ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲೂ ತಾರತಮ್ಯ


Team Udayavani, Jan 24, 2021, 4:55 PM IST

Discrimination in KKRDB grant allocation

ರಾಯಚೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ  ಕೆಕೆಆರ್‌ಬಿಡಿ) ಯಿಂದ ಹಂಚಿಕೆಯಾಗುತ್ತಿರುವ ಅನುದಾನದಲ್ಲೂ ತಾರತಮ್ಯದ ಆರೋಪ ಕೇಳಿ ಬರುತ್ತಿದೆ. ಈಗ ಡಾ|ಡಿ.ಎಂ.ನಂಜುಂಡಪ್ಪ ವರದಿಯನ್ವಯ ತಾಲೂಕುವಾರು ಅನುದಾನ ಹಂಚಿಕೆಯಾಗುತ್ತಿದ್ದು, ಇದರಿಂದ ಕೆಲ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗುತ್ತಿದೆ.

ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಪ್ರಗತಿಗಾಗಿ ಕೆಕೆಆರ್‌ಡಿಬಿ ಆರಂಭಿಸಿದೆ. ಆರಂಭದಲ್ಲಿ ಪ್ರತಿ ವರ್ಷ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದು, ಈಗ ಅದನ್ನು 1500 ಕೋಟಿಗೆ ಹೆಚ್ಚಿಸಲಾಗಿದೆ. 18 ವರ್ಷಗಳ ಹಿಂದೆ ಅನುಷ್ಠಾನಗೊಂಡ ನಂಜುಂಡಪ್ಪ ವರದಿಯನ್ವಯ ತೀರಾ ಹಿಂದುಳಿದತಾಲೂಕುಗಳ ಸಾಲಿಗೆ ರಾಜ್ಯದಲ್ಲಿ 114 ತಾಲೂಕುಗಳಿದ್ದರೆ; ಉತ್ತರ ಕರ್ನಾಟಕದ 59ಕ್ಕೂ ಅಧಿಕ ತಾಲೂಕುಗಳು ಸೇರಿವೆ.

ಅದರಲ್ಲಿ ಹೈಕ ಭಾಗದಸಾಕಷ್ಟು ಬಹುತೇಕ ತಾಲೂಕುಗಳು ಸೇರಿವೆ. ಅನುದಾನ ಕೂಡ ತಾಲೂಕುವಾರು ಹಂಚಿಕೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ಒಂದೇ ತಾಲೂಕಿನಲ್ಲಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಿರುವುದರಿಂದ ಒಂದೇ ಅನುದಾನ ಎರಡು ಕ್ಷೇತ್ರಗಳಿಗೆ ಹಂಚಿಕೆ ಮಾಡಬೇಕಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬದಲಾದ ಚಿತ್ರಣ: ಎಸ್‌.ಎಂ. ಕೃಷ್ಣ ಸರ್ಕಾರದ ಅವಧಿ ಯಲ್ಲಿ ಡಾ| ನಂಜುಂಡಪ್ಪ ಸಮಿತಿ ಅಧ್ಯಯನ ನಡೆಸಿ ವರದಿ ನೀಡಿತ್ತು.

2 ದಶಕಗಳ ಹಿಂದೆ ಈ ಭಾಗದ ಚಿತ್ರಣ ಬೇರೆಯಾಗಿತ್ತು. ಆದರೀಗ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಉದಾಹರಣೆಗೆ ಆಗ ತೀರಾ ಹಿಂದುಳಿದತಾಲೂಕಾಗಿದ್ದ ದೇವದುರ್ಗದಲ್ಲಿ ಎನ್‌ಆರ್‌ಬಿಸಿ, ಟಿಎಲ್‌ಬಿಸಿ ಯೋಜನೆ ವಿಸ್ತರಣೆಯಿಂದ ನೀರಾವರಿ ವಲಯ ಬಲಗೊಂಡಿದೆ.  ರಸ್ತೆ, ಮೂಲ ಸೌಲಭ್ಯ ಸುಧಾರಣೆಗೊಂಡಿವೆ. ಇದೇ ವೇಳೆ ಬೇರೆತಾಲೂಕು ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೂ ಇಂದಿಗೂ ಹಳೇ ಪದ್ಧತಿಯಡಿ ಅನುದಾನ ಹಂಚಿಕೆಯಾಗುತ್ತಿದೆ ಎಂಬುದು ಶಾಸಕರ ಆರೋಪ.

ಅನುದಾನ ಹಂಚಿಕೆಯಲ್ಲಾಗುತ್ತಿರುವ ಈ ತಾರತಮ್ಯವನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ಮೊದಲ ಬಾರಿಗೆ ಪ್ರಶ್ನಿಸಿದ್ದರು. ಹಿಂದಿನ ಸರ್ಕಾರದ ಗಮನಕ್ಕೆ ತಂದಾಗ ಈ ಬಗ್ಗೆ ಪರಿಶೀಲಿಸಲು ಸರ್ಕಾರ ಒಲವು ತೋರಿತ್ತು. ಆದರೆ, ಸರ್ಕಾರ ಬದಲಾಗಿದ್ದರಿಂದ ಈ ಪ್ರಸ್ತಾವನೆ ಮತ್ತೆ ಮೂಲೆ ಸೇರಿತು.

 ಸರ್ಕಾರದ ಮಟ್ಟದಲ್ಲಿ ಬದಲಾಗಬೇಕು

2013-14ನೇ ಸಾಲಿನಲ್ಲಿ ಸ್ಥಾಪನೆಗೊಂಡ ಕೆಕೆಆರ್‌ ಡಿಬಿಗೆ ಈವರೆಗೆ ಸಾಕಷ್ಟು ಅನುದಾನ ಬಂದಿದ್ದು, ಯಾವ ವರ್ಷವೂ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿಲ್ಲ. ಅದರಲ್ಲೂ ಮೈಕ್ರೋ, ಮ್ಯಾಕ್ರೋ ಯೋಜನೆಯಡಿ ಅನುದಾನ ಹಂಚಿಕೆಯಾಗುತ್ತಿದ್ದು,  ಶಾಸಕರಿಗೆ ಮೈಕ್ರೋ ಯೋಜನೆಯಡಿ ಮಾತ್ರ ಹೆಚ್ಚಾಗಿ ಅನುದಾನ ಸಿಗುತ್ತದೆ. ಮ್ಯಾಕ್ರೋ ಯೋಜನೆಯಡಿ ಸಿಎಂ, ಸಚಿವರು, ಕಾರ್ಯದರ್ಶಿಗಳಿಗೆ ಅಧಿ ಕಾರ ಹೆಚ್ಚಾಗಿದ್ದು, ಸಾಕಷ್ಟು ಅನುದಾನ ಬೇರೆ ಉದ್ದೇಶಗಳಿಗೂ ಬಳಸಿದ ನಿದರ್ಶನಗಳಿವೆ. ಆದರೆ, ಕ್ಷೇತ್ರವಾರು ಅನುದಾನ ಹಂಚಿಕೆ ಸರ್ಕಾರ ಮಟ್ಟದಲ್ಲಿ ಬದಲಾಗಬೇಕಿದೆ. ವಿಶೇಷ ಸಮಿತಿ ರಚಿಸಿ ಅದರ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ : ಕಟೀಲ್

ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಅನುದಾನ ಜತೆಗೆ ಕೆಕೆಆರ್‌ ಡಿಬಿಯಿಂದಲೂ ವಿಶೇಷ ಅನುದಾನ ನೀಡುತ್ತದೆ. ಆದರೀಗ ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ತಾಲೂಕುಗಳಿಗೆ ಅನುದಾನ ಹಂಚಿಕೆ ಮಾಡುತ್ತಿದ್ದು, ಒಂದೇ ತಾಲೂಕಿನಲ್ಲಿ ಎರಡು ಕ್ಷೇತ್ರಗಳಿದ್ದಲ್ಲಿ ಅನುದಾನ ಕೊರತೆಯಾಗುತ್ತಿದೆ. ಹೀಗಾಗಿ ವಿಧಾನಸಭೆ ಕ್ಷೇತ್ರವಾರು ಹಂಚಿಕೆ ಮಾಡುವಂತೆ ಸರ್ಕಾರದ ಗಮನಕ್ಕೆ ತಂದಾಗ ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿತ್ತು. ಸರ್ಕಾರ ಬದಲಾದ ಕಾರಣ ಸಮಸ್ಯೆಯಾಗಿದೆ.

 ದದ್ದಲ್‌ ಬಸನಗೌಡ, ರಾಯಚೂರು ಗ್ರಾಮೀಣ ಶಾಸಕ.

ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

amreen-bhatt

24 ಗಂಟೆಯಲ್ಲಿ ನಟಿಯ ಹತ್ಯೆ ಪ್ರಕರಣ ಭೇದಿಸಿದ ಭದ್ರತಾ ಪಡೆ: ನಾಲ್ವರು ಲಷ್ಕರ್ ಉಗ್ರರ ಹತ್ಯೆ

3lake

ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು

Akshith shashikumar spoke about seethayanam

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

1death

7 ವರ್ಷ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಹಿಳೆ ಸಾವು

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ದಾವೋಸ್ ಪ್ರವಾಸದಿಂದ ಹಿಂತಿರುಗಿದ ಸಿಎಂ ಬಸವರಾಜ ಬೊಮ್ಮಾಯಿ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20mango

ಇಳುವರಿ ಕುಂಠಿತ: ಮಾವು ಬೆಳೆಗಾರರು ಕಂಗಾಲು

13problem

ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ

12water

ನೀರು ಶುದ್ಧೀಕರಣ ಘಟಕಕ್ಕೆ ಬಾದರ್ಲಿ ಭೇಟಿ

11rain

ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ವಿತರಣೆ

15dam

ಒಂದೇ ಮಳೆಗೆ ಮಾರಲದಿನ್ನಿ ಡ್ಯಾಂ ಭರ್ತಿ!

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

5

ಸೀಬರ್ಡ್‌ ನೌಕಾನೆಲೆಗೆ ರಾಜನಾಥ ಸಿಂಗ್‌ ಭೇಟಿ

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,710 ಕೋವಿಡ್ ಸೋಂಕು ದೃಢ, 14 ಮಂದಿ ಸಾವು

name-plates

ಮಾಸಿವೆ ಮಾರ್ಗಸೂಚಿ ಫ‌ಲಕಗಳ ಮಾಹಿತಿ

4

ನ್ಯಾಯದಾನಕ್ಕೆ ವಕೀಲರ ಸಹಕಾರ ಮುಖ್ಯ

3lake

ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.