ಸ್ಥಳಾಂತರಿಸಿದ ದಾಳಿಂಬೆ ಗಿಡಗಳಲ್ಲಿ ಚಿಗುರು

Team Udayavani, Mar 18, 2020, 1:30 PM IST

18-March-10

ಲಿಂಗಸುಗೂರು: ಪಟ್ಟಣದ ನಿವಾಸಿ, ರೈತ ಬಸವರಾಜಗೌಡ ಗಣೇಕಲ್‌ ಅವರು 2019 ಡಿ.19ರಂದು ಬೇರು ಸಮೇತ ಕಿತ್ತು ಬೇರೆ ಹೊಲಕ್ಕೆ ಸ್ಥಳಾಂತರಿಸಿದ 5 ಸಾವಿರ ದಾಳಿಂಬೆ ಗಿಡಗಳಲ್ಲಿ ಈಗ ಹೊಸಚಿಗುರು ಬಂದಿದೆ. ಈ ಮೂಲಕ ರೈತನ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ.

ರೈತ ಬಸವರಾಜಗೌಡ ಅವರು ನೀರಲಕೇರಾ ಗ್ರಾಮದ ಬಳಿ 22 ಎಕರೆ ಜಮೀನಿನಲ್ಲಿ 10 ಸಾವಿರ ದಾಳಿಂಬೆ ಗಿಡ ಬೆಳೆಸಿದ್ದರು. ಕಡಿಮೆ ಅಂತರದಲ್ಲಿ ಬೆಳೆಸಿದ್ದರಿಂದ ಒಂದಕ್ಕೊಂದು ತಾಗಿ, ಬಿಸಿಲು, ಗಾಳಿ ಹತ್ತದೇ ಇಳುವರಿ ಕುಂಠಿತವಾಗಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ರೈತ ಬಸವರಾಜಗೌಡ ಅವರು, 10 ಸಾವಿರ ಗಿಡಗಳಲ್ಲಿನ 5 ಸಾವಿರ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು 4 ಕಿ.ಮೀ. ದೂರದ ಜಮೀನಿನಲ್ಲಿ ನೆಟ್ಟಿದ್ದರು. 2019ರ ಡಿ.19ರಂದು ಆರಂಭವಾದ ಗಿಡಗಳ ಸ್ಥಳಾಂತರಿಸುವ ಕೆಲಸ ಸುಮಾರು ಒಂದೂವರೆ ತಿಂಗಳ ಕಾಲ ನಡೆಯಿತು. ಇದಕ್ಕಾಗಿ 30 ಲಕ್ಷ ರೂ. ವೆಚ್ಚವಾಗಿತ್ತು. ರೈತನ ಈ ಹೊಸ ಪ್ರಯತ್ನದಿಂದ ಗಿಡಗಳು ಬೆಳೆಯುತ್ತವೆಯೋ ಇಲ್ಲವೋ ಎಂಬ ಕುತೂಹಲ ಮೂಡಿಸಿತ್ತು. ಆದರೀಗ ದಾಳಿಂಬೆ ಗಿಡಗಳು ಬೆಳೆಯುತ್ತಿದ್ದು, ಹೂ ಕೂಡಾ ಬಿಟ್ಟು ರೈತನ ಮೊªಲ್ಲಿ ಮಂದಹಾಸ ಮೂಡಿಸಿವೆ.

ದಾಳಿಂಬೆ ಗಿಡಗಳನ್ನು ಸ್ಥಳಾಂತರಿಸುವ ಸುದ್ದಿ ತಿಳಿದು ಮಹಾರಾಷ್ಟ್ರ ಹಾಗೂ ರಾಜ್ಯದ ಚಿತ್ರದುರ್ಗ, ಹೊಸದುರ್ಗ, ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ಕಲಬುರಗಿ, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ರೈತರು ಹಾಗೂ ಕೃಷಿ ವಿಜ್ಞಾನಿಗಳು ರೈತ ಗಣೇಕಲ್‌ ಅವರ ಜಮೀನಿಗೆ ಭೇಟಿ ನೀಡಿ ದಾಳಿಂಬೆ ಗಿಡ ಬೇರು ಸಮೇತ ಕಿತ್ತು ಬೇರೆಡೆ ನೆಡುವ ಕಾರ್ಯ ವೀಕ್ಷಿಸಿದ್ದರು.

ಆಗಸ್ಟ್‌ನಿಂದ ಹಣ್ಣು: ಬೇರು ಸಮೇತ ಗಿಡಗಳನ್ನು ಕಿತ್ತು ಮತ್ತೂಂದೆಡೆ ನೆಟ್ಟಿದ್ದ ದಾಳಿಂಬೆ ಗಿಡಗಳು ಈಗಾಗಲೇ ಹೂ ಬಿಟ್ಟಿವೆ. ಬಿಟ್ಟಿರುವ ಹೂಗಳನ್ನು ಕಿತ್ತು ಆಗಸ್ಟ್‌ ತಿಂಗಳಿಂದ ಹಣ್ಣಿಗೆ ಬಿಡುವ ಚಿಂತನೆ ರೈತ ಗಣೇಕಲ್‌ದ್ದಾಗಿದೆ.

ಕಡಿಮೆ ಅಂತರದಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಸಿದ್ದರಿಂದ 5 ಸಾವಿರ ದಾಳಿಂಬೆ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು ಬೇರೆ ಜಮೀನಿಗೆ ಸ್ಥಳಾಂತರಿಸಿ ನೆಟ್ಟಿದ್ದೆ. ನನ್ನ ಕಠಿಣ ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ. ಆಗಸ್ಟ್‌ ತಿಂಗಳಿಂದ ಹಣ್ಣಿಗೆ ಬಿಡಲಾಗುವುದು. ಮತ್ತೆ ಚಿಗುರಿದ ದಾಳಿಂಬೆ ಗಿಡಗಳಿಂದ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ.
ಬಸವರಾಜಗೌಡ ಗಣೇಕಲ್‌,
ಪ್ರಗತಿಪರ ರೈತ, ಲಿಂಗಸುಗೂರು.

ಶಿವರಾಜ ಕೆಂಭಾವಿ

ಟಾಪ್ ನ್ಯೂಸ್

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23workers

ವೇತನ ಖಾತ್ರಿಗೆ ನಿಲಯ ಕಾರ್ಮಿಕರ ಆಗ್ರಹ

22women

ಮಹಿಳಾ ಸ್ವಾವಲಂಬಿಯಾದರೆ ದೇಶ ಸದೃಢ: ನರಸಪ್ಪ

17farmer

ಅಕ್ರಮ ನೀರಾವರಿ ತಡೆಗೆ ಗಡುವು

16chilly-crop

ಮೆಣಸಿನಕಾಯಿ ಬೆಳೆಗೆ ನುಶಿ ರೋಗ

15paddy

ಭತ್ತದ ನಾಡಿಗೆ ಸಾವಯವ ಭತ್ತವೇ ಚಿನ್ನ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.