ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ
|ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆ |ರೈಲು ಮುಖವನ್ನೇ ನೋಡದ ಜನರಲ್ಲಿ ಮಂದಹಾಸ
Team Udayavani, Dec 3, 2020, 3:22 PM IST
ಸಿಂಧನೂರು: ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ರೈಲು ಮುಖವನ್ನೇ ನೋಡದ ತಾಲೂಕುಗಳಲ್ಲಿ ಚುಕುಬುಕು ಸದ್ದು ಕೇಳುವ ಕಾಲ ಸನ್ನಿಹಿತವಾಗಿದೆ. ಇನ್ನೆರಡು ಕಡೆಗಳಲ್ಲಿ ಭೂ ಸ್ವಾಧೀನ ಪೂರ್ಣಗೊಂಡರೆ, ಬಹುದಿನಗಳ ಕನಸು ನನಸಾಗಲಿದೆ.
ಬಹುನಿರೀಕ್ಷೆಯ ಮುನಿರಾಬಾದ್ -ಮಹೆಬೂಬನಗರ ರೈಲ್ವೆ ಮಾರ್ಗ ಯೋಜನೆ ಕೊನೆಗಳಿಗೆಯಲ್ಲಿ ವೇಗ ಪಡೆದುಕೊಂಡಿದೆ. 2001ರಿಂದಲೇ ಆರಂಭಗೊಂಡ ಯೋಜನೆಅನುಷ್ಠಾನ ಪ್ರಕ್ರಿಯೆ ವಿವಿಧ ತೊಡಕುಗಳಬಳಿಕ (19 ವರ್ಷಗಳ ನಂತರ) ವೇಗ ಪಡೆದಿದೆ. ಒಂದೆಡೆ ರೈಲ್ವೆ ಹಳಿ ನಿರ್ಮಾಣ,ಮತ್ತೂಂದೆಡೆ ಭೂಸ್ವಾಧೀನ ಕೆಲಸವನ್ನುಚುರುಕುಗೊಳಿಸಿರುವುದರಿಂದ ರೈಲು ಓಡಿಸುವ ಯೋಜನೆ ಅಂತಿಮ ಸ್ವರೂಪ ಪಡೆದಿದೆ.
ಏನಿದು ಯೋಜನೆ?: ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಿಂದ ಆರಂಭವಾಗುವ 165 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಆಂಧ್ರಪ್ರದೇಶದ ಮಹೆಬೂಬ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ 2,112.19 ಎಕರೆ ಜಮೀನು ಭೂಸ್ವಾಧೀನವಾಗಬೇಕಿತ್ತು. 1007.28 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಪರಿಹಾರ ವಿತರಿಸಲಾಗಿದೆ. ಬಾಕಿ 1,004.28 ಎಕರೆಗೆ ಸಂಬಂಧಿಸಿ ವಿವಿಧ ಹಂತದ ಅಧಿಸೂಚನೆಗಳು ಪ್ರಕಟವಾಗಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಆರಂಭದ ಪಾಯಿಂಟ್‌ನಿಂದ ಕಾರಟಗಿವರೆಗೆ ಹಳಿ ನಿರ್ಮಿಸಿ ಹುಬ್ಬಳ್ಳಿ-ಗಂಗಾವತಿವರೆಗೆ ಈಗಾಗಲೇ ರೈಲು ಓಡಿಸಲಾಗಿದೆ. ಕಾರಟಗಿ ಭಾಗದಲ್ಲಿ ಮಾರ್ಗ ನಿರ್ಮಾಣ ಕಾಮಗಾರಿ 8 ಕಿ.ಮೀ.ನಷ್ಟು ಚಾಲ್ತಿಯಲ್ಲಿದೆ. ಸಿಂಧನೂರು ತಾಲೂಕಲ್ಲಿ ಸರ್ವೇ ಕಾರ್ಯ ಸಾಗಿದೆ.
ಮಾನ್ವಿ ತಾಲೂಕಿಗೆ ಸಂಬಂಧಿಸಿ ಕಂದಾಯ, ರೈಲ್ವೆ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಜಂಟಿ ಮೋಜಣಿ ಮುಗಿದಿದೆ. ಸಿಂಧನೂರು ಮತ್ತು ಮಾನ್ವಿ ತಾಲೂಕುಗಳಲ್ಲಿ ನನೆಗುದಿಗೆ ಬಿದ್ದ ಕೆಲಸಗಳಿಗೆ ಈಗ ಮೋಕ್ಷ ಕಲ್ಪಿಸಲಾಗಿದೆ. ರಾಯಚೂರು ತಾಲೂಕಿನಲ್ಲಿ 13.06 ಎಕರೆ ಭೂಮಿಯಷ್ಟೇ ವಶಕ್ಕೆ ತೆಗೆದುಕೊಳ್ಳಲು ಪ್ರಸ್ತಾವನೆಯಲ್ಲಿನ ನೂನ್ಯತೆ ಸರಿಪಡಿಸುವ ಕೆಲಸವಾಗಬೇಕಿದೆ.
ವೇಗದ ಸ್ಪರ್ಶ: ಮುಖ್ಯವಾಗಿ ಸಿಂಧನೂರು ತಾಲೂಕಿನ 7 ಗ್ರಾಮ ವ್ಯಾಪ್ತಿಯ 196 ಎಕರೆ ಸ್ವಾಧೀನಕ್ಕೆ ಅಂತಿಮ ಐತೀಪುì ಪ್ರಕಟಿಸಲಾಗಿದ್ದು, ಭೂ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಶಾಂತಿನಗರ-ಗೋರೆಬಾಳ ಭಾಗದಲ್ಲಿ 2.08 ಕೋಟಿ ರೂ., ರೌಡಕುಂದಾ ಭಾಗದಲ್ಲಿ 1.17ಕೋಟಿ ರೂ., ಸಾಸಲಮರಿ ಗ್ರಾಮದವರಿಗೆ 3.08 ಕೋಟಿ ರೂ., ಹೊಸಳ್ಳಿ ಭಾಗದ ರೈತರಿಗೆ 2.12 ಕೋಟಿ ರೂ.ಗಳನ್ನು ಪರಿಹಾರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ.
ಇದನ್ನೂ ಓದಿ : ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು!
ಸಿಂಧನೂರು ಭಾಗದ ಬಾಕಿ 146.06 ಎಕರೆ ಭೂಸ್ವಾಧೀನಕ್ಕೆ ಅಂತಿಮ ತೀರ್ಪಿಗೆ ಸಿದ್ಧತೆ ನಡೆದಿದ್ದು, ಇಲ್ಲಿನ ರೈತರಿಗೆ 55.91 ಕೋಟಿ ರೂ. ಪರಿಹಾರ ನೀಡಲು ಗುರುತಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿ ಈ ಕೆಲಸ ಪೂರ್ಣಗೊಂಡರೆ, ಭೂಸ್ವಾಧೀನ ಕೆಲಸವೇ ಕೊನೆಗೊಳ್ಳಲಿದೆ. ಈ ಎರಡು ತಾಲೂಕಿನಲ್ಲಿ 98 ಕಿ.ಮೀ.ನಷ್ಟು ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಮುಗಿದು ಬಿಟ್ಟರೆ, ರೈಲು ಓಡಿಸುವುದಕ್ಕೆ ಮುಹೂರ್ತ ನಿಗದಿಪಡಿಸುವುದಷ್ಟೇ ಬಾಕಿ ಉಳಿಯಲಿದೆ.
18 ಪ್ಲಸ್ 80 ಗುರಿ : ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ ರಾಯಚೂರಿಗೆ ರೈಲು ಓಡಾಟ ಆರಂಭಗೊಳ್ಳಲು ಕಾರಟಗಿ ಸಮೀಪ 18 ಕಿ.ಮೀ, ಸಿಂಧನೂರು-ಮಾನ್ವಿ ಒಳಗೊಂಡು 80 ಕಿ.ಮೀ. ಉದ್ದದಷ್ಟು ರೈಲ್ವೆ ನಿರ್ಮಾಣ ಕೆಲಸವಾಗಬೇಕಿದೆ. ಅಧಿಕಾರಿಗಳು ಈಗಾಗಲೇ ಸಿಂಧನೂರು ಗಡಿಭಾಗದವರೆಗೂ ಕಾಮಗಾರಿಯನ್ನು ಮುಂದುವರಿಸಿದ್ದು, ಇದೇ ವೇಗ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.
ಕಾರಟಗಿ-ಸಿಂಧನೂರುವರೆಗೆ 18 ಕಿ.ಮೀ. ವರೆಗೆ ಹಳಿ ನಿರ್ಮಾಣ ನಡೆದಿದೆ. ಸಿಂಧನೂರು-ರಾಯಚೂರುವರೆಗೆ 80 ಕಿ.ಮೀ. ಕಾಮಗಾರಿ ಮುಗಿದರೆ, ಯೋಜನೆಯ ಎಲ್ಲ ಕೆಲಸ ಪೂರ್ಣಗೊಂಡಂತಾಗಲಿದೆ. ಸದ್ಯ ಯಾವುದೇ ಬಿಲ್ ಬಾಕಿಯಿಲ್ಲ. –ಉಮಾಮಹೇಶ್ವರ್,ಎಇಇ, ನೈರುತ್ಯ ರೈಲ್ವೆ ಇಲಾಖೆ
-ಯಮನಪ್ಪ ಪವಾರ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ
ಯುವಕನಿಗೆ ಚೂರಿ ಇರಿದು ಹಲ್ಲೆಗೈದ ದುಷ್ಕರ್ಮಿಗಳು: ಸುರತ್ಕಲ್ ಪರಿಸರದಲ್ಲಿ ಬಿಗಿ ಭದ್ರತೆ
ಸಚಿವರುಗಳ ಸಹಾನುಭೂತಿ ಬೇಕಿಲ್ಲ: ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿ ವಚನ ಪಾಲಿಸಿದ್ದ ಸಿಂದಗಿಯ ಮನಗೂಳಿ ಮುತ್ಯಾ!