ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ
Team Udayavani, Feb 20, 2021, 4:59 PM IST
ರಾಯಚೂರು: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ತಾಲೂಕಿನ ಕಲ್ಮಲ ಸಮೀಪ ಸಂಭವಿಸಿದೆ.
ಮೃತ ಕಾರು ಚಾಲಕನನ್ನು ಮಲ್ಲಟ ಗ್ರಾಮದ ಸದಾನಂದಗೌಡ ಮಾಲೀಪಾಟೀಲ (60) ಎಂದು ಗುರುತಿಸಲಾಗಿದೆ.
ಮಲ್ಲಟದಿಂದ ರಾಯಚೂರು ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಲಾಕ್ ಆಗಿರುವ ಕಾರಣ ಚಾಲಕ ಹೊರಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ನಾನು ಎನ್ನುವ ಅಹಂಕಾರ ನಿಮ್ಮನ್ನಿಲ್ಲಿಗೆ ತೆಗೊಂಡೋಗಿದೆ: ಸಿದ್ದು ವಿರುದ್ಧ ವಿಶ್ವನಾಥ್ ಕಿಡಿ
ಗ್ರಾಮದಿಂದ ದೂರ ಘಟನೆ ಸಂಭವಿಸಿದ್ದು ಬೆಂಕಿ ನಂದಿಸಲು ಸಾರ್ವಜನಿಕರಿಗೆ ಸಾಧ್ಯವಾಗಿಲ್ಲ. ಅಗ್ನಿ ಶಾಮಕದಳ ಬರುವ ವೇಳೆಗೆ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ಬಳಿಕ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಸ್ವರಾಜ್ ಶೆಟ್ಟಿ
ಲಾಕ್ ಗೆ ಶೇಕ್ ಆಗದ ಸನ್ನಿ ಲಿಯೋನ್!
‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?
‘ಪೆಪೆ’ಗೆ ಕಾಜಲ್ ಹೀರೋಯಿನ್!: ಫಸ್ಟ್ಲುಕ್ನಲ್ಲಿ ಗಮನ ಸೆಳೆದ ವಿಆರ್ಕೆ ಹೊಸಚಿತ್ರ
ವಾಟ್ಸಾಪ್ ಪಿಂಕ್ ಹೆಸರಿನಲ್ಲಿ ದಾಳಿಯಿಟ್ಟ ಹ್ಯಾಕರ್ಸ್: ನೀವು ಲಿಂಕ್ ಕ್ಲಿಕ್ ಮಾಡಿದ್ದೀರಾ ?