Udayavni Special

ಐಐಐಟಿ ಬಾಕಿ ಕಾಮಗಾರಿ ಶೀಘ್ರ ಮುಗಿಸಿ

ಅಧಿಕಾರಿಗಳಿಗೆ ಡಿಸಿ ವೆಂಕಟೇಶಕುಮಾರ್‌ ನಿರ್ದೇಶನ

Team Udayavani, Oct 14, 2020, 4:57 PM IST

rc-tdy-2

ರಾಯಚೂರು: ಯರಮರಸ್‌ ಬಳಿಯ ಸರ್ಕಾರಿಇಂಜಿನಿಯರ್‌ ಕಾಲೇಜಿನಲ್ಲಿ ಐಐಐಟಿ ತರಗತಿಆರಂಭಿಸುವ ನಿಟ್ಟಿನಲ್ಲಿ ಬಾಕಿ ಕಾಮಗಾರಿತ್ವರಿತಗತಿಯಲ್ಲಿ ಮುಗಿಸುವಂತೆ ಸಂಬಂಧ ಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‌ ನಿರ್ದೇಶನ ನೀಡಿದರು.

ಯರಮರಸ್‌ ಬಳಿಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಿರ್ಮಿಸುತ್ತಿರುವ ಐಐಐಟಿಯ ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳಆರಂಭಕ್ಕೆ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐಐಐಟಿ ತರಗತಿ ಆರಂಭಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸುವಂತೆ ಈ ಹಿಂದೆಭೇಟಿ ನೀಡಿದ ತಜ್ಞರ ತಂಡ ಸೂಚಿಸಿತ್ತು. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿದಾಗ ಕೂಲಂಕಷವಾಗಿ ಪರಿಶೀಲಿಸಿ ಏನೆಲ್ಲ ಸೌಲಭ್ಯ ಅಗತ್ಯ ಎಂಬುದನ್ನು ತಿಳಿಸಿತ್ತು. ತರಗತಿಗಳು ಹಾಗೂ

ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅಗತ್ಯವಿರುವ ಸೌಕರ್ಯಗಳ ಪಟ್ಟಿ ಒದಗಿಸಿ ಅದರಂತೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ವೈ ಫೈ, ಯುಪಿಎಸ್‌, ಇನ್‌ವರ್ಟರ್‌, ಟಿ.ವಿ, ಗೀಸರ್‌, ಬೀದಿ ದೀಪಗಳು, ರಸ್ತೆ, ಚರಂಡಿ, 15 ಕೆ.ಬಿ. ಜನರೇಟರ್‌, ಬಾಸ್ಕೆಟ್‌ಬಾಲ್‌, ಫುಟ್‌ಬಾಲ್‌, ವಾಲಿಬಾಲ್‌ ಮೈದಾನ ಸಿದ್ಧಪಡಿಸಬೇಕು. ವಿದ್ಯಾರ್ಥಿನಿಲಯದ ಕಿಟಕಿಗಳಿಗೆ ಮೆಸ್‌ ಅಳವಡಿಕೆ, ಅಡುಗೆ ಕೋಣೆಯಲ್ಲಿ ಶುದ್ಧ ಕುಡಿವ ನೀರು ಪೂರೈಕೆ, ನಾಮಫಲಕಗಳು ಸೇರಿ ಕೂಡಲೇ ಬಾಕಿ ಉಳಿದಿರುವ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ, ಕ್ಯಾಷುಟೆಕ್‌, ಕೆಆರ್‌ಐಡಿಎಲ್‌ ಸಂಸ್ಥೆಗಳಿಗೆ ಕಾಮಗಾರಿ ಹೊಣೆ ನೀಡಿದ್ದು, ನಿಮಗೆ ಸಂಬಂ ಧಿಸಿದ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚಿಸಿದರು. ರಸ್ತೆ ಗುಂಡಿ ಮುಚ್ಚುವುದು, ವಿದ್ಯುತ್‌ ಪೂರೈಕೆಗೆ ಪರಿವರ್ತಕಗಳ ಅಳವಡಿಕೆ, ಮಳೆಗಾಲವಾದ ಕಾರಣ ಕೂಡಲೇ ಸಸಿ ನೆಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಬರುವ 15-20 ದಿನಗಳಲ್ಲಿ ಹೈದರಾಬಾದ್‌ನ ತಂಡವು ಆಗಮಿಸಿ ಇಲ್ಲಿ ಒದಗಿಸಿರುವ ಸೌಲಭ್ಯ ಕುರಿತು ಪರಿಶೀಲಿಸಲಿದೆ ಎಂದರು.

ಈ ವೇಳೆ ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಪಿಡಬ್ಲ್ಯುಡಿ ಇಇ ಚನ್ನಬಸಪ್ಪ ಮೆಕಾಲೆ, ಕ್ಯಾಷುಟೆಕ್‌ ನ ಶರಣಬಸಪ್ಪ ಪಟ್ಟೇದ್‌, ಕೆಆರ್‌ಡಿಎಲ್‌ನ ಕಾರ್ಯನಿರ್ವಾಹಕ ಇಂಜಿನಿಯರ್‌ ಅನಿಲ್‌ಕುಮಾರ್‌, ಕಾಲೇಜು ಪ್ರಾಚಾರ್ಯ ವೀರೇಶ್‌ ಇತರರಿದ್ದರು.

ಈ ತಾತ್ಕಾಲಿಕ ಕಟ್ಟಡದಲ್ಲಿ ತರಗತಿ ಪ್ರಾರಂಭಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಸೂಚಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತರಗತಿಗಳು ಇನ್ನು ಮುಂದೆ ಇಲ್ಲಿಯೇಪ್ರಾರಂಭವಾಗಲಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. – ಆರ್‌. ವೆಂಕಟೇಶಕುಮಾರ್‌, ಜಿಲ್ಲಾಧಿಕಾರಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

thunder

ವಿಜಯಪುರದಲ್ಲಿ ಮಳೆಯ ಅಬ್ಬರ: ಸಿಡಿಲು ಬಡಿದು ರೈತ ಸಾವು

punjab

ಪಂಜಾಬ್-ಡೆಲ್ಲಿ ಫೈಟ್: ಟಾಸ್ ಗೆದ್ದ ಶ್ರೇಯಸ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

puneeth-rajkumar

ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rc-tdy-2

ಸಂಬಂಧಿಕರು ಕೈ ಬಿಟ್ರೂ ಲಕ್ಷ್ಮವ್ವನ ಕೈ ಬಿಡಲಿಲ್ಲ ಕೃಷಿ!

rc-tdy-01

ಕೋವಿಡ್ ಜಾಗೃತಿ ವಹಿಸದಿದ್ದರೆ ಅಪಾಯ

RC-TDY-1

ರಕ್ಷಣಾ ತಂಡದೊಂದಿಗೆ ಸಹಕರಿಸಿ

ಭೀಮಾ ನದಿಗೆ ನೀರು ಹರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ತಪ್ಪು ಮಾಹಿತಿ: ಸವದಿ

ಭೀಮಾ ನದಿಗೆ ನೀರು ಹರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ತಪ್ಪು ಮಾಹಿತಿ: ಸವದಿ

rc-tdy-1

ಬಯಲು ಸೀಮೆಯಲ್ಲೂ ವೈಲ್ಡ್‌ಲೈಫ್‌ ಕಂಡ ಕಲಾವಿದ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

ಚಾಮರಾಜನಗರ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ; 15ಲಕ್ಷ ಮೌಲ್ಯದ ಗಾಂಜಾ ವಶ

ಚಾಮರಾಜನಗರ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ; 15ಲಕ್ಷ ಮೌಲ್ಯದ ಗಾಂಜಾ ವಶ

thunder

ವಿಜಯಪುರದಲ್ಲಿ ಮಳೆಯ ಅಬ್ಬರ: ಸಿಡಿಲು ಬಡಿದು ರೈತ ಸಾವು

sm-tdy-1

ಭೂಮಿ ವಾಪಸ್‌ ಪಡೆಯಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.