Udayavni Special

ರಾಯಚೂರು 8ನೇ ವಾರ್ಡ್‌ನಲ್ಲಿ ಮತ್ತೆ ಜೆಡಿಎಸ್‌ ಗೆಲುವು

ಜೆಡಿಎಸ್‌ ಅಭ್ಯರ್ಥಿಗೆ ಅನುಕಂಪದ ಅಲೆ ಜೋರಾಗಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

Team Udayavani, Apr 1, 2021, 6:41 PM IST

JDS

ರಾಯಚೂರು: ನಗರಸಭೆಯ 8ನೇ ವಾರ್ಡ್ ನಲ್ಲಿ ಜೆಡಿಎಸ್‌ ಸದಸ್ಯನಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಗೆಲುವಿನ ನಗೆ ಬೀರಿದೆ. ಅನುಕಂಪದ ಅಲೆ ಕೆಲಸ ಮಾಡಿದ್ದು, ಮೃತ ಸದಸ್ಯನ ಪತ್ನಿಗೆ ಗೆಲುವಿನ ಮಾಲೆ ದಕ್ಕಿದೆ.

ಜೆಡಿಎಸ್‌ ಅಭ್ಯರ್ಥಿ ನಿಖತ್‌ ಸಲ್ಮಾ 406 ಮತಗಳ ಅಂತರಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ನಗರದ ತಹಸೀಲ್ ಕಚೇರಿಯಲ್ಲಿ ಬುಧವಾರ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಿಖತ್‌ ಸಲ್ಮಾ ಅವರು 1224 ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಸೈಯ್ಯದ್‌ ಶಂಶುದ್ದೀನ್ 818 ಮತ ಪಡೆದು ಪರಾಭವಗೊಂಡಿದ್ದಾರೆ.

ಎಸ್‌ಡಿಪಿಐ ಪಕ್ಷದ ಅಭ್ಯರ್ಥಿ ಮಹ್ಮದ್ ಗೌಸ್‌ ಮೊಹಿನುದ್ದೀನ್‌ 153, ಪಕ್ಷೇತರ ಅಭ್ಯರ್ಥಿಗಳಾದ ನಜೀಮಾ ಬೇಂಗ ಅವರು 355, ಮಹ್ಮದ್‌ ನೂರ್‌ 345, ಮಹ್ಮದ್‌ ಶರೀಫ್‌ 36 ಮತಗಳನ್ನು ಪಡೆದುಕೊಂಡಿದ್ದಾರೆ. ಮೂರು ನೋಟಾ ಮತ ಚಲಾವಣೆಗೊಂಡಿವೆ. ಮಾ.29ರಂದು ಉಪಚುನಾವಣೆ ನಡೆದಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಶುರುವಾಯಿತು. ಮಧ್ಯಾಹ್ನ 11 ಗಂಟೆಗೆಲ್ಲ ಗೆಲುವು ಪ್ರಕಟಿಸಲಾಯಿತು. ವಾರ್ಡ್‌ನಲ್ಲಿ ಕಾರ್ಯಕರ್ತರು, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಈ ವಾರ್ಡ್ ನಲ್ಲಿ ಕಾಂಗ್ರೆಸ್‌ಗೂ ಗೆಲ್ಲುವ ಅವಕಾಶಗಳಿದ್ದವು. ಆದರೆ, ಆಂತರಿಕ ಭಿನ್ನಮತದಿಂದ ಗೆಲುವು ಕೈ ತಪ್ಪಿದೆ ಎಂಬ ಮಾತು ಒಂದೆಡೆಯಾದರೆ, ಜೆಡಿಎಸ್‌ ಅಭ್ಯರ್ಥಿಗೆ ಅನುಕಂಪದ ಅಲೆ ಜೋರಾಗಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ ಜೆಡಿಎಸ್‌ನಿಂದ ಜಿಲ್ಲೆಯ ಇಬ್ಬರು ಶಾಸಕರು ಮನೆ-ಮನೆ ಪ್ರಚಾರ ನಡೆಸುವ ಮೂಲಕ ಮತಬೇಟೆ ಮಾಡಿದ್ದು, ಫಲ ನೀಡಿದೆ. ಗೆಲುವು ಸಾಧಿಸಿದ ಜೆಡಿಎಸ್‌ ಅಭ್ಯರ್ಥಿಗೆ ಚುನಾವಣಾಧಿಕಾರಿ ಡಾ| ಟಿ.ರೋಣಿ ಪ್ರಮಾಣ ಪತ್ರ ನೀಡಿದರು. ಪಕ್ಷದ ಕಾರ್ಯಕರ್ತರು, ಮುಖಂಡರು ಸ್ಥಳದಲ್ಲಿಯೇ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಜಾಣ ನಡೆ
ನಗರಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ಮತ್ತೂಂದೆಡೆ 8ನೇ ವಾರ್ಡ್‌ನಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯ ಇದೆ. ಅದರ ಜತೆಗೆ ಸದಸ್ಯನ ಅಕಾಲಿಕ ಮರಣದಿಂದ ಅನುಕಂಪದ ಅಲೆಯೂ ಜೋರಾಗಿತ್ತು. ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿಕೊಂಡು ಬಿಜೆಪಿ ನಾಯಕರು ವಾಡ್ ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜಾಣ ನಡೆ ಪ್ರದರ್ಶಿಸಿತು. ಆದರೆ, ನಗರದಲ್ಲಿ ಪ್ರಾಬ್ಲಿಯ ಹೊಂದಿದ್ದು, ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳಿದ್ದರೂ ಸರಿಯಾಗಿ ಪ್ರಚಾರ ಕೈಗೊಳ್ಳದೆ ಸೋಲೊಪ್ಪಿಕೊಂಡಿದೆ. ಜೆಡಿಎಸ್‌ನಿಂದ ತೆರವಾದ ಸ್ಥಾನ ಜೆಡಿಎಸ್ ತೆಕ್ಕೆಗೆ ಬಂದಿರುವುದರಿಂದ ನಗರಸಭೆ ಆಡಳಿತದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿಲ್ಲ.

ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು, ಮುಖಂಡರು ನಮ್ಮ ಕುಟುಂಬದ ಮೇಲಿಟ್ಟಿರುವ ಅಭಿಮಾನಕ್ಕೆ ಮಾತೇ ಬರುತ್ತಿಲ್ಲ. ಎಲ್ಲರಿಗೂ ನಾನು ಕೃತ್ಯಜ್ಞಳಾಗಿದ್ದೇವೆ. ಈ ಗೆಲುವು ಕೇವಲ ನನ್ನ ಗೆಲುವು ಆಗಿಲ್ಲ. 8ನೇ ವಾರ್ಡ್‌ ಮತದಾರರು ಹಾಗೂ ಜೆಡಿಎಸ್‌ ಪಕ್ಷದ ಪ್ರತಿ ಕಾರ್ಯಕರ್ತರ ಗೆಲುವಾಗಿದೆ.
ನಿಖತ್‌ ಸಲ್ಮಾ, ನೂತನ ನಗರಸಭೆ ಸದಸ್ಯೆ

ಟಾಪ್ ನ್ಯೂಸ್

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

tyryry

ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACX

ನಗರ ವ್ಯಾಪಿಗೆ ವಾರ ಪೂರ್ತಿ ಕುಡಿವ ನೀರು ಪೂರೈಕೆ

Niru

ಕುಡಿವ ನೀರು ನೀಡುವುದು ಪುಣ್ಯ ಕಾರ್ಯ

Cov-19

“ಕಲ್ಯಾಣ’ಗಳಿಗೆ ಮತ್ತೆ ಕಂಟಕವಾದ ಕೋವಿಡ್

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

Poll

ಸ್ಟ್ರಾಂಗ್‌ ರೂಂ ಸೇರಿದ ಮತಯಂತ್ರ-ಭದ್ರತೆ

MUST WATCH

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

ಹೊಸ ಸೇರ್ಪಡೆ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

21-13

ಮಾಸ್ಕ್ ವಿತರಿಸಿ ಸ್ಥಾಪನಾ ದಿನ ಆಚರಣೆ

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

21-12

ಕೊರೊನಾ ಸೋಂಕು ತಡೆಗೆ ಶ್ರಮಿಸಿ: ದೇವರಮನೆ ಶಿವಕುಮಾರ್‌

21-11

ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಮ ಪರವಾನಗಿ ಮೇಳ: ವೀರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.