Udayavni Special

ನೀರಿಗಾಗಿ ಗ್ರಾಮಸ್ಥರಿಂದಲೇ ವಂತಿಗೆ

ಮನೆಗೆ 50 ರೂ.ನಂತೆ ಏಳು ತಿಂಗಳಿಗೆ 350 ರೂ.ವಂತೆಗೆ ಸಂಗ್ರಹಿಸಿ ತಮ್ಮ ದಾಹ ತೀರಿಸಿಕೊಂಡಿದ್ದಾರೆ.

Team Udayavani, Jan 25, 2021, 6:06 PM IST

ನೀರಿಗಾಗಿ ಗ್ರಾಮಸ್ಥರಿಂದಲೇ ವಂತಿಗೆ

ಸಿಂಧನೂರು: ಇಲ್ಲಿನ ನಿವಾಸಿಗಳು ತಮ್ಮ ಮನೆಗೆ ನೀರು ಬರಬೇಕೆಂದು ಬಯಿಸಿದರೆ ತಾವೇ ಹಣ ಕೊಟ್ಟು ವಾಟರ್‌ಮನ್‌ ನಿಯೋಜಿಸಿಕೊಳ್ಳಬೇಕು. ತಿಂಗಳಿಗಿಷ್ಟು ಹಣ ಕೊಟ್ಟರಷ್ಟೇ ಇಲ್ಲಿನ ಜನ ನೀರು ಕುಡಿಯಬಹುದು. ಹೌದು, ತಾಲೂಕಿನ ಜಾಲಿಹಾಳ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಗ್ರಾ.ಪಂ ಸುಪರ್ದಿಗೆ ಬರುವ ತಾಯಮ್ಮ ಕ್ಯಾಂಪ್‌ ಸಮೀಪದ ರಾಜೀವ್‌ ನಗರ ಕ್ಯಾಂಪ್‌ನಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ.

ಕ್ಯಾಂಪ್‌ನಲ್ಲಿ ನಿರ್ಮಾಣವಾಗಿರುವ ಕೆರೆಯಿಂದ ಗ್ರಾಮಕ್ಕೆ ನೀರು ಪೂರೈಸಲು ಅವಕಾಶವಿದ್ದರೂ ಈ ಕೆಲಸ ಮಾಡುವ ವ್ಯಕ್ತಿಗೆ ಮನೆಗೆ 50 ರೂ.ನಂತೆ ಏಳು ತಿಂಗಳಿಗೆ 350 ರೂ.ವಂತೆಗೆ ಸಂಗ್ರಹಿಸಿ ತಮ್ಮ ದಾಹ ತೀರಿಸಿಕೊಂಡಿದ್ದಾರೆ. ಈ ಪ್ರಯತ್ನ ಹೊರೆಯಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ಕೈ ಬಿಟ್ಟಿದ್ದು, ಇದೀಗ ಕಾಲುವೆ ನೀರೇ ಗತಿಯಾಗಿದೆ.

ಏನಿದು ಸಮಸ್ಯೆ?: ಈ ಮೊದಲು ತುರುವಿಹಾಳ ಮೂಲಕ ಬಹುಗ್ರಾಮಗಳಿಗೆ ನೀರು ಪೂರೈಸಲು ಹಾಕಿದ ಪೈಪ್‌ಲೈನ್‌ ಗೆ ಸಂಪರ್ಕ ಕಲ್ಪಿಸಿ ರಾಜೀವ್‌ ನಗರ ಕ್ಯಾಂಪ್‌ಗೆ ನೀರು ಕೊಡಲಾಗಿತ್ತು. ಇಲ್ಲಿನ 65 ಮನೆಗಳ 360 ಮತದಾರಿರುವ ಕುಟುಂಬಗಳಿಗೆ ಈ ಕ್ರಮ ಆಸರೆಯಾಗಿತ್ತು. ಬಹುಗ್ರಾಮ ಯೋಜನೆ ವ್ಯಾಪ್ತಿಗೆ ಕ್ಯಾಂಪ್‌ ಬರುವುದಿಲ್ಲವೆಂದು ಪಂಚಾಯಿತಿಯಿಂದ ನೀರಿನ ಪೂರೈಕೆ ಸ್ಥಗಿತಗೊಳಿಸಲಾಯಿತು.

ಬಳಿಕ ಸಮಸ್ಯೆಗೆ ಸಿಲುಕಿದ ಸ್ಥಳೀಯರು ತಾವೇ  ನಿರ್ಮಿಸಿಕೊಂಡ ಕೆರೆಯ ಮೂಲಕ ಗ್ರಾಮಕ್ಕೆ ನೀರು ಪಡೆಯುವ ಪ್ರಯತ್ನ ಆರಂಭಿಸಿದರು. ಆದರೆ, ಇದಕ್ಕೆ ಗ್ರಾಪಂ ಸಹಕರಿಸದ ಹಿನ್ನೆಲೆಯಲ್ಲಿ ಮನೆ-ಮನೆಯಿಂದ ಹಣ ಸಂಗ್ರಹಿಸಿ ವ್ಯಕ್ತಿಯೊಬ್ಬರಿಗೆ ಸಂಬಳ ನೀಡಿ, ನೀರಿನ ಅಭಾವ ನೀಗಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಎಲ್ಲವೂ ಕೈ ಕೊಟ್ಟವು: ತಾಯಮ್ಮ ಕ್ಯಾಂಪ್‌ ವ್ಯಾಪ್ತಿಯಲ್ಲಿನ ಗ್ರಾ.ಪಂ ಸದಸ್ಯರನ್ನು ಹೊಂದಿದ ಇಲ್ಲಿನ ಕ್ಯಾಂಪ್‌ ಪಂಚಾಯಿತಿ ವ್ಯಾಪ್ತಿಗೆ ಸೇರಿಲ್ಲವೆಂಬ ವಾದ ಗ್ರಾಪಂನದು. ಸ್ಥಳೀಯರ ಹೋರಾಟಕ್ಕೆ ಧ್ವನಿಯಾದ ಗ್ರಾ.ಪಂ ಸದಸ್ಯ ಟಿ.ಯಲ್ಲಪ್ಪ, ಸಹಭಾಗಿತ್ವದಲ್ಲಿ ಕೆಲವು ಸಮಸ್ಯೆ ಪರಿಹರಿಸಿಕೊಳ್ಳುವ ಮಾರ್ಗ ತುಳಿದಿದ್ದಾರೆ. ತಾಯಮ್ಮ ಕ್ಯಾಂಪ್‌ನಲ್ಲಿ ನಿರ್ಮಿಸಲಾದ 22 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕದಲ್ಲಿ ಯಂತ್ರಗಳೇ ಇಲ್ಲ. ಎರಡು ವರ್ಷ ಗತಿಸಿದರೂ ಅದರಿಂದ ನಯಾಪೈಸೆ ಪ್ರಯೋಜನವಾಗಿಲ್ಲ. ನೀರಿಗಾಗಿ ಏನೆಲ್ಲ ಹಣ ಖರ್ಚಾದರೂ ಉಪಯೋಗವಿಲ್ಲದಂತಾದ ಪರಿಣಾಮ ಗ್ರಾಮಸ್ಥರೇ ಹಣ ನೀಡಿ, ವಾಟರ್‌ಮನ್‌ ನೇಮಿಸಿಕೊಂಡು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಮಾರ್ಗ ಕಂಡುಕೊಂಡಿದ್ದಾರೆ.

ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ಗೆ ತರಾಟೆ
ರಾಜೀವ್‌ ನಗರ ಕ್ಯಾಂಪ್‌ನಲ್ಲಿ 25 ಲಕ್ಷ ರೂ. ವೆಚ್ಚದ 522 ಮೀಟರ್‌ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ತೆರಳಿದ ವೇಳೆ ಭಾನುವಾರ ಶಾಸಕ ವೆಂಕಟರಾವ್‌ ನಾಡಗೌಡ ಅವರಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಾಗ, ಪೈಪ್‌ಲೈನ್‌ ಇದ್ದರೂ ಊರಿನ ಜನಕ್ಕೆ ಯಾಕೆ ಪೂರೈಸುತ್ತಿಲ್ಲ. ನಾನು ಕೇಳಿದಾಗ ಇಂತಹ ಸಮಸ್ಯೆಗಳನ್ನು ಯಾಕೆ ಹೇಳುವುದಿಲ್ಲ ಎಂದು ಜಿ.ಪಂ ಎಇಇ ಪಾಂಡುರಂಗ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಸಂಗವೂ ನಡೆಯಿತು.

ಗ್ರಾಮಕ್ಕೆ ನೀರು ಬೇಕೆಂದು ಎಲ್ಲರಿಗೂ ಹೇಳಿ ಬೇಸತ್ತಿದ್ದೇವೆ. ಯಾರೂ ಧ್ವನಿಯಾಗಿಲ್ಲ. ತುರುವಿಹಾಳ ಮಾರ್ಗದ ಪೈಪ್‌ಲೈನ್‌ನಿಂದ ಬರುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ. ಈಗ ನಾವೇ ಹಣ ಕೊಟ್ಟು ವಾಟರ್‌ಮನ್‌ ನಿಯೋಜಿಸಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದೇವೆ.
ಗೌಡಪ್ಪ ಜಾಲಿಹಾಳ,
ದೊಡ್ಡಪ್ಪ ಜುಮಲಾಪುರ,
ಸ್ಥಳೀಯರು

*ಯಮನಪ್ಪಪವಾರ

ಟಾಪ್ ನ್ಯೂಸ್

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರ ಆತಂಕ!

ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ!

ದಂಪತಿ ಅಡ್ಡಗಟ್ಟಿ ಚಿನ್ನದ ಸರ ದೋಚಿದ ದುಷ್ಕರ್ಮಿಗಳು : ಒಂದೇ ವಾರದಲ್ಲಿ ನಡೆದ 5 ನೇ ಪ್ರಕರಣ

ದಂಪತಿಗಳನ್ನು ತಡೆದು ಚಿನ್ನದ ಸರ ದೋಚಿದ ದುಷ್ಕರ್ಮಿಗಳು: ಒಂದು ವಾರದಲ್ಲಿ ನಡೆದ 5 ನೇ ಪ್ರಕರಣ

Murder

ಯುವತಿಯ ರುಂಡಮುಂಡ ಕತ್ತರಿಸಿ ಕೊಲೆ ಪ್ರಕರಣ : ಐದು ತಿಂಗಳ ಬಳಿಕ ಆರೋಪಿಗಳ ಸೆರೆ

ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಯಾರಿಗೆ ಸೋಲುವ ಭಯ ಇರುತ್ತೋ ಅಂಥವರಿಗೆ ಗೆಲುವು ಸಿಗಲ್ಲ: ಬೊಮ್ಮಾಯಿ

ಯಾರಿಗೆ ಸೋಲುವ ಭಯ ಇರುತ್ತೋ ಅಂಥವರಿಗೆ ಗೆಲುವು ಸಿಗಲ್ಲ: ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

article on budget

ಹಳೇ ಘೋಷಣೆಗೆ ಬೇಕಿದೆ ಅನುದಾನ ಟಾನಿಕ್‌

ಸಮರ್ಪಕ ನೀರು ಹರಿಸದಿದ್ದ ರೆ ಉಗ್ರ ಹೋರಾಟ

ಸಮರ್ಪಕ ನೀರು ಹರಿಸದಿದ್ದ ರೆ ಉಗ್ರ ಹೋರಾಟ

ಹೋರಾಟಕ್ಕೆ 100 ದಿನ: ಕಪ್ಪುಪಟ್ಟಿ ಧರಿಸಿ ಆಕ್ರೋಶ

ಹೋರಾಟಕ್ಕೆ 100 ದಿನ: ಕಪ್ಪುಪಟ್ಟಿ ಧರಿಸಿ ಆಕ್ರೋಶ

ಕಾಣೆಯಾಗಿದ್ದ ಮಾಜಿ‌ ಶಾಸಕರ ಮಮ್ಮೊಕ್ಕಳು ಶವವಾಗಿ ಪತ್ತೆ!

ಕಾಣೆಯಾಗಿದ್ದ ಮಾಜಿ‌ ಶಾಸಕರ ಮೊಮ್ಮೊಕ್ಕಳು ಶವವಾಗಿ ಪತ್ತೆ!

PDO

ಜಲಕ್ಷಾಮಕ್ಕೆ ಪಿಡಿಒಗಳೇ ಹೊಣೆ: ನಾಡಗೌಡ

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರ ಆತಂಕ!

ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ!

ದಂಪತಿ ಅಡ್ಡಗಟ್ಟಿ ಚಿನ್ನದ ಸರ ದೋಚಿದ ದುಷ್ಕರ್ಮಿಗಳು : ಒಂದೇ ವಾರದಲ್ಲಿ ನಡೆದ 5 ನೇ ಪ್ರಕರಣ

ದಂಪತಿಗಳನ್ನು ತಡೆದು ಚಿನ್ನದ ಸರ ದೋಚಿದ ದುಷ್ಕರ್ಮಿಗಳು: ಒಂದು ವಾರದಲ್ಲಿ ನಡೆದ 5 ನೇ ಪ್ರಕರಣ

Murder

ಯುವತಿಯ ರುಂಡಮುಂಡ ಕತ್ತರಿಸಿ ಕೊಲೆ ಪ್ರಕರಣ : ಐದು ತಿಂಗಳ ಬಳಿಕ ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.