ಯತ್ನಾಳ್‌, ಈಶ್ವರಪ್ಪ ವಿರುದ್ಧ ಕ್ರಮ ಏಕಿಲ್ಲ?

ನಮ್ಮಲ್ಲಿ ಯಾವ ಬೆಂಕಿನೂ ಇಲ್ಲ, ಹೊಗೆನೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

Team Udayavani, Apr 7, 2021, 6:54 PM IST

Ekilla

ಸಿಂಧನೂರು: ಯತ್ನಾಳ್‌ ಮತ್ತು ಈಶ್ವರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್‌ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?. ಆ ಇಬ್ಬರಿಗೂ ಆರೆಸ್ಸೆಸ್ ಹಾಗೂ ಸಂತೋಷ ಕುಮ್ಮಕ್ಕಿದೆ. ಬಿಎಸ್‌ವೈ ಕೆಳಗಿಳಿಸಲು ಅವರದೇ ಪಕ್ಷದಲ್ಲಿ ಷಡ್ಯಂತ್ರ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಪಗಡದಿನ್ನಿ ಗ್ರಾಮದ ಕಾಂಗ್ರೆಸ್‌ ಮುಖಂಡ ಚಿಟ್ಟೂರಿ ಶ್ರೀನಿವಾಸ್‌ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿಂದ ಅಲ್ಲ; ಕಳೆದ ಮೂರ್‍ನಾಲ್ಕು ತಿಂಗಳಿಂದ ಸರ್ಕಾರದ ಮೇಲೆ ಯತ್ನಾಳ್‌ ಅಟ್ಯಾಕ್‌ ಮಾಡುತ್ತಿದ್ದಾರೆ. ಏಕೆ ಕ್ರಮ ಕೈಗೊಂಡಿಲ್ಲ. ಒಬ್ಬ ಮಂತ್ರಿಯಾಗಿ ಈಶ್ವರಪ್ಪ ತಮ್ಮದೇ ಸಿಎಂ ವಿರುದ್ಧ ರಾಜ್ಯಪಾಲರು, ಹೈಕಮಾಂಡ್ ಗೆ ದೂರು ನೀಡುತ್ತಾರೆ. ಹಾಗಾದ್ರೆ, ಆ ಪಕ್ಷದಲ್ಲಿ ಎಲ್ಲ ಸರಿ ಇಲ್ಲ ಎಂದು ಭಾವಿಸಬೇಕಾ? ಎಂದು ಪ್ರಶ್ನಿಸಿದರು.

ಯಾರ್ರೀ ರೇಣುಕಾಚಾರ್ಯ?: ನಮ್ಮ ಕಾಲದಲ್ಲೇ ಅನ್ನಭಾಗ್ಯ ಫೈಲ್‌ ಸಿದ್ಧವಾಗಿತ್ತು ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಕೇಳಿದಾಗ, ಯಾರ್ರೀ ಆ ರೇಣುಕಾಚಾರ್ಯ. ಹೇಳ್ಳೋಕು ಒಂದು ಬದ್ಧತೆ ಬೇಡ್ವಾ? ಅವರಿಗೆ ಅಕ್ಕಿ ಕೊಡುವ ಉದ್ದೇಶ ಇದ್ದರೆ, 7 ಕೆ.ಜಿಯಿಂದ 5 ಕೆ.ಜಿಗೆ ಯಾಕೆ ಕಡಿತ ಮಾಡಿದರು.

ಅದೆಲ್ಲ ಸುಳ್ಳು ಹೇಳಿಕೆ ಬಿಡ್ರಿ.. ಎಂದರು. ಕಾಂಗ್ರೆಸ್‌ನಲ್ಲಿ ಬೆಂಕಿ ಬಿದ್ದಿದೆ, ನಮ್ಮಲ್ಲಿ ಹೊಗೆಯಾಡುತ್ತಿದೆ ಎಂಬ ಕಟೀಲ್‌ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅವರ ಪಕ್ಷದಲ್ಲಿ ಹೊಗೆಯಾಡುತ್ತಿದೆ ಎಂಬುದನ್ನಾದರೂ ಒಪ್ಪಿಕೊಂಡಿದ್ದಾರೆ ಅಲ್ವಾ? ನಮ್ಮಲ್ಲಿ ಯಾವ ಬೆಂಕಿನೂ ಇಲ್ಲ, ಹೊಗೆನೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

5ಎ ಕೆನಾಲ್‌ ಬಗ್ಗೆ 4 ಗ್ರಾಪಂ ವ್ಯಾಪ್ತಿ ರೈತರ ಹೋರಾಟಕ್ಕೆ ಬೆಂಬಲ ಇದೆ. ಅವರ ಪರ ಅಸೆಂಬ್ಲಿಯಲ್ಲಿ ಒತ್ತಾಯಿಸಲಾಗುವುದು. ಈ ಸರ್ಕಾರ ಮಾಡುವ ವಿಶ್ವಾಸ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಬಸನಗೌಡ ತುರುವಿಹಾಳ, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಚಿಟ್ಟೂರಿ ಶ್ರೀನಿವಾಸ್‌ ಇದ್ದರು.

ಟಾಪ್ ನ್ಯೂಸ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಮೂರು ದಿನವಾದರೂ ಪತ್ತೆಯಾಗಿಲ್ಲ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ

ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ

5arrest

ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ

cm-b-bommai

ಕಡಲ್ಕೊರೆತದ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಿಎಂ ಬೊಮ್ಮಾಯಿ

ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು

4land

ಬಂಟ್ವಾಳ: ಪಂಜಿಕಲ್ಲು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ ಸುನೀಲ್‌ ಭೇಟಿ

3bharathshetty

ಅಕ್ರಮ ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಬಳಕೆ: ಡಾ.ಭರತ್ ಶೆಟ್ಟಿ ವೈಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19lake

ಕೆರೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಿ

15protest

ಕನ್ಹಯ್ಯಲಾಲ್‌ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿ

14voilencwe

ಹಿಂಸಾ ಕೃತ್ಯ ಹತ್ತಿಕ್ಕುವ ಕೆಲಸವಾಗಲಿ: ವಿರೂಪಾಕ್ಷಪ್ಪ

13water

ಕಲುಷಿತ ನೀರು ಸೇವನೆ: ಜೂಕೂರು ಜನ ಅಸ್ವಸ್ಥ

23theft

8 ಅಂಗಡಿಗಳಲ್ಲಿ ಸರಣಿ ಕಳ್ಳತನಕ್ಕೆ ಯತ್ನ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಮೂರು ದಿನವಾದರೂ ಪತ್ತೆಯಾಗಿಲ್ಲ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ

ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ

5arrest

ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ

cm-b-bommai

ಕಡಲ್ಕೊರೆತದ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಿಎಂ ಬೊಮ್ಮಾಯಿ

ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.