ವೈಟಿಪಿಎಸ್‌ಗೆ ಭೂಮಿ ಕೊಟ್ಟು ಕಂಗೆಟ್ಟ ರೈತರು


Team Udayavani, Mar 12, 2021, 9:25 AM IST

ವೈಟಿಪಿಎಸ್‌ಗೆ ಭೂಮಿ ಕೊಟ್ಟು ಕಂಗೆಟ್ಟ ರೈತರು

ಸರಕಾರಿ ನೌಕರಿ ಸಿಗುವುದೆಂಬ ಆಸೆಗೆ ಫಲವತ್ತಾದ ಭೂಮಿ ನೀಡಿದ ರಾಯಚೂರು ಜಿಲ್ಲೆಯ ರೈತರು ಈಗ ಭೂಮಿಯೂ ಇಲ್ಲದೇ ಅತ್ತ ನೌಕರಿ ಯೂ ಸಿಗದೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.

ಸಮೀಪದ ಯರಮರಸ್‌ ಸೂಪರ್‌ ಕ್ರಿಟಿಕಲ್‌ ಪವರ್‌ ಸ್ಟೇಶನ್‌ (ವೈಟಿಪಿಎಸ್‌) ಎಂಬ ದೈತ್ಯಾಕಾರದ ವಿದ್ಯುತ್‌ ಉತ್ಪಾದನ ಘಟಕ ಸ್ಥಾಪಿಸಿದ ಸರಕಾರ; ಕೊಟ್ಟ ಮಾತಿ ನಂತೆ ನಡೆದುಕೊಳ್ಳದೆ ರೈತ ಕುಟುಂಬಗ ಳನ್ನು ಸಂಕಷ್ಟಕ್ಕೆ ದೂಡಿದೆ. ಆರಂಭದಲ್ಲಿ ಭೂಮಿಗೆ ಪರಿಹಾರದ ಜತೆಗೆ ಪ್ರತೀ ಕುಟುಂ ಬಕ್ಕೆ ಒಂದು ಉದ್ಯೋಗ ನೀಡುವುದಾಗಿ ತಿಳಿಸಿತ್ತು. ಸುತ್ತಲಿನ ಗ್ರಾಮಗಳಲ್ಲಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಆಸೆ ಯಿಂದ ಪರಿಸರವಾದಿಗಳ ವಿರೋಧದ ನಡುವೆಯೂ ರೈತರು ಭೂಮಿ ನೀಡಿದ್ದರು. ಏಗನೂರು, ವಡೂÉರು, ಹೆಗ್ಗಸನಹಳ್ಳಿ, ಚಿಕ್ಕಸ ಗೂಗುರು, ಕುಕುನೂರು ಗ್ರಾಮದ ರೈತ ರಿಂದ ಸುಮಾರು 1,100ಕ್ಕೂ ಅಧಿ ಕ ಎಕ್ರೆ ಭೂಮಿ ಸ್ವಾಧಿಧೀನಪಡಿಸಿಕೊಳ್ಳಲಾಯಿತು.

ಭೂಮಿ ಪಡೆದ ಕೆಪಿಸಿಎಲ್‌ ಪರಿಹಾರದ ಚೆಕ್‌ ಮತ್ತು ಭೂ ಸಂತ್ರಸ್ತ ಪ್ರಮಾಣ ಪತ್ರ ನೀಡುವಾಗ ಉದ್ಯೋಗ ನೀಡುವುದಾಗಿ ತಿಳಿಸಿತ್ತು. 259ಕ್ಕೂ ಅ ಧಿಕ ಕುಟುಂಬಗಳು ಭೂಮಿ ಕಳೆದುಕೊಂಡಿವೆ. ಅದರ ಜತೆಗೆ ಜಿಲ್ಲಾಡಳಿತ 525 ಸಂತ್ರಸ್ತರನ್ನು ಗುರುತಿಸಿತ್ತು. ಅದರಲ್ಲಿ ಈವರೆಗೆ 110ರ ಆಸುಪಾಸು ಜನ ರಿಗೆ ಉದ್ಯೋಗ ನೀಡಿದ್ದು, ಉಳಿದವರಿಗೆ ಉದ್ಯೋಗ ನೀಡಲು ಕುಂಟು ನೆಪ ಹೇಳಲಾಗುತ್ತಿದೆ. 2013ರಲ್ಲಿ ಭೂ ಸಂತ್ರಸ್ತರ ಪಟ್ಟಿ ಗೆಜೆಟ್‌ ಅ ಧಿಸೂಚನೆ ಹೊರಡಿಸಲಾ ಗಿತ್ತು. ಸಂತ್ರಸ್ತರಿಗೆ ಉದ್ಯೋಗ ನೀಡುವ ಭರ ವಸೆ ನೀಡಲಾಗಿತ್ತು. ಒಂದು ಪಹಣಿಗೆ ಒಂದೇ ಉದ್ಯೋಗ ನೀಡಲಾಗುವುದು ಎಂಬ ಭರ ವಸೆ ನೀಡಲಾಯಿತು. ಇದು ಕುಟುಂಬದಲ್ಲೇ ಕಲಹ ಸೃಷ್ಟಿಸಿತು. ರೈತರಿಂದ ಭೂಮಿ ಪಡೆಯುವಾಗ ಇಲ್ಲಸಲ್ಲದ ಭರ ವಸೆ ನೀಡಿದ್ದ ಕೆಪಿಸಿಎಲ್‌ ಈಗ ತನ್ನ ನಿಲುವು ಬದಲಿಸಿದೆ. ಸಂಬಂಧವಿಲ್ಲದ ಷರತ್ತುಗಳನ್ನು ಒಡ್ಡುವ ಮೂಲಕ ಅರ್ಹ ಫಲಾನು ಭವಿಗಳನ್ನು ಉದ್ಯೋಗ ವಂಚಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿ ಸಂತ್ರಸ್ತರು ಜಿಲ್ಲಾಡಳಿತಕ್ಕೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಸಾಕಷ್ಟು ಜನ ಆಸ್ತಿ ಹಂಚಿಕೊಂಡರೂ ಪಹಣಿಯಲ್ಲಿ ಒಂದೇ ಹೆಸರಿದೆ. ಒಂದು ಪಹಣಿಗೆ ಒಂದೇ ಉದ್ಯೋಗ ಎಂಬ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತರು, ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಕೆಪಿಸಿಎಲ್‌ ನಿಯಮಾವಳಿ ಪರಿಶೀಲಿಸಿ ದ್ದಾರೆ. ಆ ರೀತಿ ಎಲ್ಲೂ ಉಲ್ಲೇಖವಾಗಿಲ್ಲ. ನಮಗೆ ಕೆಲಸ ನೀಡಬಾರದು ಎನ್ನುವ ಕಾರಣಕ್ಕೆ ನೆಪ ಹೇಳದೆ ಕೆಲಸ ನೀಡಿ ಎಂದು ಮತ್ತೆ ಮನವಿ ಸಲ್ಲಿಸಿದರು. ಅಲ್ಲದೇ ನಮ್ಮ ಲ್ಲಿರುವುದು ಕೇವಲ ಟೆಕ್ನಿಕಲ್‌ ಹುದ್ದೆಗಳು ಮಾತ್ರ. ಕನಿಷ್ಟ ಡಿಪ್ಲೊಮಾ ಮುಗಿಸಿದರೆ ಕೆಲಸ ನೀಡಲಾಗುವುದು ಎನ್ನುತ್ತಿದೆ. ಆದರೆ ಬಹುತೇಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿದರೂ ನಾನ್‌ ಟೆಕ್ನಿಕಲ್‌ ಕೋರ್ಸ್‌ಗ ಳನ್ನೇ ಓದಿದ್ದಾರೆ. ಹಳೇ ಪಹಣಿಗಳು, ಆಧಾರ್‌ ಕಾರ್ಡ್‌, 2009-10ರಲ್ಲಿ ಪಾವತಿ ಸಿದ ವಿದ್ಯುತ್‌ ಬಿಲ್‌, ಗ್ಯಾಸ್‌ ಬಿಲ್‌ ಸೇರಿ ದಂತೆ ಅನೇಕ ದಾಖಲೆ ಕೇಳುತ್ತಿದ್ದಾರೆ. ಆಗಿನ ದಾಖಲೆ ಎಲ್ಲಿಂದ ತರಬೇಕು?

 

ಸಿದ್ಧಯ್ಯಸ್ವಾಮಿ ಕುಕುನೂರು

 

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26road

ರಸ್ತೆ ಕಾಮಗಾರಿ ಪರಿಶೀಲನೆ

25problem1

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

24develop

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

14amrith

ಅಮೃತ ಯೋಜನೆಯಡಿ 19.35 ಕೋಟಿ

13formers

ಖರೀದಿ ಕೇಂದ್ರದ ಒಳಗೆ ಹೋಗದ ರೈತರು!

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.