“ಹರಿ ನೀರಾವರಿ’ಗೆ ಬೆಂಗಳೂರಲ್ಲಿ ತುರ್ತು ಸಭೆ

ಸಾಧಕ-ಬಾಧಕ ಚರ್ಚೆಗೆ ತಜ್ಞರ ಜತೆ ಸಮಾಲೋಚನೆ ,ಎರಡು ದಿನದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ

Team Udayavani, Dec 9, 2020, 1:31 PM IST

“ಹರಿ ನೀರಾವರಿ’ಗೆ ಬೆಂಗಳೂರಲ್ಲಿ ತುರ್ತು ಸಭೆ

ಮಸ್ಕಿ: ಮತಕ್ಷೇತ್ರದಲ್ಲಿ ಹನಿ ನೀರಾವರಿಗಿಂತ ಹರಿ ನೀರಾವರಿ ಬೇಡಿಕೆ ಹೆಚ್ಚು ಮುನ್ನೆಲೆಗೆ ಬಂದಿದ್ದು, ಇದಕ್ಕಾಗಿ ಚುನಾವಣೆ ಬಹಿಷ್ಕಾರದಘೋಷಣೆಯೂ ಮೊಳಗಿವೆ. ಹೀಗಾಗಿತಡವಾಗಿಯಾದರೂ ಎಚ್ಚೆತ್ತ ಸರ್ಕಾರ ತರ್ತು ಸಭೆ ಆಯೋಜನೆ ಮಾಡಿದೆ. ತಜ್ಞರ ಜತೆಸಮಾಲೋಚನೆಯೊಂದಿಗೆ ಸಮಸ್ಯೆ ಇತ್ಯರ್ಥಕ್ಕೆ ಶತ ಪ್ರಯತ್ನ ನಡೆಸಿದೆ.

ನಾರಾಯಣಪುರ ಬಲದಂಡೆ ಕಾಲುವೆಯ ಶಾಖಾ ಕಾಲುವೆ 5ಎ ಅನುಷ್ಠಾನಕ್ಕೆಒತ್ತಾಯಿಸಿ ಕಳೆದ 18 ದಿನಗಳಿಂದ ರೈತರಹೋರಾಟ ಚುರುಕಾಗಿದೆ. ದಿನಗಳುಉರುಳಿದಂತೆ ಚಳವಳಿಯ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. ಈ ಯೋಜನೆ ಲಾಭ ಪಡೆಯುವ 30ಕ್ಕೂ ಹೆಚ್ಚು ಹಳ್ಳಿಗರುಈಗಾಗಲೇ ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೂನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ರಾಯಚೂರು-ಕೊಪ್ಪಳ ಹಾಗೂ ಮಸ್ಕಿಯ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿ  ಗಳು ಬೆಂಗಳೂರಿಗೆ ನಿಯೋಗ ತೆರಳಿದ್ದಾರೆ. ಕಳೆದೆರಡು ದಿನಗಳಿಂದ ರಾಜಧಾನಿಯಲ್ಲಿ ಠಿಕಾಣಿ ಹೂಡಿ ಇಲ್ಲಿನ ರೈತರ ಬೇಡಿಕೆಯನ್ನು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಮನವೊಲಿಕೆ ಕಸರತ್ತು: ಡಿಸಿ ಎಂ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ,ರಾಯಚೂರು, ಕೊಪ್ಪಳ ಸಂಸದರು, ರಾಯಚೂರು ಹಾಲಿ ಶಾಸಕ ತಿಪ್ಪರಾಜ ಹವಾಲ್ದಾರ್‌, ಸುರುಪುರ ಶಾಸಕ ರಾಜುಗೌಡ,ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಬೆಂಗಳೂರಲ್ಲಿ ಬಿಡಾರ ಹೂಡಿದ್ದಾರೆ. ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿ ಅವರನ್ನು ಕಳೆದೆರಡು ದಿನಗಳಲ್ಲಿ ಪ್ರತ್ಯೇಕವಾಗಿ ಎರಡ್ಮೂರು ಬಾರಿ ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ. ರೈತರ ನೀರಾವರಿ ಬೇಡಿಕೆ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಪ್ರಕಟಿಸಲೇಬೇಕಾಗಿದೆ. ಇಲ್ಲವಾದರೆ ಕೇವಲಗ್ರಾಪಂ ಚುನಾವಣೆಗೆ ಮಾತ್ರವಲ್ಲ; ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೂ ಪೆಟ್ಟು ಬೀಳಲಿದೆ ಎನ್ನುವ ಸಂದೇಶ ಸಾರಿದ್ದಾರೆ.

ತುರ್ತು ಸಭೆ: ರಾಯಚೂರು-ಕೊಪ್ಪಳದ ಹಾಲಿ-ಮಾಜಿ ಚುನಾಯಿತರ ನಿಯೋಗದ ಜತೆ ಚರ್ಚೆ ನಡೆಸಿದ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಡಿ.9ರಂದುಬೆಂಗಳೂರಿನ ವಿಧಾನ ಸೌಧದಲ್ಲಿ ತುರ್ತು ಸಭೆ ಆಯೋಜನೆ ಮಾಡಿದ್ದಾರೆ. ಕೃಷ್ಣಾ ಭಾಗ್ಯ ಜಲ ನಿಗಮದ ನುರಿತ ಎಂಜಿನಿಯರ್‌ಗಳು, ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. 5ಎ ಕಾಲವೆ ಅನುಷ್ಠಾನದ ಸಾಧಕ-ಬಾಧಕಗಳು, ನೀರಿನ ಲಭ್ಯತೆ, ತಾಂತ್ರಿಕ ಅಡಚಣೆ, ಆರ್ಥಿಕ ಪರಿಸ್ಥಿತಿ ಸೇರಿ ಎಲ್ಲವೂ ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಒಂದು ವೇಳೆ 5ಎ ಕಾಲುವೆ ಅನುಷ್ಠಾನಕ್ಕೆ ಸದ್ಯತೊಡಕು ಉಂಟಾದರೆ ಪರ್ಯಾಯ ಕ್ಷೇತ್ರಕ್ಕೆ ಕಲ್ಪಿಸಬೇಕಾದ ನೀರಾವರಿ ವ್ಯವಸ್ಥೆಗೆ ಇರುವ ಮಾರ್ಗಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನದಲ್ಲಿ ನಿರ್ಧಾರ:

ಚುನಾವಣೆ ಬಹಿಷ್ಕಾರದ ಅಸ್ತ್ರ ಕೇವಲ ಇಲ್ಲಿನ ಚುನಾಯಿತರು, ಜಿಲ್ಲಾಡಳಿತಕ್ಕೆ ಮಾತ್ರವಲ್ಲದೇ ಸರ್ಕಾರಕ್ಕೂ ಸವಾಲಾಗಿದೆ. 5ಎ ಕಾಲುವೆ ಇಲ್ಲವೇ ಪರ್ಯಾಯ ಮಾರ್ಗದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿದೆ. ಈ ಭಾಗದಲ್ಲಿ ಡಿ.11ರಿಂದ ಗ್ರಾಪಂ ಚುನಾವಣೆಗೆನಾಮಪತ್ರ ಸಲ್ಲಿಕೆ ಆರಂಭವಾಗುವುದರಿಂದ ಎರಡು ದಿನದಲ್ಲೇ ಈ ನಿರ್ಧಾರ ಬೀಳುವ ಸಾಧ್ಯತೆ ಇದೆ.

1200 ಕೋಟಿ ಹಸ್ತಾಂತರಕ್ಕೆ‌ ಮನವಿ :

ಮಸ್ಕಿ ಹಾಗೂ ಲಿಂಗಸುಗೂರು ಕ್ಷೇತ್ರಕ್ಕೆ ಈಗಾಗಲೇ ನಂದವಾಡಗಿ ಏತ ನೀರಾವರಿ ಮೂಲಕ ಸೂಕ್ಷ್ಮ ಹನಿ (ಡ್ರಿಪ್‌ ಇರಿಗೇಶನ್‌) ನೀರಾವರಿಗೆ ಪ್ರತ್ಯೇಕ 3 ಸಾವಿರ ಕೋಟಿ ರೂ. ನೀಡಿದೆ. 1800ಕೋಟಿ ರೂ. ಮೊತ್ತದ ಕಾಮಗಾರಿಗೆಈಗಾಗಲೇ ಚಾಲನೆ ನೀಡಲಾಗಿದೆ (ಬಹುಭಾಗ ಲಿಂಗಸುಗೂರು, ಭಾಗಶಃ ಮಸ್ಕಿ). ಆದರೆ ಎರಡನೇ ಹಂತ 1200 ಕೋಟಿ ರೂ. ಮೊತ್ತದ ಕಾಮಗಾರಿಗೆ ಟೆಂಡರ್‌ಪ್ರಕ್ರಿಯೆ ನಡೆಯಬೇಕಿದೆ. ಈ ಯೋಜನೆಯಲ್ಲಿ ಮಸ್ಕಿಯ ಬಹುಭಾಗಹಳ್ಳಿಗಳು ನೀರಾವರಿಗೆ ಒಳಪಡಲಿವೆ. ಆದರೆ ಇಲ್ಲಿನ ರೈತರು ಹನಿ ನೀರಾವರಿ ವ್ಯವಸ್ಥೆಯನ್ನೇ ವಿರೋಧಿ ಸುತ್ತಿದ್ದಾರೆ.ಹನಿ ನೀರಾವರಿ ಬದಲು ಹರಿ ನೀರಾವರಿ(ಕಾಲುವೆ ಮೂಲಕ) ವ್ಯವಸ್ಥೆ ಕಲ್ಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇಲ್ಲಿನ ರೈತರ ಬೇಡಿಕೆಯನ್ನು ಮನವಿಸರ್ಕಾರದ ಮುಂದಿಟ್ಟಿದ್ದೇವೆ. ಕಳೆದ ಒಂದು ವಾರದಿಂದ ಇದೇ ಪ್ರಯತ್ನದಲ್ಲಿದ್ದೇವೆ. ರೈತರ ನೀರಾವರಿ ಬೇಡಿಕೆ ಈಡೇರಿಸಲು ಸರ್ಕಾರವೂಬದ್ಧವಾಗಿದೆ. ಎರಡು ದಿನದಲ್ಲಿ ನಿರ್ಧಾರ ಪ್ರಕಟವಾಗಲಿದೆ. –ಪ್ರತಾಪಗೌಡ ಪಾಟೀಲ್‌, ಮಾಜಿ ಶಾಸಕ, ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆ

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

ಪಿಎಫ್‌ಐ, ಎಸ್‌ಡಿಪಿಐ ಜತೆ ಭಜರಂಗದಳ ನಿಷೇಧಿಸಲಿ: ನಲಪಾಡ್‌

ಪಿಎಫ್‌ಐ, ಎಸ್‌ಡಿಪಿಐ ಜತೆ ಭಜರಂಗದಳ ನಿಷೇಧಿಸಲಿ: ನಲಪಾಡ್‌

14-job

ಉದ್ಯೋಗ ಮೇಳ ಪ್ರಚಾರ ಯಶಸ್ವಿಗೊಳಿಸಲು ಮನವಿ

20-road

ರಸ್ತೆ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ

11-road

ಆಡಳಿತಕ್ಕೆ ಕಾಣದೇ ಹದಗೆಟ್ಟ ರಂಗಮಂದಿರ ರಸ್ತೆ?‌

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.