, 2021, 5:45 PM IST

dengue

 ರಾಯಚೂರು: ಜಿಲ್ಲೆಯಲ್ಲಿ ಡೆಂಘೀ ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ. ಆದರೆ, ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದ್ದ ಸ್ಥಳೀಯ ಸಂಸ್ಥೆಗಳು ಮಾತ್ರ ಸ್ವಚ್ಛತೆ ಗೆ ಆದ್ಯತೆ ನೀಡದೆ ರೋಗ ಉಲ್ಬಣಕ್ಕೆ ಕಾರಣವಾಗುತ್ತಿವೆ. ಕೇವಲ ನಗರ, ಪಟ್ಟಣ ಪಂಚಾಯಿತಿಗಳು ಮಾತ್ರವಲ್ಲದೇ ಗ್ರಾಪಂಗಳು ಕೂಡ ಹೊಣೆಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿವೆ.

ಗ್ರಾಮದಲ್ಲಿ ಚರಂಡಿ ನೀರು ವ್ಯವಸ್ಥೆ ಬೇಕಾಬಿಟ್ಟಿಯಾಗಿ ನಿರ್ವಹಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕೊಚ್ಚೆ ನೀರು ಒಂದೆಡೆ ಶೇಖರಣೆಯಾಗುತ್ತಿದ್ದು, ಇದರಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಡೆಂಘೀಯಂಥ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ತಾಲೂಕಿನ ಗೋನಾಲ ಗ್ರಾಮದ ಶಾಲೆ ಹಿಂಭಾಗವೇ ಚರಂಡಿ ನೀರು ಶೇಖರಣೆಗೊಂಡಿದೆ. ಬಹಳ ದಿನಗಳಿಂದ ನೀರು ಸಂಗ್ರಹಗೊಂಡಿದ್ದರೂ ಜನಪ್ರತಿನಿ ಧಿ ಗಳಾಗಲಿ, ಅ ಧಿಕಾರಿಗಳಾಗಲಿ ಕ್ರಮಕ್ಕೆ ಮುಂದಾಗಿಲ್ಲ. ಈಗ ತಾನೆ ಶಾಲೆಗಳು ಪುನಾರಂಭಗೊಂಡಿದ್ದು, ಇಂಥ ವಾತಾವರಣ ಇರುವುದರಿಂದ ಮತ್ತೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಇನ್ನೂ ಗ್ರಾಪಂ ಕೇಂದ್ರವಾದ ಮರ್ಚೆಟಾØಳ ಗ್ರಾಮದಲ್ಲೂ ಇಂಥದ್ದೇ ದುಃಸ್ಥಿತಿ ಏರ್ಪಟ್ಟಿದೆ. ಚರಂಡಿಗಳೆಲ್ಲ ತುಂಬಿದ್ದು, ಕೊಚ್ಚೆ ನೀರು ಮುಂದೆ ಹರಿದು ಹೋಗಲು ಕೂಡ ಆಗದಂಥ ಸ್ಥಿತಿ ಇದೆ. ಅಲ್ಲದೇ, ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ಪ್ರಯಾಣಿಕರು ಪ್ರಯಾಸದಲ್ಲೇ ಓಡಾಡಬೇಕಿದೆ.

ಇದೇ ಊರಲ್ಲಿ ಪಂಚಾಯಿತಿ ಇದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದರೆ, ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅ ಧಿಕಾರಿಗಳ ವಿರುದ್ಧ ದೂರುತ್ತಾರೆ. ಮತ್ತೂಂದು ಪಂಚಾಯಿತಿ ಕೇಂದ್ರವಾದ ಜೇಗರಕಲ್‌ ಗ್ರಾಮದಲ್ಲಿ ಇದೇ ಪರಿಸ್ಥಿತಿ ಏರ್ಪಟ್ಟಿದೆ. ಚರಂಡಿ ನೀರೆಲ್ಲ ಒಂದೆಡೆ ಶೇಖರಣೆಗೊಂಡಿದ್ದು, ಮುಂದೆ ಹರಿದು ಹೋಗಲು ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆ ಹಾದು ಹೋಗಿದ್ದು, ಅದನ್ನು ಲೋಕೋಪಯೋಗಿ ಇಲಾಖೆಯೇ ನಿರ್ಮಿಸಬೇಕು ಎನ್ನುವ ಕಾರಣಕ್ಕೆ ಸಿಸಿ ರಸ್ತೆ ಹಾಕಿಲ್ಲ. ಇದರಿಂದ ಅತ್ತ ರಸ್ತೆಯೂ ಇಲ್ಲ, ಇತ್ತ ಚರಂಡಿಯೂ ಇಲ್ಲ ಎನ್ನುವ ಸ್ಥಿತಿಯಿಂದ ಚರಂಡಿ ನೀರೆಲ್ಲ ಕಂಡ-ಕಂಡಲ್ಲಿ ಸಂಗ್ರಹಗೊಳ್ಳುತ್ತಿದೆ. ಮನೆ ಮುಂದೆಯೇ ನೀರು ಸಂಗ್ರಹಗೊಂಡಿದ್ದರೂ ಕೇಳುವವರಿಲ್ಲ ಎನ್ನುವಂತಾಗಿದೆ. ಅವೈಜ್ಞಾನಿಕ ಚರಂಡಿಗಳು: ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ, ಚರಂಡಿ ಕಾಮಗಾರಿಗಳನ್ನು ಮಾತ್ರ ಅವೈಜ್ಞಾನಿಕವಾಗಿ ಮಾಡುವುದೇ ಸಮಸ್ಯೆಗೆ ಕಾರಣವಾಗುತ್ತಿದೆ. ಚರಂಡಿಯಲ್ಲಿ ಹಾದು ಹೋಗುವ ನೀರಿಗೆ ಸೂಕ್ತ ಮಾರ್ಗ ನಿರ್ಮಿಸದೆ ಊರ ಮುಂದೆಯೇ ಬಿಡಲಾಗುತ್ತಿದೆ. ಎಲ್ಲಿಯವರೆಗೂ ಸಿಸಿ ರಸ್ತೆ ಇದೆಯೋ ಅಲ್ಲಿಯವರೆಗೂ ಮಾತ್ರ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ಕೊಚ್ಚೆ ನೀರು ಮುಂದೆ ಹೋಗದೆ ಅಲ್ಲಿಯೇ ಸಂಗ್ರಹಗೊಳ್ಳುತ್ತಿದೆ. ‌

ನಮ್ಮೂರ ಶಾಲೆಯ ಹಿಂಭಾಗವೇ ಚರಂಡಿ ನೀರು ಅನೇಕ ದಿನಗಳಿಂದ ಸಂಗ್ರಹಗೊಂಡಿದೆ. ಈಗ ತಾನೆ ಶಾಲೆಗಳು ಶುರುವಾಗಿದ್ದು, ಅದನ್ನು ಸ್ವತ್ಛಗೊಳಿಸುವಂತೆ ಪಂಚಾಯಿತಿ ಅಧಿ ಕಾರಿಗಳಿಗೆ ತಿಳಿಸಿದರೆ ಮಾಡುತ್ತಿಲ್ಲ. ಈಚೆಗೆ ಪಿಡಿಒ ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದಾರೆ. ಹೀಗಾದರೆ ನಾವು ಯಾರಿಗೆ ದೂರಬೇಕು. ಇನ್ನಾದರೂ ನಮ್ಮೂರ ಸಮಸ್ಯೆ ನಿವಾರಣೆಗೆ ಮುಂದಾಗಲಿ.

ಸುಧಾಕರ, ಗೋನಾಲ

ಕಳೆದ ಕೆಲ ದಿನಗಳಿಂದ ನಾನು ದೀರ್ಘಾವ ಧಿ ರಜೆಯಲ್ಲಿದ್ದೆ. ಈಚೆಗಷ್ಟೇ ಕೆಲಸಕ್ಕೆ ಮರಳಿದ್ದೇನೆ. ಅನಗತ್ಯ ಕರೆಗಳ ಕಿರಿಕಿರಿ ಹೆಚ್ಚಾಗಿದೆ. ದಿನ ಬೆಳಗ್ಗೆ 6ಗಂಟೆಯಿಂದಲೇ ಕರೆಗಳನ್ನು ಮಾಡುತ್ತಾರೆ. ಇದರಿಂದ ಕೆಲವೊಂದು ಕರೆಗಳನ್ನು ಸ್ವೀಕರಿಸಲು ಆಗಿಲ್ಲ. ಗೋನಾಲ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿಲ್ಲ. ಕೂಡಲೇ ನಮ್ಮ ಕಾರ್ಯದರ್ಶಿಯನ್ನು ಕಳುಹಿಸಿ ಸಮಸ್ಯೆ ನಿವಾರಣೆಗೆ ಸೂಚಿಸಲಾಗುವುದು.

ಮಮತಾ, ಪಿಡಿಒ, ವೆಂಕಟಾಪುರ ಗ್ರಾಪಂ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.