ಅವಿರೋಧ ಹೇಳಿಕೆಗೆ ಭಾರೀ ವಿರೋಧ!

ಚರ್ಚೆಗೆ ಆಹಾರವಾಯ್ತು ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ..! , ಸಾಹಿತ್ಯ ವಲಯದಲ್ಲೂ ಕೇಳಿ ಬರುತ್ತಿದೆ ಜಾತಿ

Team Udayavani, Oct 21, 2020, 5:53 PM IST

rc-tdy-1

ರಾಯಚೂರು: ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾಧ್ಯಕ್ಷರ ಚುನಾವಣೆಗೆ ಇನ್ನೂ ಐದು ತಿಂಗಳು ಇದ್ದಾಗಲೇ ಬಿಸಿ ಬಿಸಿ ಚರ್ಚೆ ಶುರುವಾಗಿದೆ.ಜಿಲ್ಲಾಧ್ಯಕ್ಷರ ಅವಿರೋಧ ಆಯ್ಕೆ ಮಾಡುವವಿಚಾರ ಹಾಲಿ ಜಿಲ್ಲಾಧ್ಯಕ್ಷರು ಪ್ರಸ್ತಾಪಿಸುತ್ತಿದ್ದಂತೆ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದೆ.

ಈಚೆಗೆ ಸುದ್ದಿಗೋಷ್ಠಿ ನಡೆಸಿದ ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್‌,  ಪರಿಷತ್‌ನ ಹಿರಿಯ ಸದಸ್ಯ ಭೀಮನಗೌಡಇಟಗಿ ಅವರನ್ನು ಅವಿರೋಧ ಮಾಡುವ ಇಂಗಿತವ್ಯಕ್ತಪಡಿಸಿದ್ದರು. ಆದರೆ, ಈಗಾಗಲೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕಸರತ್ತು ನಡೆಸಿರುವ ಆಕಾಂಕ್ಷಿಗಳಲ್ಲಿ ಇದರಿಂದ ತಳಮಳ ಶುರುವಾಗಿದೆ. ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಏಕಪಕ್ಷೀಯವಾಗಿ ನಿರ್ಧಾರಕೈಗೊಳ್ಳುವುದು ಎಷ್ಟು ಸರಿ? ಹಿರಿಯ ಸದಸ್ಯರೆಂದ ಮಾತ್ರಕ್ಕೆ ಎಲ್ಲ ಅರ್ಹತೆ ಇದ್ದಂತೆಯೇ ಎಂದು ಪ್ರಶ್ನಿಸಿದರು.

ಕೂಸು ಹುಟ್ಟುವ ಮುನ್ನವೇ ಕುಲಾವಿ: ಈಗಿನ ಅಧಿಕಾರವಧಿ ಇನ್ನೂ ತಿಂಗಳಿದ್ದು, ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ. ಆಗಲೇ ಜಿಲ್ಲೆಯಲ್ಲಿ ಅಭ್ಯರ್ಥಿ ಆಯ್ಕೆಗಳ ಚರ್ಚೆ ಶುರುವಾಗಿದೆ. ಜಿಲ್ಲೆಯಲ್ಲಿ 6149 ಆಜೀವ ಸದಸ್ಯರಿದ್ದಾರೆ. ಕಳೆದ ಬಾರಿಯೂ ಚುನಾವಣೆ ನಡೆಸುವ ಮೂಲಕವೇ ಅಧ್ಯಕ್ಷರಾಯ್ಕೆ ನಡೆದಿತ್ತು. ಆಗ ಎರಡಾಗಿದ್ದ ಬಣಗಳಲ್ಲೂ ಭಿನ್ನಾಭಿಪ್ರಾಯಗಳು ಮೂಡಿವೆ. ಈ ಬಾರಿಯೂ ಹಲವರು ಸ್ಪರ್ಧೆಗೆ ಇಚ್ಛಿಸಿದ್ದಾರೆ. ನರಸಿಂಗರಾವ್‌ ಸರ್ಕಿಲ್‌, ರಂಗಣ್ಣ ಪಾಟೀಲ್‌ ಅಳ್ಳುಂಡಿ, ಭೀಮನಗೌಡ ಇಟಗಿ, ಮಾರುತಿ ಬಡಿಗೇರ, ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಸ್ಪರ್ಧಾಕಾಂಕ್ಷಿ ಸಾಲಿನಲ್ಲಿದ್ದು, ಚುನಾವಣೆ ಘೋಷಣೆಯಾಗುವ ವೇಳೆ ಮತ್ತಷ್ಟು ಹೆಚ್ಚಾಗಬಹುದು.

ಇಲ್ಲೂ ಜಾತಿ ಲೆಕ್ಕಾಚಾರ : ಪ್ರಬುದ್ಧರ ವಲಯವಾದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿಯೂ ಈಗ ಜಾತಿ ಲೆಕ್ಕಾಚಾರ ಶುರುವಾಗಿದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಸಾಕಷ್ಟು ಸಾಹಿತಿಗಳಿದ್ದಾರೆ. ಕನ್ನಡಪ್ರೇಮಿಗಳಿದ್ದಾರೆ. ಅವರಿಗೆ ಕಸಾಪ ಚುಕ್ಕಾಣಿ ಹಿಡಿಯಲು ಅವಕಾಶ ನೀಡಿಲ್ಲ. ಕೆಲ ಹಿರಿಯ ಸಾಹಿತಿಗಳನ್ನು ಮೂಲೆಗುಂಪು ಮಾಡಲಾಗಿದೆ. ಯುವ ಸಾಹಿತಿಗಳನ್ನು ಸೆಳೆಯುವಲ್ಲಿ ನಿರೀಕ್ಷಿತ ಮಟ್ಟದ ಗುರಿ ಸಾಧಿ ಸಿಲ್ಲ. ಈ ಬಾರಿ ಹಿಂದುಳಿದ ವರ್ಗಗಳ ಜನರಿಗೂ ಅವಕಾಶ ಕಲ್ಪಿಸಿ ನೋಡಲಿ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಬಣಗಳು ಉಪಬಣಗಳಾಗಿ ಮಾರ್ಪಟ್ಟಿವೆ.ಚುನಾವಣೆ ಇನ್ನೂ ಘೋಷಣೆಯಾಗುವಮುನ್ನವೇ ಅವಿರೋಧ ಆಯ್ಕೆ ಪ್ರಸ್ತಾಪಸರಿಯಲ್ಲ. ಇಂಥವರೇ ಅಭ್ಯರ್ಥಿ ಎಂದು ಬಿಂಬಿಸುವ ಮೂಲಕ ಸದಸ್ಯರಲ್ಲಿ ತಪ್ಪುಗ್ರಹಿಕೆ ಮೂಡಿಸಲಾಗುತ್ತಿದೆ. ಎಲ್ಲ ಆಕಾಂಕ್ಷಿಗಳು ಸಮಾನ ಮನಸ್ಕರಾಗಿದ್ದು, ಒಗ್ಗೂಡಿ ಚರ್ಚಿಸುತ್ತಿದ್ದೇವೆ. ಚುನಾವಣೆ ಘೋಷಣೆಯಾದ ಮೇಲೆ ಅವಿರೋಧವೋ, ಚುನಾವಣೆಯೋ ನಿರ್ಧಾರವಾಗಲಿದೆ. – ನರಸಿಂಗರಾವ್‌ ಸರ್ಕಿಲ್‌, ಸ್ಪರ್ಧಾಕಾಂಕ್ಷಿ ದೇವದುಗ

ಒಬ್ಬರ ನಂತರ ಒಬ್ಬರು ತಮ್ಮಿಷ್ಟಕ್ಕೆ ಬಂದಂತೆ ಅಧಿಕಾರ ನಡೆಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಸಾಹಿತಿಗಳು, ಕನ್ನಡಪ್ರೇಮಿಗಳು ಇದ್ದಾರೆ. ಎಲ್ಲರಿಗೂ ಅವಕಾಶ ನೀಡಬೇಕು. ಜಿಲ್ಲಾಧ್ಯಕ್ಷರ ಅವಿರೋಧ ಆಯ್ಕೆ ಹೇಳಿಕೆಯೇ ಅಸಂಬದ್ಧ. ಅವರು ತಮ್ಮದೇ ಕಾರ್ಯಕಾರಿ ಸಮಿತಿ ಸಭೆ ನಡೆಸದೇ ಯಾರೋ ಒಬ್ಬರ ಹೆಸರು ಹೇಳುವುದು ಎಷ್ಟು ಸರಿ?. ಅದೇಕಾರ್ಯಕಾರಿ ಸಮಿತಿಯಲ್ಲಿ ಅನೇಕರು ಆಕಾಂಕ್ಷಿಗಳಿದ್ದು, ಇದಕ್ಕೆ ವಿರೋಧಿಸಿದ್ದಾರೆ. ನಾನು ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. – ಮಾರುತಿ ಬಡಿಗೇರ್‌,ಕಸಾಪ ಸದಸ್ಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬದಲಾವಣೆ ಆಗಬೇಕಿದೆ. ಯುವ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರದತ್ತ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾನು ಈ ಬಾರಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಆಕಾಂಕ್ಷಿಗಳು ಇದ್ದಾಗ್ಯೂ ಅವಿರೋಧ ಆಯ್ಕೆ ಹೇಗೆ ಮಾಡಲು ಸಾಧ್ಯ?. ನಾನು ಕಳೆದ ಐದು ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಹಿರಿಯ ಸದಸ್ಯರ ಸಲಹೆ ಪಡೆದು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ.– ಮಲ್ಲಿಕಾರ್ಜುನ ಶಿಖರಮಠ, ಕಸಾಪ ತಾಲೂಕು ಅಧ್ಯಕ್ಷ

ಕಸಾಪದಲ್ಲಿ 1992ರಿಂದ ನಿರಂತರ ಕೆಲಸ ಮಾಡಿದ್ದೇನೆ. ಎರಡು ಬಾರಿ ತಾಲೂಕು ಅಧ್ಯಕ್ಷನಾಗಿದ್ದೆ. ಬಹಳ ವರ್ಷಗಳಿಂದ ಪರಿಷತ್‌ನಲ್ಲಿ ಇದ್ದ ಮಾತ್ರಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತೇವೆ ಎನ್ನುವುದು ತರ್ಕಹೀನ. ಆಕಾಂಕ್ಷಿಗಳ ಅಭಿಪ್ರಾಯ ಪಡೆದೇಅವಿರೋಧ ವಿಚಾರ ನಿರ್ಧರಿಸಬೇಕು. ಸಾಹಿತ್ಯ ಕ್ಷೇತ್ರಕ್ಕೆ ನನ್ನದೇಯಾದ ಕೊಡುಗೆ ಇದೆ. ಈ ಬಾರಿ ನಾನು ಚುನಾವಣೆಗೆ ಸ್ಪ ರ್ಧಿಸಲು ಇಚ್ಛಿಸಿದ್ದೇನೆ. – ರಂಗಣ್ಣ ಪಾಟೀಲ್‌ ಅಳ್ಳುಂಡಿ, ಪತ್ರಕರ್ತ, ಸ್ಪರ್ಧಾಕಾಂಕ್ಷಿ

 

-ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19crop

ಬೆಳೆ ಪರಿಹಾರದಲ್ಲಿ ಸರ್ಕಾರ ತಾರತಮ್ಯ

13political

ಸಮಸ್ಯೆ ಮುಕ್ತ ಗ್ರಾಪಂ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ರಾಯಚೂರು ಕೃಷಿ ವಿವಿಯಲ್ಲಿ 11ನೇ ಘಟಿಕೋತ್ಸವ : ರಾಜ್ಯಪಾಲರಿಂದ ಚಾಲನೆ

ರಾಯಚೂರು ಕೃಷಿ ವಿವಿಯಲ್ಲಿ 11ನೇ ಘಟಿಕೋತ್ಸವ : ರಾಜ್ಯಪಾಲರಿಂದ ಚಾಲನೆ

ಮಾನ್ವಿಯ ಅಗರಬತ್ತಿ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

ಮಾನ್ವಿಯ ಅಗರಬತ್ತಿ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

31chaild

ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಭಕ್ತರ ವಾತ್ಸಲ್ಯಕ್ಕೆ ಪ್ರತಿರೂಪ ಜನಕಲ್ಯಾಣ: ಡಾ| ಹೆಗ್ಗಡೆ

ಭಕ್ತರ ವಾತ್ಸಲ್ಯಕ್ಕೆ ಪ್ರತಿರೂಪ ಜನಕಲ್ಯಾಣ: ಡಾ| ಹೆಗ್ಗಡೆ

ಅಕ್ರಮ ಮರಳುಗಾರಿಕೆ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ

ಅಕ್ರಮ ಮರಳುಗಾರಿಕೆ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.