ಶಾಸಕ ಇಕ್ಬಾಲ್‌ ಅನ್ಸಾರಿ ವಜಾಕ್ಕೆ ಆಗ್ರಹ

Team Udayavani, Feb 3, 2018, 4:19 PM IST

ದೇವದುರ್ಗ: ಸಂವಿಧಾನಕ್ಕೆ ಅಪಚಾರವೆಸಗಿ ಸಮಾಜದ ಶಾಂತಿ ಭಂಗವುಂಟು ಮಾಡುತ್ತಿರುವ ಗಂಗಾವತಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು ಕಂದಾಯ ಅಧಿಕಾರಿ ರಾಮನಗೌಡ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ಇಕ್ಬಾಲ್‌ ಅನ್ಸಾರಿ ತಮ್ಮ ಸ್ಥಾನದ ಘನತೆ ಮರೆತು ಮತಿಹೀನರಂತೆ ವರ್ತಿಸುತ್ತಾ ಸಂವಿಧಾನದ ಆಶಯಕ್ಕೆ ಭಂಗ ಉಂಟು ಮಾಡುತ್ತಿದ್ದಾರೆ. ಕೊಪ್ಪಳದಲ್ಲಿ ಜರುಗಿದ ಅಲ್ಪಸಂಖ್ಯಾತರ ಹಕ್ಕು ರಕ್ಷಣಾ ಸಭೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. 

ರಾಮನ ಭಕ್ತರು ಲೂಟಿಕೋರರು, ಕೊಲೆಗಡುಕರು, ಮನೆಯಲ್ಲಿ ರಾಮನ ಪೂಜೆ ಮಾಡುತ್ತಾರೆ. ರಾಮನ ಹೆಸರಿನಲ್ಲಿ ಕೊಲೆ ಮಾಡುತ್ತಾರೆ ಎಂಬ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡಿದ್ದಾರೆ ಎಂದು ದೂರಿದರು. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಬೇಜವಾಬ್ದಾರಿ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. 

ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂದೂ, ಮುಸ್ಲಿಮರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ.  ಶಾಸಕರ ಪ್ರಚೋದನಾತ್ಮಕ ಹೇಳಿಕೆ ಹಾಗೂ ವರ್ತನೆಯಿಂದ ಗಂಗಾವತಿ ತಾಲೂಕಿನಾದ್ಯಾಂತ ಕೋಮು ಗಲಭೆಗಳು ಹೆಚ್ಚಿವೆ. ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ತಿಕ, ಶಿವುಕುಮಾರ, ಅನೀಲ್‌, ನಿರಂಜನ ಮೂರ್ತಿ, ಆನಂದ, ರಾಜ ಗೌಳಿ, ಕಿರಣಕುಮಾರ, ಭರತಕುಮಾರ, ಅಮರ, ವಿಶ್ವನಾಥ, ನಾಗರಾಜ, ಚನ್ನಬಸವ ಕೋರಿ, ಸಂಗಮೇಶ, ಮುದ್ದುರಾಜ, ಗುರುನಾಥ, ಅಂಬರೀಷ ಇತರರು ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ