ಸಪ್ಪಾದ ಹಸಿ ಮೆಣಸಿನಕಾಯಿ


Team Udayavani, Oct 11, 2021, 1:15 PM IST

Untitled-8

ದೇವದುರ್ಗ: ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ಕೆಜಿಗೆ 7ರೂ. ಮಾರಾಟವಾಗುತ್ತಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ.

ಹಸಿ ಮೆಣಸಿನಕಾಯಿಗೆ ಗ್ರಾಹಕರು ವಾರದ ಸಂತೆ, ತರಕಾರಿ ಮಾರುಕಟ್ಟೆಯಲ್ಲಿ ಕೆಜಿಗೆ ನಾಲ್ಕೈದು ರೂ. ಕೇಳುವುದರಿಂದ ರೈತರಿಗೆ ದಿಗಿಲು ಬಡದಿದೆ. ಸಂಜೆಯಾಗುತ್ತಿದ್ದಂತೆ ವ್ಯಾಪಾರಸ್ಥರೂ ಕೇಳಿದ ದರಕ್ಕೆ ಅನಿವಾರ್ಯ ಮಾರುವಂತಹ ಸ್ಥಿತಿ ಇದೆ. ಕೆಲ ರೈತರು ಮಹಾರಾಷ್ಟ್ರದ ಪುಣೆಗೆ ಹಸಿ ಮೆಣಸಿನಕಾಯಿ ಒಯ್ಯುತ್ತಿದ್ದು, ಪುಣೆಯಲ್ಲಿ ಕೆಜಿಗೆ 18ರಿಂದ 20ರೂ ಮಾರಾಟವಾಗುತ್ತಿದೆ.

ಪಟ್ಟಣ ಸೇರಿ ತಾಲೂಕಿನಾದ್ಯಂತ ಮುಂಗಾರಿನಲ್ಲಿ ಎರಡೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಒಂದು ಎಕರೆಗೆ ಕನಿಷ್ಠ 30ರಿಂದ 35 ಸಾವಿರ ರೂ. ವೆಚ್ಚ ಮಾಡಲಾಗಿದೆ. ಹಾಕಿದ ಹಣಕ್ಕಿಂತ ಕೂಲಿ ಕಾರ್ಮಿಕರಿಗೆ ಕೊಟ್ಟ ಹಣವೂ ಬಾರದಂತಾಗಿದೆ. ಜೂನ್‌ ತಿಂಗಳು ನಾರು ಸಸಿ ಮಾಡಿ ಮೆಣಸಿನಕಾಯಿ ಬಿತ್ತನೆ ಮಾಡಿದ ನೂರಾರು ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ.

ಇದನ್ನೂ ಓದಿ: ಅಕ್ರಮ ಮರಂ ಸಾಗಣೆ ಮತ್ತೆ ಶುರು

ತಾಲೂಕಿನಲ್ಲಿ ಹಸಿ ಮೆಣಸಿನಕಾಯಿ, ಭತ್ತ, ಹತ್ತಿ ಅತಿ ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಕೊಪ್ಪರು, ಗಬ್ಬೂರು, ಮಸರಕಲ್‌, ಸುಂಕೇಶ್ವರಹಾಳ, ರಾಮನಾಳ, ಯಮನಾಳ ಸೇರಿ ಇತರೆ ಗ್ರಾಮಗಳಲ್ಲಿ ಹಸಿ ಮೆಣಸಿನಕಾಯಿ ಅತಿ ಹೆಚ್ಚು ಬೆಳೆಯಲಾಗಿದೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ಹೆಚ್ಚು ಹಸಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಇದೀಗ ಹತ್ತಿಗೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 9ರಿಂದ 10 ಸಾವಿರ ರೂ. ಬೆಲೆ ಇದೆ. ಹತ್ತಿ ಬಿಡಿಸಿ ಮಾರುಕಟ್ಟೆಗೆ ಬರುತ್ತಿದ್ದಂತೆ ಏಕಾಏಕಿ ದರ ಕುಸಿದು ಹೋಗುವುದು ರೈತರಿಗೆ ಹೊಸದೇನಲ್ಲ. ಈ ಬಾರಿ ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ನೂರಾರು ರೈತರು ತೊಂದರೆ ಅನುಭವಿಸುವಂತಾಗಿದೆ.

ಒಂದು ಎಕರೆಗೆ 30 ರಿಂದ 40 ಸಾವಿರವರೆಗೆ ವೆಚ್ಚ ಭರಿಸುವ ರೈತರಿಗೆ ಬೆಲೆ ಕೈ ಹಿಡಿಯುತ್ತಿಲ್ಲ. ಹೀಗಾಗಿ ನಷ್ಟದಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರಾದ ಬಸಲಿಂಗ, ರಾಮಮೂರ್ತಿ.

ತಾಲೂಕಿನಾದ್ಯಂತ ಬೆಳೆದ ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದಂತಾಗಿದೆ. ವಾರದ ಸಂತೆಯಲ್ಲಿ 7ರೂ. ಕೆಜಿಗೆ ಮಾರಾಟವಾಗುತ್ತಿದೆ. ಇಂತಹ ಸಮಸ್ಯೆಗಳಿಂದ ರೈತರು ನೊಂದಿದ್ದಾರೆ ಎನ್ನುತ್ತಾರೆ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಕಳೆದ ವರ್ಷಕ್ಕಿಂತ ಈವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ.  ಭೀಮರಾವ್‌ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ

ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ.

ಭೀಮರಾವ್‌ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ

ಹಸಿ ಮೆಣಸಿನಕಾಯಿ ಬೆಳೆಗೆ ಬೆಲೆ ಇಲ್ಲ ಕೆಜಿಗೆ 7ರೂ. ಮಾರಾಟ ನಡೆದಿದೆ. ಮಹಾರಾಷ್ಟ್ರದಲ್ಲಿ 18ರಿಂದ 20ರೂ. ಕೆಜಿ ಇದ್ದುದರಿಂದ ಸ್ವಲ್ಪ ಕೂಲಿ ಹಣವಾದರೂ ಬರಲಿ ಎಂದು ಪುಣೆಗೆ ಹೊರಟಿದ್ದೇವೆ.

ಮುದುಕಪ್ಪ, ನಾಗಪ್ಪ, ಅಮರಾಪುರ ಗ್ರಾಮದ ರೈತರು

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11addmission

ಶಾಲೆಗೆ ಹೋಗೋಣ ಬನ್ನಿರೋ…!

17pipe

ಬೇಕಾಬಿಟ್ಟಿ ಪೈಪ್‌ಲೈನ್‌ ಕಾಮಗಾರಿಗೆ ವ್ಯಾಪಕ ಆಕ್ರೋಶ

16vaccine

ಮೈಮೇಲೆ ದೇವ್ರು ಬಂದ್ರೂ ನಿಲ್ಲದ ಕೊರೊನಾ ಲಸಿಕೆ ನೀಡಿಕೆ!

14satyagraha

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತರ ಭೇಟಿ

13former

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.