Udayavni Special

ಚುನಾವಣೆ ಖರ್ಚು ವೆಚ್ಚದ ಮೇಲೆ ನಿಗಾ

ಚುನಾವಣೆಯಲ್ಲಿ ವಾಹನಗಳ ಬಳಕೆಗೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು

Team Udayavani, Mar 18, 2021, 6:34 PM IST

Niga

ರಾಯಚೂರು: ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮಾಡುವ ಖರ್ಚು ವೆಚ್ಚಗಳ ಮೇಲೆ ವಿಶೇಷ ನಿಗಾ ವಹಿಸಲಿದ್ದು, ಮಾದರಿ ನೀತಿ ಸಂಹಿತೆ ಮೀರದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶ ಕುಮಾರ್‌ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನೀತಿ ಸಂಹಿತೆ ಪಾಲಿಸುವ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಪಕ್ಷದ ಅಭ್ಯರ್ಥಿಗಳು ಚುನಾವಣೆ ಖರ್ಚು ವೆಚ್ಚದ ಬಗ್ಗೆ ಸಕಾಲಕ್ಕೆ ಮಾಹಿತಿ ನೀಡಬೇಕು. ಅಭ್ಯರ್ಥಿ ಮತ್ತು ಪಕ್ಷದಿಂದ ಚುನಾವಣೆಗೆ ಖರ್ಚು ಮಾಡುತ್ತಿರುವ ವೆಚ್ಚ ನಿರ್ವಹಣೆ ಮಾಡಲು ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕು. ಪಕ್ಷ ಮತ್ತು ಅಭ್ಯರ್ಥಿಗಳ ಖರ್ಚು ವೆಚ್ಚದ ಬಗ್ಗೆ ಮೇಲ್ವಿಚಾರಣೆ
ಮಾಡಲು ಜಿಪಂ ಮುಖ್ಯ ಲೆಕ್ಕಾಧಿಕಾರಿಯನ್ನು ನೇಮಿಸಲಾಗುವುದು.

ಬಹಿರಂಗ ಸಭೆ, ರ್ಯಾಲಿಗಳಲ್ಲಿ ಬಳಸುವ ಮೈಕ್‌, ಬ್ಯಾಂಡ್‌ ಬಾಜಾ ಸೇರಿದಂತೆ ಪ್ರತಿಯೊಂದಕ್ಕೂ ಶುಲ್ಕ ನಿಗದಿಪಡಿಸಲಾಗಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ರಾಜಕೀಯ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು. ರಾಜಕೀಯ ಪಕ್ಷಗಳು ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯಾವುದೇ ಕಾರಣಕ್ಕೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂಥ ಭಾಷಣ, ಹೇಳಿಕೆ ನೀಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಅಡಿಗಲ್ಲು ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಮತ್ತು ಪ್ರಕೃತಿ ವಿಕೋಪಕ್ಕೆ ಸಂಬಂಧಿ ಸಿದಂತೆ ಸಭೆಗಳನ್ನು ಮಾತ್ರ ನಡೆಸಲು ಅವಕಾಶ ಇರುತ್ತದೆ ಎಂದರು.

ಲಿಂಗಸೂಗೂರು, ಸಿಂಧನೂರು ಮತ್ತು ಮಸ್ಕಿ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿ ಯಾವುದೇ ಸಭೆ, ಸಮಾರಂಭ, ಬಹಿರಂಗ ಪ್ರಚಾರ, ರ್ಯಾಲಿ, ರೋಡ್‌ ಶೋ ನಿರ್ವಹಿಸಬೇಕಾದರೆ ಲಿಂಗಸೂಗೂರು ಸಹಾಯಕ ಆಯುಕ್ತರಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ.

ಚುನಾವಣೆಯಲ್ಲಿ ವಾಹನಗಳ ಬಳಕೆಗೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದರು. ಪಕ್ಷದ ಕಚೇರಿಯಲ್ಲಿ ಕೇವಲ ಕಾರ್ಯಕರ್ತರು ಮಾತ್ರ ಸಭೆ ನಡೆಸಬೇಕು. ಮತದಾರರು ಸೆಳೆಯಲು ಯಾವುದೇ ಆಸೆ ಆಮಿಷವೊಡ್ಡಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಎಡಿಸಿ ಕೆ.ಆರ್‌.ದುರಗೇಶ್‌, ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

Defence Minister Rajnath Singh directs DRDO to provide 150 jumbo oxygen cylinders to UP govt

DRDO ನಿಂದ ಉತ್ತರ ಪ್ರದೇಶಕ್ಕೆ 150 ಜಂಬೋ ಸಿಲಿಂಡರ್ ಆಕ್ಸಿಜನ್ ರವಾನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನಬವ್‍‍ರ

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

ಹ್ಜಜ

ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ

dgdte

ಭತ್ತದ ಬೆಳೆಗೆ ಆಲಿಕಲ್ಲು; ಬೆಳೆಗಾರ ಕಂಗಾಲು

kacheri

ಕಚೇರಿ ಪಕ್ಕದಲ್ಲೇ “ತೋಟ’ಗಾರಿಕೆ ಬೀಳು

Alikallu

ಭತ್ತದ ಬೆಳೆಗೆ ಆಲಿಕಲ್ಲು; ಬೆಳೆಗಾರ ಕಂಗಾಲು

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

High number of bus routes

ಅಧಿಕ ಸಂಖ್ಯೆ ಬಸ್‌ ರಸ್ತೆಗೆ

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

75% accept vaccination by police

ಶೇ.75 ಪೊಲೀಸರಿಂದ ಲಸಿಕೆ ಸ್ವೀಕಾರ : ಕೊರೊನಾ ಸವಾಲಿಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.