Udayavni Special

ಮಾಹಿತಿ ಕೊರತೆ; ಆಕಾಂಕ್ಷಿಗಳ ಪರದಾಟ


Team Udayavani, Aug 10, 2018, 12:05 PM IST

ray-2.jpg

ಲಿಂಗಸುಗೂರು: ಸ್ಥಳೀಯ ಪುರಸಭೆ ಚುನಾವಣೆಗೆ ಆ.10ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆದರೆ ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲೆಗಳು, ಯಾರಲ್ಲಿ ಸಲ್ಲಿಸಬೇಕೆಂಬು ಎಂಬ ಸ್ಪಷ್ಟ ಮಾಹಿತಿ ಇಲ್ಲದೇ ಆಕಾಂಕ್ಷಿಗಳು ಪರದಾಡುವಂತೆ ಆಗಿದೆ.

ಪುರಸಭೆ ಚುನಾವಣೆಗೆ ಆ.2ರಂದು ಅಧಿಸೂಚನೆ ಹೊರಡಿಸಲಾಗಿದೆ. ಆ.10ರಿಂದ 17ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ, ಬಿಇಒ ಚಂದ್ರಶೇಖರ ಭಂಡಾರಿ, ರೇಷ್ಮೆ ಸಹಾಯಕ ನಿರ್ದೇಶಕ ರಾಜೇಂದ್ರ ದೇವದುರ್ಗ ಅವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ತೋಟಗಾರಿಕೆ, ಪುರಸಭೆ ಕಚೇರಿ, ಬಿಇಒ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೇಂದ್ರಗಳನ್ನು ತೆರೆಯಲಾಗುವುದು
ಎಂದು ಹೇಳಲಾಗುತ್ತಿದೆ. ಆದರೆ ಯಾವ ವಾರ್ಡ್‌ನವರು ಎಲ್ಲಿ ನಾಮಪತ್ರ ಸಲ್ಲಿಸಬೇಕೆಂಬ ಮಾಹಿತಿ ಇಲ್ಲದಾಗಿದೆ.

ನಾಮಪತ್ರ ಸಲ್ಲಿಸುವ ವೇಳೆ ಯಾವ ದಾಖಲಾತಿ ಲಗತ್ತಿಸಬೇಕೆಂಬ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲದಾಗಿದೆ. ಮಾಹಿತಿ ಕೇಳಲು ತಹಶೀಲ್ದಾರರಿಗೆ ದೂರವಾಣಿ ಕರೆ ಮಾಡಿದರೆ ಅವರೂ ಸಹ ಕರೆ  ಕರಿಸುತ್ತಿಲ್ಲಾ
ಎಂಬದು ಆಕಾಂಕ್ಷಿಗಳ ಆರೋಪವಾಗಿದೆ.

ಪ್ರಮಾಣಪತ್ರಕ್ಕೆ ಅಲೆದಾಟ: ಚುನಾವಣೆ ನಿಮಿತ್ತವಾಗಿ ಅಗತ್ಯ ಪ್ರಮಾಣ ಪತ್ರಗಳನ್ನು ತ್ವರಿತಗತಿಯಲ್ಲಿ ನೀಡುವಂತೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಜಾತಿ, ಆದಾಯ, ಬೇಬಾಕಿ ಪ್ರಮಾಣ ಪತ್ರಕ್ಕೆ ಆಕಾಂಕ್ಷಿಗಳು ತಹಶೀಲ್ದಾರ್‌ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ಪ್ರಮಾಣಪತ್ರಕ್ಕೆ ಆ ದಾಖಲಾತಿ ತನ್ನಿ, ಈ ದಾಖಲಾತಿ ತನ್ನಿ ಎಂದು ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗಳು ಆಂಕಾಕ್ಷಿಗಳನ್ನು ಅಲೆದಾಡಿಸುತ್ತಿದ್ದಾರೆ. ಪರಿಣಾಮ ಪಟ್ಟಣದಿಂದ 3 ಕಿ.ಮೀ. ಅಂತರದಲ್ಲಿರುವ ಮಿನಿ ವಿಧಾನಸೌಧಕ್ಕೆ ಆಕಾಂಕ್ಷಿಗಳು ಪದೇಪದೆ ಅಲೆದಾಡಬೇಕಾಗಿದೆ.

ತಹಶೀಲ್ದಾರರು ಕಚೇರಿಯಲ್ಲಿ ಲಭ್ಯವಿರದ ಕಾರಣ ತಹಶೀಲ್ದಾರ್‌ ಗ್ರೇಡ್‌-2 ಅವರಿಂದ ಸಹಿ ಮಾಡಿಸಬಹುದಾಗಿದೆ. ಅವರು ಇದಕ್ಕೆ ಸಹಿ ಮಾಡದ ಕಾರಣ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಕಡಿಮೆ ಸಮಯ: ನಾಮಪತ್ರ ಸಲ್ಲಿಕೆಗೆ 10ರಿಂದ 17ರವರೆಗೆ ಅವಕಾಶವಿದೆ. ಆದರೆ ಇದರಲ್ಲಿ ನಡುವೆ ಮೂರು ದಿನ ರಜೆ ಇದೆ. ಇರುವ ನಾಲ್ಕು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ನಾಮಪತ್ರ ಸಲ್ಲಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಮಧ್ಯೆ ಅಧಿಕಾರಿ ಗಳು ಮಾಹಿತಿ ನೀಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಆಕಾಂಕ್ಷಿಗಳಿಗೆ ತೊಂದರೆ ಎದುರಾಗಿದೆ

ಚುನಾವಣೆ ನಡೆಯುತ್ತಿದೆಯೋ ಇಲ್ಲವೋ ತಿಳಿಯದಾಗಿದೆ. ತಹಶೀಲ್ದಾರ್‌ ಕಚೇರಿಗೆ ಹೋದರೂ ಮಾಹಿತಿ ಇಲ್ಲದಾಗಿದೆ. ಆದರೆ ಒಂದೊಂದು ಪ್ರಮಾಣಪತ್ರಕ್ಕಾಗಿ ಕಚೇರಿ ಕಚೇರಿಗೆ ಅಲೆದಾಡುವಂತಾಗಿದೆ. ತಹಶೀಲ್ದಾರರು ನಮ್ಮ ಕರೆ ಸ್ವೀಕರಿಸುತ್ತಿಲ್ಲ.  
 ರುದ್ರಪ್ಪ ಬ್ಯಾಗಿ, ಚುನಾವಣಾ ಸ್ಪರ್ಧಾಕಾಂಕ್ಷಿ

ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ ಅಷ್ಟೇ, ಆದರೆ ಕಚೇರಿ ಎಲ್ಲಿ, ನಾಮಪತ್ರ ಸಲ್ಲಿಸುವವರು ಯಾವ ದಾಖಲೆಗಳನ್ನು ಲಗತ್ತಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಇವತ್ತು ಕೊಡಬಹುದು. ಒಂದು ವೇಳೆ
ಕೊಟ್ಟರೆ ಮಾಹಿತಿ ನೀಡುತ್ತೇವೆ. 
 ಚಂದ್ರಶೇಖರ ಭಂಡಾರಿ, ಚುನಾವಣಾಧಿಕಾರಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

mandya

ಮಂಡ್ಯದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: 287 ಹೊಸ ಪ್ರಕರಣ; 377 ಮಂದಿ ಗುಣಮುಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಮ್ಸ್‌ನಲ್ಲಿ ಕೋವಿಡ್ ಪರೀಕ್ಷೆ ಸಾಮರ್ಥ್ಯ ದ್ವಿಗುಣ ! ನಿತ್ಯ 950 ಮಾದರಿಗಳ ಪರೀಕ್ಷೆ ಗುರಿ

ರಿಮ್ಸ್‌ನಲ್ಲಿ ಕೋವಿಡ್ ಪರೀಕ್ಷೆ ಸಾಮರ್ಥ್ಯ ದ್ವಿಗುಣ ! ನಿತ್ಯ 950 ಮಾದರಿಗಳ ಪರೀಕ್ಷೆ ಗುರಿ

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯತ್ನ: ವೆಂಕಟೇಶ ಕುಮಾರ

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯತ್ನ: ವೆಂಕಟೇಶ ಕುಮಾರ

ಪೌರ ಕಾರ್ಮಿಕರಿಗೆ ಮೂರು ಸಾವಿರ ಮನೆ

ಪೌರ ಕಾರ್ಮಿಕರಿಗೆ ಮೂರು ಸಾವಿರ ಮನೆ

KOLAR-TDY-1

ಪ್ರಧಾನಿ ಮೋದಿ-ಸಿಎಂ ಯಡಿಯೂರಪ್ಪಗಿಲ್ಲ ರೈತ ಪರ ಕಾಳಜಿ

ಕಾನೂನು ಸಂಘರ್ಷದಿಂದ ಪ್ರತಾಪಗೌಡ ಪಾರು

ಕಾನೂನು ಸಂಘರ್ಷದಿಂದ ಪ್ರತಾಪಗೌಡ ಪಾರು

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

ಕುಂಬಳೆಯಲ್ಲಿ ಕೋಟಿ ರೂ. ಕೃಷಿ ಯೋಜನೆ ಅನುಷ್ಠಾನ

ಕುಂಬಳೆಯಲ್ಲಿ ಕೋಟಿ ರೂ. ಕೃಷಿ ಯೋಜನೆ ಅನುಷ್ಠಾನ

ಕಾಸರಗೋಡು ಕ್ರೈಂ ಸುದ್ದಿ

ಕಾಸರಗೋಡು ಕ್ರೈಂ ಸುದ್ದಿ: ಬಾರಡ್ಕದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಾರು, ರಿವಾಲ್ವರ್‌ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.