ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ
Team Udayavani, May 12, 2021, 12:43 PM IST
ಭಾಲ್ಕಿ: ಕೋವಿಡ್ 2ನೇ ಅಲೆ ಪ್ರಾರಂಭದಿಂದ ತಾಲೂಕಿನ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿದ್ದು, ಶಾಸಕ ಈಶ್ವರ ಖಂಡ್ರೆ ತಮ್ಮ ಸ್ವಂತ ನಿಧಿ ಯಿಂದ ಮಂಗಳವಾರ ರೋಗಿಗಳ ಅನುಕೂಲಕ್ಕಾಗಿ ಸಾರ್ವಜನಿಕ ಆಸ್ಪತ್ರೆಗೆ ಎರಡು ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟಿ ಮಾತನಾಡಿ, ಕೋವಿಡ್ 2ನೇ ಅಲೆ ಪ್ರಾರಂಭ ವಾದಾಗಿನಿಂದ ಶಾಸಕ ಈಶ್ವರ ಖಂಡ್ರೆ ಕ್ಷೇತ್ರದ ರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ಸರ್ಕಾರ ಹಾಗೂ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜತೆ ಸಂಪರ್ಕಿಸುತ್ತಿದ್ದಾರೆ.
ಈಗ ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಎರಡು ಸುಸಜ್ಜಿತ ಆಂಬ್ಯುಲೆನ್ಸ್‌ಗಳನ್ನು ಕ್ಷೇತ್ರದ ರೋಗಿಗಳ ಸೇವೆಗಾಗಿ ಸಂಪೂರ್ಣ ಉಚಿತವಾಗಿ ಸಲ್ಲಿಸಿದ್ದಾರೆ ಎಂದರು. ಈ ಆ್ಯಂಬುಲೆನ್ಸ್ ಸೇವೆ ದಿನದ 24 ಗಂಟೆಯೂ ಉಚಿತವಾಗಿದ್ದು, ಅಗತ್ಯವಿರುವವರು ಮೊ.9986939394, 7204661748 ಸಂಪರ್ಕಿಸುವಂತೆ ತಿಳಿಸಿದ್ದಾರೆ.