ಭವನ ಬವಣೆ: ಉದ್ಘಾಟನೆ ನನೆಗುದಿಗೆ-ಕಾಮಗಾರಿ ಅಪೂರ್ಣ

Team Udayavani, Feb 15, 2020, 12:18 PM IST

ದೇವದುರ್ಗ: ಪಟ್ಟಣದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಬಾಬು ಜಗಜೀವನರಾವ್‌ ಭವನ ಉದ್ಘಾಟನೆಗೆ ಕಾಯುತ್ತಿದ್ದರೆ, ಅವಧಿ ಮುಗಿದರೂ ಬಂಜಾರ ಭವನ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ.

ಪಟ್ಟಣದ ಹೊರವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರದಲ್ಲಿ ನಿರ್ಮಿಸಲಾದ ಬಾಬು ಜಗಜೀವನರಾವ್‌ ಸಮುದಾಯ ಭವನದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಕಾಮಗಾರಿ ಪೂರ್ಣವಾಗಿ ಮೂರ್‍ನಾಲ್ಕು ತಿಂಗಳಾದರೂ ಇಲ್ಲಿವರೆಗೆ ಉದ್ಘಾಟನೆ ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಮುದಾಯ ಭವನ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಕಿಡಿಗೇಡಿಗಳ ಕಾಟಕ್ಕೆ ಕಟ್ಟಡ ಹಾಳಾಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಗೊಂಡು ಭವನ ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಅನುಕೂಲು ಮಾಡಬೇಕು ಎಂದು ಸಮುದಾಯವರು ಆಗ್ರಹಿಸಿದ್ದಾರೆ.

ಬಂಜಾರ ಭವನ: ಪಟ್ಟಣದ ಯಲ್ಲಾಲಿಂಗ ಕಾಲೋನಿಯಲ್ಲಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಂಜಾರ ಸಮುದಾಯ ಭವನದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಆರಂಭದಲ್ಲಿ ವೇಗವಾಗಿ ಸಾಗಿದ ಕಾಮಗಾರಿ ದಿನಗಳು ಕಳೆಯುತ್ತಿದ್ದಂತೆ ನಿಧಾನಗತಿಯಲ್ಲಿ ಸಾಗಿದೆ. ಕಳೆದ ಮೂರ್‍ನಾಲ್ಕು ತಿಂಗಳಿಂದ ಕೆಲಸ ನಿಲ್ಲಿಸಲಾಗಿದೆ.

ಟೆಂಡರ್‌ ನಿಯಮದ ಪ್ರಕಾರ ಈಗಾಗಲೇ ಅವಧಿ ಮುಗಿದಿದೆ. ಆದರೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕಿದ ಕಾರಣಕ್ಕೆ ಭವನದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಆದರೆ ಅಧಿಕಾರಿಗಳು ವಿಳಂಬ ನೀತಿ ತಾಳಿದ ಪರಿಣಾಮ ಬಂಜಾರ ಸಮುದಾಯ ಭವನ ಸಮಾಜದವರಿಗೆ ಅನಾನೂಕೂಲವಾಗಿದೆ.

ಸಣ್ಣಪುಟ್ಟ ಕಾಮಗಾರಿ ಭಾಕಿ ಇದೆ. ಶೌಚಾಲಯ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಿ ಸಮಾಜದವರಿಗೆ ಅನುಕೂಲು ಮಾಡಲಾಗುತ್ತದೆ.
ಬಸವರಾಜ, ಪಿಡಬ್ಲ್ಯೂಡಿ ಜೆಇ

ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಂಬಂಧಪಟ್ಟ ಸಿಆರ್‌ಪಿಯಿಂದ ಮಾಹಿತಿ ಪಡೆದು ಪರಿಶೀಲಿಸಿ ಕ್ರಮ ವಹಿಸಲಾಗುವುದು.
ಆರ್‌. ಇಂದಿರಾ,
ಕ್ಷೇತ್ರ ಶಿಕ್ಷಣಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸಿಂಧನೂರು: ಮನುಷ್ಯನ ಜನನದಿಂದ ಸಾವಿನವರೆಗೂ ಪ್ರತಿ ಕೆಲಸಕ್ಕೂ ಜನನ ಪ್ರಮಾಣ ಪತ್ರ ಅವಶ್ಯಕವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರಗಳನ್ನು...

  • ರಾಯಚೂರು: ನಗರದ ಜಿಪಂ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕುರಿತು ಕೂಲಿಕಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ...

  • ರಾಯಚೂರು: ನಮ್ಮ ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು. ಜೀವನದಲ್ಲಿ ಹೇಗೆ ಬಾಳಬೇಕು ಎಂಬದನ್ನು ಕವಿ ಸರ್ವಜ್ಞರಿಗಿಂತ ಸುಂದರವಾಗಿ ಮತ್ಯಾರು ಹೇಳಿಲ್ಲ. ಅವರ ತ್ರಿಪದಿಗಳನ್ನು...

  • ರಾಯಚೂರು: ಆರ್ಥಿಕ ವರ್ಷಾಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು...

  • ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬಸ್‌ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ನಿರ್ವಹಣೆ...

ಹೊಸ ಸೇರ್ಪಡೆ