Udayavni Special

ಗಬ್ಬೂರು ಬಸ್‌ ನಿಲ್ದಾಣ ಗಬ್ಬು

ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರಿಗೆ ತೊಂದರೆ

Team Udayavani, Feb 20, 2020, 12:09 PM IST

20-February-07

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬಸ್‌ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ನಿರ್ವಹಣೆ ಮಾಡಲಾಗದೇ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ.

ಎಲ್ಲೆಂದರಲ್ಲಿ ಮೂತ್ರ ವಿಜರ್ಸನೆ ಮಾಡಲಾಗುತ್ತಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕಸದ ರಾಶಿ ರಾರಾಜಿಸುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಸ್ವಚ್ಛತೆಗೆ ಕ್ರಮವಹಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಸ್ವಚ್ಛತೆ ಮಧ್ಯ ಗ್ರಾಮಗಳಿಗೆ ತೆರಳಬೇಕಾಗಿದೆ. ಸೂಕ್ತ ಆಸನದ ವ್ಯವಸ್ಥೆ ಇಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ನಿಂತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬಸ್‌ ನಿಲ್ದಾಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿಯಾದರೂ ಸೌಲಭ್ಯ ಕೊರತೆಯಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಚನ್ನವೀರಪ್ಪ ಆರೋಪಿಸಿದರು.

ಗ್ರಂಥಾಲಯ ಸೌಲಭ್ಯ ಕೊರತೆ: ಗಬ್ಬೂರು ಗ್ರಾಮದಲ್ಲಿ ನಿರ್ಮಿಸಲಾದ ಗ್ರಂಥಾಲಯಕ್ಕೆ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಓದುಗರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ. ಗ್ರಂಥಾಲಯಕ್ಕೆ ದಿನ ಪತ್ರಿಕೆಗಳ ಪೂರೈಕೆ ಸಹ ಇಲ್ಲ. ಎರಡಂತಸ್ತಿನ ಕಟ್ಟಡವಿದ್ದರೂ ಓದುಗರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಆಗಾಗ ಓದುಗರು ಬಾರದೇ ಇದ್ದಲ್ಲಿ ಬಿಕೋ ಎನ್ನುತ್ತಿದೆ. 30 ಸಾವಿರ ಪುಸ್ತಕಗಳು: ಗಬ್ಬೂರು ಗ್ರಾಮದ ಗ್ರಂಥಾಲಯಕ್ಕೆ 30 ಸಾವಿರದಷ್ಟು ಪುಸ್ತಕಗಳು ಪೂರೈಕೆ ಮಾಡಲಾಗಿದೆ. ಸ್ಪರ್ಧಾತ್ಮಕ, ಕಥೆ, ಕಾದಂಬರಿ, ಕೆಲ ಮಹಾನೀಯರ ಪುಸ್ತಕಗಳಿವೆ. ಆದರೆ ಓದುಗರಿಗೆ ದಿನ ಪತ್ರಿಕೆಗಳ ಕೊರತೆ ಉಂಟಾಗಿದೆ.

ಗಬ್ಬೂರು ಗ್ರಾಮದ ಬಸ್‌ ನಿಲ್ದಾಣದ ಶೌಚಾಲಯಕ್ಕೆ ನೀರು ಮತ್ತು ನಿರ್ವಹಣೆ ಕೊರತೆ ಉಂಟಾಗಿದೆ. ಇದರ ಬಗ್ಗೆ ಕೆಲ ಸಂಘಟನೆ ಮುಖಂಡರು ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಕುರಿತು ಮೇಲಧಿಕಾರಿಗಳು ಗಮನಕ್ಕೆ ತರಲಾಗಿದೆ.
ಹಸನ್‌ ಅಲಿ,
ಸಾರಿಗೆ ಘಟಕ ವ್ಯವಸ್ಥಾಪಕ

ಸೌಲಭ್ಯಗಳ ಮರೀಚಿಕೆ ಕುರಿತು ಗಮನಕ್ಕೆ ಬಂದಿದೆ. ಗಬ್ಬೂರು ಗ್ರಂಥಾಲಯ ಸಮಸ್ಯೆ ಹಂತ ಹಂತವಾಗಿ ಬಗೆಹರಿಸಲಾಗುವುದು. ಓದುಗರಿಗೆ ಬೇಕಾಗುವ ಅಗತ್ಯ ಪುಸ್ತಕಗಳು ಪೂರೈಕೆ ಮಾಡಲಾಗಿದೆ.
ರಭಿನಾಳ,
ಜಿಲ್ಲಾ ಗ್ರಂಥಾಲಯ ಅಧಿಕಾರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rc-tdy-1

ಅಧಿಕಾರಿಗಳಿಂದ 13 ಜನರ ಮಾಹಿತಿ ಸಂಗ್ರಹ

rc-tdy-1

ಪಿಎಂ ಗರೀಬ್‌ ಯೋಜನೆ ಹಣ ಮುಂದಿನ ವಾರ ಖಾತೆಗೆ

ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಅಧಿಕಾರಿಯ ಕುಟುಂಬದ ವಿರುದ್ಧ ಪ್ರಕರಣ

ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಅಧಿಕಾರಿಯ ಕುಟುಂಬದ ವಿರುದ್ಧ ಪ್ರಕರಣ

ಹಳ್ಳಿ ಗಳಲ್ಲಿ ಹೆಚ್ಚಿದ ಕಿಕ್‌; ಸಿಗರೇಟ್‌, ಗುಟ್ಕಾ ತುಟ್ಟಿ

ಹಳ್ಳಿ ಗಳಲ್ಲಿ ಹೆಚ್ಚಿದ ಕಿಕ್‌; ಸಿಗರೇಟ್‌, ಗುಟ್ಕಾ ತುಟ್ಟಿ

ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿದ ಕೋವಿಡ್ 19.!

ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿದ ಕೋವಿಡ್ 19.!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಪರಿಸ್ಥಿತಿ ನಿಭಾಯಿಸಲು ಕೆಪಿಟಿಸಿಎಲ್‌, ಕೆಪಿಸಿಎಲ್‌ ಸಜ್ಜು

ಪರಿಸ್ಥಿತಿ ನಿಭಾಯಿಸಲು ಕೆಪಿಟಿಸಿಎಲ್‌, ಕೆಪಿಸಿಎಲ್‌ ಸಜ್ಜು

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ