ಹುಲಿಗುಡ್ಡ-ಪರಾಪುರ ಕೆರೆ ನೀರು ಪೋಲು

ಜಮೀನುಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ

Team Udayavani, Oct 31, 2020, 5:47 PM IST

ಹುಲಿಗುಡ್ಡ-ಪರಾಪುರ ಕೆರೆ ನೀರು ಪೋಲು

ದೇವದುರ್ಗ: ತಾಲೂಕಿನ ಹುಲಿಗುಡ್ಡ, ಪರಾಪುರ ಗ್ರಾಮದ ಕೆರೆಯ ನೀರು ನವೀಲಗುಡ್ಡ ಗ್ರಾಮದ ಹಳ್ಳದ ಮಾರ್ಗವಾಗಿ ಕೃಷ್ಣಾನದಿಗೆ ಹರಿದು ಹೋಗುತ್ತಿವೆ.

ಇದರಿಂದ ಹತ್ತಾರೂ ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದ್ದು, ನದಿಗೆ ಪೋಲಾಗುತ್ತಿರುವ ನೀರು ಜಮೀನುಗಳಿಗೆ ನೀರುಣಿಸುವ ಯೋಜನೆ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಬೇಸಿಗೆ ಅವಧಿ  ಯಲ್ಲೋ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತವೆ. ಕೆರೆಯಿಂದ ಪೋಲಾಗುತ್ತಿರುವ ನೀರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉದ್ದೇಶಿಸಿ ಯೋಜನೆಯೊಂದು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸುವ ಯೋಜನೆ ಕ್ರಮ ವಹಿಸುವಲ್ಲಿ ಎಡವಿದ್ದಾರೆ. ನವೀಲಗುಡ್ಡ, ಜಂಬಲದಿನ್ನಿ ಎರಡು ಗ್ರಾಮದ ಮಧ್ಯ ದೊಡ್ಡ ಪ್ರಮಾಣದ ಹಳ್ಳ ಹರಿಯುತ್ತಿದೆ.

ನದಿಗೆ ಪೋಲಾಗುತ್ತಿರುವ ನೀರನ್ನು ಸದ್ಬಳಕೆಮಾಡಿಕೊಂಡು, ನೀರಾವರಿ ವಂಚಿತ ಜಮೀನುಗಳಿಗೆ ನೀರುಣಿಸುವ ಯೋಜನೆಗೆ ಮಂಕು ಕವಿದಿದೆ. ಈ ಭಾಗದಲ್ಲಿ ಏತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಸರಕಾರ ಮಟ್ಟದಲ್ಲಿ ಮುಂದುವರಿದಿದೆ ಎನ್ನಲಾಗುತ್ತಿದೆ.

ವಂಚಿತ ಹಳ್ಳಿಗಳು: ತಾಲೂಕಿನ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯ ವಂಚಿತಗೊಂಡಿವೆ. ಮಳೆ, ಹಳ್ಳದ ನೀರು ಬೋರ್‌ವೆಲ್‌ ನಂಬಿ ರೈತರು ಕೃಷಿ ಚಟುವಟಿಕೆ ಅವಲಂಬಿತರಾಗಿದ್ದಾರೆ.

ಆಗಾಗ ಮಳೆರಾಯನ ಮುನಿಸು ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ವಿಳಂಬ ಹೀಗೆ ಒಂದಿಲ್ಲೊಂದು ಈ ಭಾಗದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಹೇರುಂಡಿ, ಗಾಜಲದಿನ್ನಿ, ಮುಕ್ಕನಾಳ, ಅಮರಾಪೂರು, ಉಣಿಚಮರದೊಡ್ಡಿ, ಅಂಜಳ, ಜಂಬಲದಿನ್ನಿ, ಕರಿಗುಡ್ಡ ಸೀಮಾಂತರವ್ಯಾಪ್ತಿಯ ಹಳ್ಳದ ಆಸುಪಾಸಿನ ಸಾವಿರಾರೂ ಎಕರೆ ಪ್ರದೇಶದಲ್ಲಿರುವ ಜಮೀನುಗಳಿಗೆ ಹಳ್ಳದ ನೀರುಣಿಸುವ ಯೋಜನೆ ಕೈಗೊಳ್ಳಬೇಕಾಗಿತ್ತು. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ರೈತರು ಗೈರಾಣು ಭೂಮಿ ಸಾಗುವಳಿ ಮಾಡಲಾಗುತ್ತಿದೆ.

ಕೃಷಿ ಚಟುವಟಿಕೆ: ಹುಲಿಗುಡ್ಡ, ಪರಾಪುರ ಕೆರೆಯಿಂದ ಹಳ್ಳದ ಮೂಲಕ ಕೃಷ್ಣಾನದಿಗೆ ನೀರು ಪೋಲಾಗುತ್ತಿವೆ. ಹಳ್ಳದ ಅನುಪಾಸಿನಲ್ಲಿರುವ ನೂರಾರು ಹೆಕ್ಟೇರ್‌ ಪ್ರದೇಶದ ಜಮೀನಿನ ರೈತರು ಬಿತ್ತನೆ ಸಂದರ್ಭ ಬೆಳೆಗಳಿಗೆ ಮೋಟರ್‌ನಿಂದ ಹಳ್ಳದ ನೀರು ಸದ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಪೋಲಾಗುವ ನೀರನ್ನು ಬಳಕೆ ಮಾಡಿಕೊಂಡು, ನೀರಾವರಿಸೌಲಭ್ಯ ವಂಚಿತ ಜಮೀನುಗಳಿಗೆ ನೀರುಣಿಸುವ ಯೋಜನೆಗೆ ಅಧಿಕಾರಿಗಳು ಮುಂದಾಗಬೇಕಿತ್ತು. ಕೆಲ ರೈತರು ಬಾಡಿಗೆ ಮೋಟರ್‌ಗಳು ತಂದು ಹಳ್ಳದ ನೀರು ಬೆಳೆಗಳಿಗೆ ಬಳಕೆ ಮಾಡಲಾಗುತ್ತಿದೆ.

ಜಾನುವಾರುಗಳಿಗೆ ಕುಡಿಯಲು ಹಳ್ಳದ ನೀರು ಅನುಕೂಲವಾಗಿದೆ. ಎಸ್‌ಸಿ ಎಸ್‌ಟಿ ಯೋಜನೆ: ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರ ಅಭಿವೃದ್ಧಿಗಾಗಿಹರಿಜನ ಗಿರಿಜನ ಕಲ್ಯಾಣ ಯೋಜನೆಅಡಿಯಲ್ಲಿ ನೂರಾರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಯೋಜನೆ ಮೂಲಕ ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳಿಗೆ ನೀರುಣಿಸುವ ಏತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ. ಹರಿಜನ ಗಿರಿಜನ ಯೋಜನೆಯಲ್ಲಿ ವಂಚಿತ ಸಮುದಾಯದ ಜನರನ್ನು ಆರ್ಥಿಕವಾಗಿ ಬದಲಾವಣೆ ಮಾಡುವ ಚಿಂತನೆ ಅಧಿಕಾರಿಗಳು ಮಾಡಬೇಕು ಎಂದು ರೈತರಾದ ಶಿವಪ್ಪ, ಹನುಮಂತ ಆಗ್ರಹಿಸಿದರು.

ನೂರಾರು ಹೆಕ್ಟೇರ್‌ ಪ್ರದೇಶದ ಜಮೀನಗಳಿಗೆ ಹಳ್ಳದ ನೀರು ನೀರು ಹಂಚಿಕೆ ಮಾಡುವ ಯೋಜನೆ ವಿಫಲವಾಗಿದೆ. ಹಲವು ಬಾರಿ ಹೋರಾಟ ಕೈಗೊಳ್ಳಲಾಗಿದೆ. ಅಧಿಕಾರಿಗಳ ಹುಸಿ ಭರವಸೆಗೆ ಈ ಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ. – ಮಲ್ಲಯ್ಯ ಕಟ್ಟಿಮನಿ, ಕೆಆರ್‌ಎಸ್‌ ತಾಲೂಕು ಅಧ್ಯಕ್ಷ.

 

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

nagesh-BC

ಅಗತ್ಯ ಬಿದ್ದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ : ಸಚಿವ ನಾಗೇಶ್

b-bommai

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಸಿಎಂ ಬೊಮ್ಮಾಯಿ

ಮಧು ಬಂಗಾರಪ್ಪ

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯವಿದೆ: ಮಧು ಬಂಗಾರಪ್ಪ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಇಳಿಕೆ; 17,115 ಅಂಕ ತಲುಪಿದೆ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಇಳಿಕೆ; 17,115 ಅಂಕ ತಲುಪಿದೆ ನಿಫ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20raily

ಕಾರ್ಮಿಕ ಸಂಘಟನೆಗಳಿಂದ ರ್ಯಾಲಿ

18busanura

ನೀರಿನ ಬವಣೆ ತಪ್ಪಿಸಲು ಕೆರೆ ಅಭಿವೃದ್ದಿ: ಭೂಸನೂರ

16protest

ಬೆಳೆಹಾನಿ ನಷ್ಟ ಪರಿಹಾರ ಕಲ್ಪಿಸಲು ಆಗ್ರಹ

13spots

ಅವಕಾಶ ಸಿಕ್ಕಾಗ ಕ್ರೀಡಾ ಪ್ರತಿಭೆ ಪ್ರದರ್ಶಿಸಿ

ಲಸಿಕೆ ಪಡೆಯದಿದ್ದರೂ ಸಕ್ಸಸ್‌ಫುಲ್‌ ಸಂದೇಶ!

ಲಸಿಕೆ ಪಡೆಯದಿದ್ದರೂ ಸಕ್ಸಸ್‌ಫುಲ್‌ ಸಂದೇಶ!

MUST WATCH

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

ಹೊಸ ಸೇರ್ಪಡೆ

1-sdfdf

ವೈದ್ಯರ ನಾಯಿ ಕಳವು : ಶಿವಮೊಗ್ಗ ಪೊಲೀಸರಿಂದ ಕೆಲವೇ ಗಂಟೆಯಲ್ಲಿ ಪತ್ತೆ

15oxen’

ಎತ್ತುಗಳ ಕಳ್ಳತನ ಪ್ರಕರಣ: ಮೂವರ ಬಂಧನ

davanagere news

ಸಂಗೀತ ಭಾರತೀಯ ಸಂಸ್ಕೃತಿ ಪ್ರತೀಕ: ಶಿವಲಿಂಗಾನಂದ ಶ್ರೀ

chitradurga news

ಹಣದ ದುರಾಸೆಯಿಂದ ಅವನತಿ ಖಚಿತ

ಕಸ ವಿರುದ್ಧದ ಹೋರಾಟ ಮುಖಂಡರ ಬಂಧನಕ್ಕೆ ಆಕ್ರೋಶ

ಕಸ ವಿರುದ್ಧದ ಹೋರಾಟ ಮುಖಂಡರ ಬಂಧನಕ್ಕೆ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.