Udayavni Special

ಮಸ್ಕಿಯಲ್ಲಿ ಸರಕಾರಿ ಜಮೀನೇ ಒತ್ತುವರಿ!

ಭೂಮಾಪನ ಇಲಾಖೆ ಸರ್ವೇ ಬಳಿಕ ಪತ್ತೆ ; ಭೂಮಿ ವಾಪಸ್‌ ಪಡೆದ ಕಂದಾಯ ಇಲಾಖೆ ಅಧಿಕಾರಿಗಳು

Team Udayavani, Sep 5, 2021, 4:33 PM IST

ಮಸ್ಕಿಯಲ್ಲಿ ಸರಕಾರಿ ಜಮೀನೇ ಒತ್ತುವರಿ!

ಮಸ್ಕಿ: ಪ್ರಭಾವಿ ವ್ಯಕ್ತಿಗಳಿಂದಲೇ ಒತ್ತುವರಿಯಾಗಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಸರಕಾರಿ ಭೂಮಿಯನ್ನು ಅಧಿಕಾರಿಗಳು ವಾಪಸ್‌ ಪಡೆದು
ಹದ್ದುಬಸ್ತ್ ಮಾಡಿಕೊಂಡಿದ್ದಾರೆ.

ಹೌದು. ಮೆದಕಿನಾಳ, ಚಿಕ್ಕಅಂತರಗಂಗಿ ವ್ಯಾಪ್ತಿಯಲ್ಲಿ ಹತ್ತಾರು ಎಕರೆ ಸರಕಾರಿ ಗೈರಾಣಿ ಜಮೀನು ಇದ್ದು, ಇಲ್ಲಿ ಹಲವು ಪ್ರಭಾವಿಗಳು
ಜಮೀನನ್ನು ಒತ್ತುವರಿ ಮಾಡಿಕೊಂಡು ಪಟ್ಟಾ ಭೂಮಿಯಾಗಿಸಿಕೊಳ್ಳಲು ಹುನ್ನಾರ ನಡೆಸಿದ್ದರು. ಈ ಬಗ್ಗೆ ಕರ್ನಾಟಕ ರೈತ ಸಂಘ ಇತ್ತೀಚೆಗೆ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ದೂರಿನನ್ವಯ ಕಂದಾಯ ಇಲಾಖೆ ಅ ಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ, ಪಂಚನಾಮೆ ನಡೆಸಿದ ಬಳಿಕ ಮೇಲ್ನೋಟಕ್ಕೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು ಕಂಡು ಬಂದಿತ್ತು. ನಿಖರ ಮಾಹಿತಿಗಾಗಿ ಭೂಮಾಪನ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಸರ್ವೇ ನಂ.125ರಲ್ಲಿನ ಸರಕಾರಿ ಜಮೀನಿನಲ್ಲಿ 1.36 ಎಕರೆ ಜಮೀನು ಒತ್ತುವರಿಯಾದ ಅಂಶ ಬಯಲಿಗೆ ಬಂದಿದೆ.

ಆಗಿದ್ದೇನು?: ಮಸ್ಕಿ ಪಟ್ಟಣದ ಖ್ಯಾತ ವೈದ್ಯರಿಗೆ ಸೇರಿದ ಪಟ್ಟಾ ಜಮೀನು ಮೆದಕಿನಾಳ ಸೀಮಾ ವ್ಯಾಪ್ತಿಯಲ್ಲಿ ಸೇರಿದೆ. ಆ ವೈದ್ಯರಿಗೆ ಸೇರಿದ 12 ಎಕರೆ ಜಮೀನಿದ್ದು, ಇದೇ ಜಮೀನಿನ ಗಡಿಗೆ ಹೊಂದಿಕೊಂಡಂತೆ ಇರುವ 1.36 ಎಕರೆ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ಹಾಕಿ, ಗಿಡಮರ ಬೆಳೆಸಲು ಹಾಕಲು ಗುಂಡಿ ತೋಡಲಾಗಿತ್ತು. ಕಂದಾಯ ಇಲಾಖೆ ಅಧಿ ಕಾರಿಗಳ ಪರಿಶೀಲನೆ ಬಳಿಕ ಈ ಅಂಶ ಪತ್ತೆಯಾಗುತ್ತಿದ್ದಂತೆ ನೋಟಿಸ್‌ ಜಾರಿ ಮಾಡಿ, ಒತ್ತುವರಿ ಜಮೀನು ತೆರವುಗೊಳಿಸಿ ಕಂದಾಯ ಇಲಾಖೆ ವಶಕ್ಕೆ ಪಡೆದಿದೆ ಅಲ್ಲದೇ ಸುತ್ತಲೂ ಹಾಕಿದ್ದ ಬಾಂಡ್‌ಕಲ್ಲು, ತಂತಿ ಬೇಲಿ ತೆರವು ಮಾಡಿ, ಸಸಿ ನೆಡಲು ಅಗೆದ ಗುಂಡಿಗಳನ್ನು ಮುಚ್ಚಿ, ಹದ್ದುಬಸ್ತು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅಕ್ಷತ್ ಸಾಯಿನಾಥ್ ಅವರಿಗೆ ಸನ್ಮಾನ

ಇದು ಸ್ಯಾಂಪಲ್‌?
ಮಸ್ಕಿ ತಾಲೂಕಿನ ಮೆದಕಿನಾಳ, ಅಂತರಗಂಗಿ ಸೇರಿ ಈ ಭಾಗದಲ್ಲಿ ನೂರಾರು ಎಕರೆ ಸರಕಾರಿ ಜಮೀನು ಇದ್ದು, ಇಲ್ಲಿ ನಿರಂತರ ಒತ್ತುವರಿ ನಡೆಯುತ್ತಿದೆ. ಮರಂ ಕ್ವಾರಿ ಆರಂಭಿಸುವುದಕ್ಕಾಗಿ ಇಲ್ಲಿ ಸರಕಾರಿ ಜಮೀನು ಒತ್ತುವರಿ ಸಾಮಾನ್ಯವಾಗಿದೆ. ಕಂದಾಯ ಇಲಾಖೆಯಿಂದ ಸ್ವಯಂ ಆಗಿ ಸರ್ವೇ ನಡೆಸಿದರೆ ಇಂತಹ ಹಲವು ಪ್ರಕರಣ ಬಯಲಿಗೆ ಬರಲಿದೆ. ಮತ್ತೂಂದು ಅಂಶವೆಂದರೆ ಜಮೀನು ಒತ್ತುವರಿ ಅಂಶ ಪತ್ತೆಯಾದರೂ ಒತ್ತುವರಿದಾರರ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಇಲ್ಲಿ ಸರಕಾರಿ ಜಮೀನು ಯಾರೂ ಬೇಕಾದರೂ ಒತ್ತುವರಿ
ಮಾಡುವ ಅಂಶ ನಡೆಯುತ್ತಲೇ ಇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಸರ್ವೇ ನಂಬರ್‌ 125ರಲ್ಲಿ ಸರಕಾರಿ ಜಮೀನು ಒತ್ತುವರಿ ದೃಢವಾಗಿದೆ. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪ್ರಭಾವಕ್ಕೆ ಹೆದರಿ ಅರೆಬರೆ ವರದಿ ನೀಡಿದ್ದಾರೆ. ಇಲ್ಲಿ ಹೆಚ್ಚಿನ ಜಮೀನು ಒತ್ತುವರಿಯಾಗಿದೆ. ಆದರೆ ವರದಿ ಸಮರ್ಪಕವಾಗಿ ನೀಡಿಲ್ಲ. ಇನ್ನು ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಬೇರೆ ತಾಲೂಕಿನ ಅಧಿ  ಕಾರಿಗಳನ್ನು ಪರಿಶೀಲನೆಗೆ ನೇಮಕ ಮಾಡಿ ಈ ಬಗ್ಗೆ ನೈಜ ವರದಿ ಪಡೆದು ಕ್ರಮ ಕೈಗೊಳ್ಳಬೇಕು.
-ಸಂತೋಷ ಹಿರೇದಿನ್ನಿ, ದೂರುದಾರರು.

ಮೆದಕಿನಾಳ ಸೀಮಾ ವ್ಯಾಪ್ತಿಯ ಸರ್ವೇ ನಂ.125ರಲ್ಲಿ ಸರಕಾರಿ ಜಮೀನು ಒತ್ತುವರಿ ಬಗ್ಗೆ ದೂರು ಬಂದಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿ, ಒತ್ತುವರಿ ಭೂಮಿತೆರವು ಮಾಡಿ ಹದ್ದುಬಸ್ತ್ ಮಾಡಲಾಗಿದೆ.
-ಕವಿತಾ, ಆರ್‌.ತಹಶೀಲ್ದಾರ್‌, ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

fggrtrt

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

gdteter

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

cxgfstet

ಕೋವಿಡ್: ರಾಜ್ಯದಲ್ಲಿಂದು 1108 ಹೊಸ ಪ್ರಕರಣ | 809 ಸೋಂಕಿತರು ಗುಣಮುಖ  

frtt

ನಾಯಿ ಬೇಟೆಗೆ ಬಂದು ಬೋನಿಗೆ ಬಿದ್ದ ಚಿರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕೀಯದೇಟಿಗೆ ಕಾಣೆಯಾಗ್ತಿವೆ ಅಡಿಗಲ್ಲುಗಳು

ರಾಜಕೀಯದೇಟಿಗೆ ಕಾಣೆಯಾಗ್ತಿವೆ ಅಡಿಗಲ್ಲುಗಳು

ಕೋವಿಡ್‌ ಕೃಪೆಗೆ ಡಿಗ್ರಿ ಕಾಲೇಜ್‌ ಹೌಸ್‌ಫುಲ್‌! ನೂತನ ಶಿಕ್ಷಣ ನೀತಿಯ ಆಯ್ಕೆ ಗೊಂದಲ

ಕೋವಿಡ್‌ ಕೃಪೆಗೆ ಡಿಗ್ರಿ ಕಾಲೇಜ್‌ ಹೌಸ್‌ಫುಲ್‌! ನೂತನ ಶಿಕ್ಷಣ ನೀತಿಯ ಆಯ್ಕೆ ಗೊಂದಲ

ಉಸ್ತುವಾರಿ ಬದಲಾವಣೆಗೆ ಸುಸ್ತಾದ ರಾಯಚೂರು!

ಉಸ್ತುವಾರಿ ಬದಲಾವಣೆಗೆ ಸುಸ್ತಾದ ರಾಯಚೂರು!

cfgdrtgr5

ಗೋಪಿ ಚಂದನದಲ್ಲಿ ರೂಪ ತಳೆದ ವಿಘ್ನೇಶ್ವರ

hyht

ಕಾಮುಕರ ಕ್ರೌರ್ಯಕ್ಕೆ ಮಾನಸಿಕ ಅಸ್ವಸ್ಥೆ ಗರ್ಭಿಣಿ

MUST WATCH

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

udayavani youtube

ಪತ್ರಡೆ ತಯಾರಿಸುವ ಎಲೆಯಲ್ಲಿದೆ ರೋಗ ನಿರೋಧಕ ಶಕ್ತಿ !|

ಹೊಸ ಸೇರ್ಪಡೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

fggrtrt

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

gdteter

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.