ಜೋಳದ ನಿರ್ಬಂಧ ತೆರವಿಗೆ ಚರ್ಚೆ


Team Udayavani, Jan 20, 2022, 3:27 PM IST

15corn

ಸಿಂಧನೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಹಾಕಿರುವ ನಿರ್ಬಂಧ ತೆಗೆಯುವ ಬೇಡಿಕೆ ಬುಧವಾರ ಸರ್ಕಾರದ ಹಂತದಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿದೆ.

ಜ.19ಕ್ಕೆ ನಿಗದಿಯಾಗಿದ್ದ ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಂಪುಟ ಉಪ ಸಮಿತಿಯಲ್ಲಿ ಇದನ್ನು ಮಹತ್ವದ ಸಂಗತಿಯಾಗಿ ಪ್ರಸ್ತಾಪಿಸಲಾಗಿದೆ. ಏಳು ಸಚಿವರು ಸದಸ್ಯರಾಗಿರುವ ಸಮಿತಿ ಸಭೆಯಲ್ಲಿ ಪ್ರತಿ ರೈತನಿಂದ 20 ಕ್ವಿಂಟಲ್‌ ಮಾತ್ರ ಖರೀದಿ ಮಾಡಬೇಕೆಂಬ ನಿರ್ಧಾರ ತೆಗೆಯಲು ಒತ್ತಾಯಿಸಲಾಗಿದೆ.

ಜೋಳ ಬೆಳೆಗಾರರ ಪರವಾಗಿ ಕೇಳಿಬಂದಿರುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವ ಕುರಿತಂತೆ ಸಚಿವ ಉಮೇಶ ಕತ್ತಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅನುಮತಿ ಕೇಳಿದ್ದಾರೆ. ಸಮಿತಿ ಸಭೆ ಬಳಿಕ ಅಂತಿಮವಾಗಿ ಸಿಎಂ ಭೇಟಿ ಮಾಡಿದ್ದಾರೆ. ಆದರೆ, ಈ ವೇಳೆ ರಾಗಿ ಬೆಳೆಗಾರರು ಕೂಡ ನಿರ್ಬಂಧ ತೆಗೆಯುವಂತೆ ಒತ್ತಡ ಹಾಕಿದ್ದಾರೆಂಬುದನ್ನು ಉಲ್ಲೇಖೀಸಲಾಗಿದೆ. ಜೋಳದ ಮಿತಿ ತೆಗೆಯಲು ಪೂರಕವಾಗಿ ಸ್ಪಂದಿಸಿದ ಬಳಿಕ ರಾಗಿಯ ಪ್ರಶ್ನೆ ಎದುರಾಗಿದ್ದರಿಂದ ಅಂತಿಮ ನಿರ್ಧಾರ ವಿಳಂಬವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಮುಂದಿನ ಸಭೆಗೆ ಪ್ರಸ್ತಾವನೆ

ಭತ್ತ ಮಾರಾಟಕ್ಕೆ 62 ಸಾವಿರ ರೈತರು, ರಾಗಿ ಮಾರಾಟಕ್ಕೆ 1.11 ಲಕ್ಷ ರೈತರು ಹೆಸರು ನೋಂದಾಯಿಸಿದ್ದರೆ, ಜೋಳಕ್ಕೆ ಮಾತ್ರ ನೋಂದಣಿ ಮಂಕಾಗಿದೆ. 20 ಕ್ವಿಂಟಲ್‌ ನಿರ್ಬಂಧವೇ ಇದಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ಇದನ್ನು ಚರ್ಚಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಖರೀದಿಗೆ ಅಂದಾಜು 2 ಸಾವಿರ ಕೋಟಿ ರೂ. ಅಗತ್ಯವಿದ್ದು, ಖರೀದಿ ಮಿತಿ ತೆಗೆದು ಹಾಕಿದಾಗ ಸರ್ಕಾರಕ್ಕೆ ಹೆಚ್ಚುವರಿಯಾಗಿ 600-700 ಕೋಟಿ ರೂ. ಹೊರೆ ಬೀಳುತ್ತದೆಂದು ಅಂದಾಜಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹಣ ನೀಡುತ್ತದೆ. ಬಿಡುಗಡೆ ವಿಳಂಬವಾಗುವುದರಿಂದ ಮೊದಲು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಈ ಕುರಿತಂತೆ ಮುಖ್ಯಮಂತ್ರಿಗಳ ಹಂತದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿಯೋಗ ಭೇಟಿ

ದೆಹಲಿಯಿಂದ ಆಗಮಿಸಿದ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಅವರನ್ನು ಬೆಳಗ್ಗೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ವೆಂಕಟರಾವ್‌ ನಾಡಗೌಡ ಭೇಟಿ ಮಾಡಿದ್ದಾರೆ. ರೈತರ ನಿಯೋಗ ಕೊಂಡೊಯ್ದಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಚಿವರನ್ನು ಭೇಟಿ ಮಾಡಿದ್ದಾರೆ. ಶಾಸಕ ನಾಡಗೌಡ, ಸಂಸದ ಸಂಗಣ್ಣ ಕರಡಿ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳನ್ನು ಕೂಡ ಭೇಟಿಯಾಗಿ ಚರ್ಚಿಸಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿಯವರಿಂದಲೂ ಒತ್ತಡ ಹಾಕಲಾಗುತ್ತಿದ್ದು, ಅಂತಿಮವಾಗಿ ಸಿಹಿ ಸುದ್ದಿ ಹೊರಬೀಳುಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಆಹಾರ ಇಲಾಖೆ ಸಚಿವ ಉಮೇಶ ಕತ್ತಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗಿದೆ. ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲೂ ಪ್ರಸ್ತಾಪವಾಗಿದೆ. ಸಚಿವರು ಹಾಗೂ ಸಿಎಂ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. -ಸಂಗಣ್ಣ ಕರಡಿ, ಕೊಪ್ಪಳ ಸಂಸದ

-ಯಮನಪ್ಪ ಪವಾರ

ಟಾಪ್ ನ್ಯೂಸ್

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿ ಲಷ್ಕರ್ ಉಗ್ರರು; ನಟಿ ಸಾವು!

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!

another student seen with rifle outside Texas school

ಟೆಕ್ಸಾಸ್ ಶೂಟೌಟ್ ಮರುದಿನವೇ ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೋರ್ವ ವಿದ್ಯಾರ್ಥಿ

thumb 2

ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿ

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿ

thumb 3

ತೆರೆದ ಪುಸ್ತಕ ಪರೀಕ್ಷೆಗೆ ಮರುಜೀವ; ಈ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿ

astrology news

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13problem

ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ

12water

ನೀರು ಶುದ್ಧೀಕರಣ ಘಟಕಕ್ಕೆ ಬಾದರ್ಲಿ ಭೇಟಿ

11rain

ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ವಿತರಣೆ

15dam

ಒಂದೇ ಮಳೆಗೆ ಮಾರಲದಿನ್ನಿ ಡ್ಯಾಂ ಭರ್ತಿ!

12chaild

ವಿಕಲಚೇತನರ ವಿಶೇಷ ಕೌಶಲ ಬೆಳಗಲಿ: ಡಾ| ಪಾಟೀಲ್

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

1

ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರಭುತ್ವಕ್ಕೆ ಅಖಾಡ ಸಜ್ಜು

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

barricade

ಟ್ರಾಫಿಕ್‌ ಜಾಮ್‌ ಆಗದಂತೆ ಕ್ರಾಸಿಂಗ್‌ಗೆ ತಡೆ

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿ ಲಷ್ಕರ್ ಉಗ್ರರು; ನಟಿ ಸಾವು!

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!

construction

ಜೆಜೆಎಂ ಮೊದಲ ಹಂತ: ಸಿವಿಲ್‌ ಕಾಮಗಾರಿ ಶೇ. 100 ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.