ನಿವೇಶನ ಹಂಚಿಕೆಯಾಗ್ತಿಲ್ಲ…ಭೂ ಖರೀದಿ ನಿಲ್ತಿಲ್ಲ

Team Udayavani, Jul 2, 2021, 9:11 PM IST

Udayavani Kannada Newspaper

ಸಿಂಧನೂರು: ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವುದಕ್ಕೆ 30.8 ಎಕರೆ ಭೂಮಿಯಿದ್ದರೂ ಪ್ರಗತಿಯಿಲ್ಲ. ಮತ್ತೆ ಜಮೀನು ಖರೀದಿಸುವ ಉತ್ಸಾಹ ಪ್ರದರ್ಶಿಸಿದ ಇಲ್ಲಿನ ನಗರಸಭೆಯ ಪ್ರಸ್ತಾವನೆಗೆ ರಾಜೀವ್‌ ಗಾಂಧಿ  ವಸತಿ ನಿಗಮ ಪರೋಕ್ಷವಾಗಿ ಚಾಟಿ ಬೀಸಿದೆ. ನಗರದಲ್ಲಿ ವಸತಿ ಸೌಲಭ್ಯ ವಂಚಿತ 5 ಸಾವಿರಕ್ಕೂ ಹೆಚ್ಚು ಜಾಗಕ್ಕಾಗಿ ಅರ್ಜಿ ಸಲ್ಲಿಸಿ 5 ವರ್ಷ ಕಳೆದರೂ ಅವುಗಳಿಗೆ ಮೋಕ್ಷ ಕಲ್ಪಿಸುವಲ್ಲಿ ಆಡಳಿತ ಪಲ್ಟಿ ಹೊಡೆದಿದೆ.

ಈಗಾಗಲೇ ಲಭ್ಯ ಇರುವ ಜಮೀನು ಬಳಸಿಕೊಂಡು ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಜಿದಾರರಿಗೆ ಮಂಜೂರಿ ಮಾಡುವ ಪ್ರಯತ್ನ ಫಲ ನೀಡಿಲ್ಲ. ಫಲಾನುಭವಿಗಳ ಆಯ್ಕೆಗೆ ಸಂಬಂ  ಧಿಸಿ ತೀರ್ಮಾನ ಕೈಗೊಳ್ಳುವುದಕ್ಕೂ ಕಾಳಜಿ ತೋರಿಲ್ಲ. ಇದ್ದ ಜಮೀನು ಬಳಸಿಕೊಳ್ಳದೇ ಮತ್ತೆ ಜಮೀನು ಬೇಕೆಂದು ಕೇಳಿದ್ದಕ್ಕೆ ರಾಜೀವ್‌ ಗಾಂಧಿ  ವಸತಿ ನಿಗಮ ಚಾಟಿ ಬೀಸಿದೆ. 30 ಎಕರೆ ಲಭ್ಯ-ಪ್ರಗತಿ ಏನು?: ನಿವೇಶನ ಹಂಚಿಕೆ ಮಾಡುವ ಮುನ್ನ ಮೊದಲು ಸರಕಾರಿ ಭೂಮಿಗೆ ಆದ್ಯತೆ ನೀಡಬೇಕು.

ಹೀಗಿದ್ದಾಗಲೂ ನಗರಸಭೆ ವ್ಯಾಪ್ತಿಯಲ್ಲಿ 30.8 ಎಕರೆ ಭೂಮಿಯನ್ನು ಸರಕಾರದ ಹಣ ವ್ಯಯಿಸಿ ಖರೀದಿ ಮಾಡಲಾಗಿದೆ. ಸರ್ವೆ ನಂಬರ್‌ 626ರಲ್ಲಿ 11.30 ಎಕರೆ ಜಮೀನು ಪ್ರತಿ ಎಕರೆಗೆ 19 ಲಕ್ಷ ರೂ.ನಂತೆ ಹಣ ಪಾವತಿಸಿ ಪಡೆಯಲಾಗಿದೆ. ಸರ್ವೆ ನಂಬರ್‌ 44ರಲ್ಲಿ 18.12 ಎಕರೆ ಜಮೀನು ಪ್ರತಿ ಎಕರೆಗೆ 22.50 ಲಕ್ಷ ರೂ. ಪಾವತಿಸಿ ಸರಕಾರದಿಂದ ಖರೀದಿ ಮಾಡಲಾಗಿದೆ. ಈ ಜಮೀನಿನಲ್ಲಿ ನಿವೇಶನಗಳನ್ನು ಕಲ್ಪಿಸುವ ಬದಲು ಮತ್ತೆ 42 ಎಕರೆ ಭೂಮಿ ಖರೀದಿಸಲು ಬೇಡಿಕೆ ಇಟ್ಟಿದ್ದನ್ನು ನಿಗಮ ಪ್ರಶ್ನಿಸಿದೆ. ಖರೀದಿಸಿದ ಜಮೀನಿನಲ್ಲಿ ನಿವೇಶನ ಕಲ್ಪಿಸಿದ ಯಾವುದೇ ಮಾಹಿತಿ ಇಲ್ಲವಾದ್ದರಿಂದ ಆ ಬಗ್ಗೆ ಪ್ರಗತಿ ವಿವರ ನೀಡಿ ಎಂದು ರಾಜೀವ್‌ ಗಾಂಧಿ  ವಸತಿ ನಿಗಮ ಕೇಳಿದೆ.

ಇತ್ಯರ್ಥ ಕಾಣದ ಹಳ್ಳ-ಕೊಳ್ಳ ತಗಾದೆ: ಬಡವರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ನಿವೇಶನ ಒದಗಿಸಿ, ಅಲ್ಲಿ ಆಶ್ರಯ ಮನೆ ಕಟ್ಟಲು ಖರೀದಿ ಮಾಡಲಾದ ಜಮೀನುಗಳ ಕುರಿತು ತಗಾದೆ ಎದ್ದಿವೆ. ಖರೀದಿ ಮಾಡಲಾದ 11.36 ಎಕರೆ ವಾಸಕ್ಕೆ ಯೋಗ್ಯವಾಗಿಲ್ಲ. 18.12 ಎಕರೆ ಖರೀದಿ ಮಾಡಿದ್ದರೂ ಹೋಗಲು ದಾರಿಯಿಲ್ಲ. ಇಂತಹ ವಿವಾದಗಳೇ ದೊಡ್ಡವಾಗಿದ್ದು, ಅವುಗಳಿಗೆ ಪರಿಹಾರ ಕಲ್ಪಿಸುವ ಇಲ್ಲವೇ ತಾರ್ಕಿಕ ಅಂತ್ಯಕ್ಕೆ ತಲುಪಿಸುವ ಪ್ರಯತ್ನಗಳು ನಡೆದಿಲ್ಲ. ಮಾಜಿ ಶಾಸಕರು ಹಾಗೂ ಹಾಲಿ ಶಾಸಕರ ಪೈಕಿ ಯಾರು ತಪ್ಪಿತಸ್ಥರು ಎಂಬ ಹುಡುಕಾಟವೇ ದೊಡ್ಡದಾಗಿದೆ. ಈ ನಡುವೆ ನಿವೇಶನ ಬಯಸಿದ ಬಡವರು ಬಡವಾಗುತ್ತಿದ್ದಾರೆ.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.