Udayavni Special

ವಿನಾಯಿತಿ ವೇಳೆ ಮಿತಿಮೀರಿದ ಓಡಾಟ


Team Udayavani, Apr 30, 2021, 4:04 PM IST

ಯಗ್ತ

ರಾಯಚೂರು: ಕೊರೊನಾ ಕರ್ಫ್ಯೂ ಎರಡನೇ ದಿನವೂ ಜನ ಹೊರಗೆ ಬರುವುದನ್ನು ನಿಲ್ಲಿಸದ ಕಾರಣ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ನೀಡಿದರು. ಅನಗತ್ಯವಾಗಿ ಓಡಾಡಿದ ಆಟೋಗಳನ್ನು ಸೀಜ್‌ ಮಾಡಿದರೆ, ಬೈಕ್‌ ಸವಾರರಿಗೆ ದಂಡದ ಬರೆ ಬಿದ್ದವು. ನಗರದ ಅಂಬೇಡ್ಕರ್‌ ವೃತ್ತದಲ್ಲಿ ಅಖಾಡಕ್ಕಿಳಿದ ಪೊಲೀಸರು ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದರು.

ಸುಖಾಸುಮ್ಮನೆ ಪ್ರಯಾಣಿಕರನ್ನು ಹೊತ್ತೂಯ್ಯುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದರು. ಈ ವೇಳೆ ಆಟೋ ಚಾಲಕರು ಪೊಲೀಸರ ಜತೆ ವಾಗ್ವಾದಕ್ಕಿಳಿದ ಪ್ರಸಂಗ ಕೂಡ ನಡೆಯಿತು. ಪ್ರಯಾಣಿಕರನ್ನು ಕರೆದೊಯ್ಯಲು, ತುರ್ತು ಕೆಲಸಕ್ಕೆ ಕರೆದೊಯ್ಯಲು ಅವಕಾಶ ನೀಡಲಾಗಿದೆ. ಹೀಗಾಗಿ ಆಟೋ ಓಡಿಸುತ್ತಿದ್ದೇವೆ ಎಂದು ಚಾಲಕರು ತಿಳಿಸಿದರು.

ಆದರೆ, ತುರ್ತು ಸಂದರ್ಭದಲ್ಲಿ ಮಾತ್ರ ಕರೆದೊಯ್ಯಬೇಕು. ಅದಕ್ಕೂ ದಾಖಲೆ ನೀಡಬೇಕು. ಹೀಗೆ ಹಗಲಿರುಳು ಓಡಾಡಲು ಅವಕಾಶ ಇಲ್ಲ ಎಂದು ಪೊಲೀಸರು ಪ್ರತಿ ಆಟೋಕ್ಕೆ 500 ದಂಡ ವಿ ಧಿಸಿದರು. ಅಲ್ಲದೇ, ಮತ್ತೆ ಇದು ಮರುಕಳಿಸಿದರೆ, ಆಟೋಗಳನ್ನು ಸೀಜ್‌ ಮಾಡುವುದಾಗಿ ಎಚ್ಚರಿಸಿದರು. ಅನಗತ್ಯವಾಗಿ ಓಡಾಡಿದ ಬೈಕ್‌ ಸವಾರರಿಗೂ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ನೀಡಿದ ವಿನಾಯಿತಿ ವೇಳೆಯ ಜನರ ಓಡಾಟ ಹೆಚ್ಚಾಗುತ್ತಿದೆ. ಈ ವೇಳೆ ಯಾರನ್ನು ತಡೆಯುವ ಗೋಜಿಗೆ ಹೋಗದ ಪೊಲೀಸರು 10 ಗಂಟೆ ನಂತರವೇ ಜನರನ್ನು ಚದುರಿಸಲು ಮುಂದಾಗುತ್ತಿದ್ದಾರೆ. ಇದರಿಂದ ವಿನಾಯಿತಿ ಸಮಯ 10ರಿಂದ 11 ಗಂಟೆವರೆಗೂ ಹೋಗುತ್ತಿದೆ.

ತೀರ ಅನಿವಾರ್ಯದ ಕೆಲಸಗಳಿಗೆ ಮಾತ್ರ ಹೊರಬರುವಂತೆ ತಿಳಿಸಿದಾಗ್ಯೂ ತೆರೆಮರೆಯಲ್ಲಿ ಎಲ್ಲ ರೀತಿಯ ವಹಿವಾಟು ನಡೆಯುತ್ತಿದೆ. ಅರ್ಧ ಶೆಟರ್‌ ತೆಗೆದು ವ್ಯಾಪಾರ-ವಹಿವಾಟು ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಕೆಲ ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ಬೇರೆಯವರು ಎಚ್ಚೆತ್ತಂತೆ ಕಾಣಿಸುತ್ತಿಲ್ಲ. ತರಕಾರಿ ಮಾರುಕಟ್ಟೆ, ಹೂ ಹಣ್ಣು, ದಿನಸಿ, ಪಟೇಲ್‌ ರಸ್ತೆ ಸೇರಿದಂತೆ ಇತರ ಕಡೆ ಬೆಳಗ್ಗೆ ಜನಸಂಚಾರ ಹೆಚ್ಚಾಗಿತ್ತು. ಗ್ರಾಮೀಣ ಭಾಗದ ಜನ ಕೂಡ ಬೆಳ್ಳಂಬೆಳಗ್ಗೆಯೇ ನಗರಗಳತ್ತ ಮುಖ ಮಾಡುತ್ತಿದ್ದು, 10 ಗಂಟೆಗೆಲ್ಲ ಕೆಲಸ ಮುಗಿಸಿಕೊಂಡು ಹಿಂದಿರುಗುತ್ತಿದ್ದಾರೆ.

ಕಚೇರಿ ಕೆಲಸಗಳು ಎಂದಿನಂತೆ ನಡೆಯುತ್ತಿದ್ದರೂ ಪೊಲೀಸರಿಗೆ ಸೂಕ್ತ ದಾಖಲೆ ನೀಡಬೇಕಿರುವ ಕಾರಣ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಹುತೇಕ ಸರ್ಕಾರಿ ಕಚೇರಿಗಳು ಜನರಿಲ್ಲದೇ ಭಣ ಭಣ ಎನ್ನುತ್ತಿವೆ.

ಟಾಪ್ ನ್ಯೂಸ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆ

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fghjhgfghjh

ವ್ಯಾಪಾರ ವಲಯಕ್ಕೆ ಕರ್ಫ್ಯೂ ಕಾರ್ಮೋಡ!

jjjjjjjjjjjjjjjjjjjjjjjjjjjjjjjjjj

ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ

rrrrrrrrrrrrrrrrrrrrrrrrrrrrrrrrrrrrrrrrrrr

ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ

gfdfghgf

ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಸಿದ ಕೋವಿಡ್!

jhgfdfgh

ಕಾಂಗ್ರೆಸ್‌ ನಿಂದ ಸೋಂಕಿತರಿಗೆ ಪೌಷ್ಟಿ ಕ ಆಹಾರ ವಿತರಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆ

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

Berkeley Mass Teaser

ಬರ್ಕ್ಲಿ ಮಾಸ್‌ ಟೀಸರ್‌

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.