ಮುಂಗಾರು ಕೃಷಿ ಚಟುವಟಿಕೆ ಚುರುಕು

69.850 ಹೆಕ್ಟೇರ್‌ ಬಿತ್ತನೆ ಗುರಿ

Team Udayavani, Jun 18, 2020, 5:12 PM IST

18-June-23

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಿಂಗಸುಗೂರು: ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಒಟ್ಟು 69, 850 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಚುರುಕಿನಿಂದ ಸಾಗಿದೆ.

ತಾಲೂಕಿನಲ್ಲಿ ಮೇ ಕೊನೆವಾರದಿಂದ ಜೂನ್‌ ಆರಂಭದ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ತಮ್ಮ ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಗೊಳಿಸಿದ್ದಾರೆ. ಇನ್ನೂ ಕೆಲವಡೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ತಾಲೂಕಿನಲ್ಲಿ ಬೌಗೋಳಿಕ ವಿಸ್ತೀರ್ಣ 1.94 ಲಕ್ಷ ಹೆಕ್ಟೇರ್‌ ಇದೆ. ಇದರಲ್ಲಿ 1.55 ಲಕ್ಷ ಹೆಕ್ಟೇರ್‌ ಬಿತ್ತನೆಯಾಗುವ ಕೃಷಿ ಭೂಮಿ. ಮುಂಗಾರು ಹಂಗಾಮಿನಲ್ಲಿ 0.67 ಲಕ್ಷ ಹೆಕ್ಟೇರ್‌ ಖುಷ್ಕಿ ಹಾಗೂ 0.16 ಹೆಕ್ಟೇರ್‌ ನೀರಾವರಿ ಪ್ರದೇಶ ಹೊಂದಿದೆ. ತೊಗರಿ 15930 ಹೆಕ್ಟೇರ್‌, ಹೆಸರು 1600 ಹೆಕ್ಟೇರ್‌, ಅಲಸಂದಿ 170 ಹೆಕ್ಟೇರ್‌, ಸೂರ್ಯಕಾಂತಿ 12455 ಹೆಕ್ಟೇರ್‌, ಹೈಬ್ರಿಡ್‌ ಸಜ್ಜೆ 27500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಭತ್ತ 2 ಸಾವಿರ ಕ್ವಿಂಟಲ್‌, ಹೈಬ್ರಿಡ್‌ ಸಜ್ಜೆ 350 ಕ್ವಿಂಟಲ್‌, ತೊಗರಿ 650 ಕ್ವಿಂಟಲ್‌ ಬಿತ್ತನೆ ಬೀಜಗಳು ಸೇರಿದಂತೆ ಇನ್ನಿತರ ಬೆಳೆಗಳ ಭೀಜಗಳು ತಾಲೂಕಿನ ಲಿಂಗಸುಗೂರು, ಗುರುಗುಂಟಾ, ಮುದಗಲ್ಲ, ಮಸ್ಕಿ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಮಾಡಲಾಗಿದೆ. ಅದರಂತೆ ಕಳೆದ ವಾರದಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿಗಾಗಿ ತಾಲೂಕಿನಲ್ಲಿ ಈ ಭಾರಿ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ಲಕ್ಷಣಗಳು ಕಾಣುತ್ತಿವೆ.

ತಾಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಮಾರಾಟವೂ ನಡೆದಿದೆ.
ಮಹಾಂತೇಶ ಹವಾಲ್ದಾರ,
ಕೃಷಿ ಸಹಾಯಕ ನಿರ್ದೇಶಕ

ಶಿವರಾಜ ಕೆಂಭಾವಿ

ಟಾಪ್ ನ್ಯೂಸ್

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19school

ಏಳು ಪ್ರೌಢಶಾಲೆ ಕಾಲೇಜುಗಳಾಗಿ ಮೇಲ್ದರ್ಜೆಗೆ

12MLA

ಶಾಸಕರ ನಿವಾಸಕ್ಕೆ ಅನ್ನದಾತರ ದಂಡು

23paddy

ತಿಂಗಳಾಂತ್ಯಕ್ಕೆ ಜೋಳ-ಭತ್ತ ಖರೀದಿ ಮಿತಿ ತೆರವು

22tribes

ಗಿರಿಜನರು ಸರಕಾರದ ಸೌಲಭ್ಯ ಪಡೆಯಲಿ

21ambulance

ಗುರುಗುಂಟಾ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಸೇವೆಗೆ ಚಾಲನೆ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.