ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ

Team Udayavani, Jan 27, 2018, 4:55 PM IST

ದೇವದುರ್ಗ: ಭಾರತದ ಸಂವಿಧಾನವನ್ನು 26 ನವೆಂಬರ್‌ 1949ರಂದು ಅಂಗೀಕರಿಸಿ 26 ಜನವರಿ 1950 ರಂದು ಜಾರಿಗೊಳಿಸಲಾಯಿತು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚಸಿದ್ದರು. ಸಂವಿಧಾನ ಮುಂದೆ ಯಾರೂ
ದೊಡ್ಡವರಲ್ಲ ಎಂದು ತಹಶೀಲ್ದಾರ ಶಿವಶರಣಪ್ಪ ಕಟ್ಟೋಳಿ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಸಾರ್ವಜನಿಕ ಕ್ಲಬ್‌ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಪ್ರತಿಯೊಂದು ದೇಶದ ಮೂಲಭೂತ ಕಾನೂನಾಗಿದೆ. ಒಂದು ದೇಶದ ಕಾನೂನುಗಳನ್ನು
ರೂಪಿಸುವುದಕ್ಕೆ ಸಂವಿಧಾನ ತನ್ನದೇ ಆದ ಮೂಲಗಳನ್ನು ಒದಗಿಸಿಕೊಡುತ್ತದೆ. ದೇಶದ ಜನರ ಭಾವನೆ ಮತ್ತು ಅಗತ್ಯಗಳಿಗೆ ತಕ್ಕಂತೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಿದ್ದೇವೆ. ಅಲ್ಲದೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಾಜ್ಯ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು. 

ಹಿಂದುಳಿದ ಪ್ರದೇಶಗಳಿಗೆ 371ನೇ(ಜೆ) ಕಲಂ ಮೂಲಕ ವಿಶೇಷ ಸ್ಥಾನಮಾನ ಕೊಟ್ಟಿದ್ದರೂ ವೈವಿಧ್ಯೆತೆಯಲ್ಲಿ ಏಕತೆ ಸಾರಿದ್ದೇವೆ ಎಂಬುದು ನಮ್ಮ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. 

ಸಂವಿಧಾನ ರಚನೆಗಾಗಿ ಶ್ರಮಿಸಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಇಲ್ಲಿ ಸ್ಮರಿಸಬೇಕಾಗಿದೆ. ದೇಶಕ್ಕಾಗಿ ಸ್ವಾತಂತ್ರ್ಯ ಸೌಲಭ್ಯ ಕಲ್ಪಿಸುವಲ್ಲಿ ತ್ಯಾಗ ಬಲಿದಾನವಾದ ಮಹಾನಾಯಕರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಾಪಂ ಅಧ್ಯಕ್ಷ ಹನುಮಂತ ಕಟ್ಟಮನಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ ಅನಿಲ ಕುಮಾರ, ಬಿಇಒ ಎಸ್‌.ಎಂ. ಹತ್ತಿ, ತಾಪಂ ಅಧಿಕಾರಿ ಟಿ.ಜಿ. ವೀರನಾಯಕ, ಮುಖ್ಯಾಧಿಕಾರಿ ಫಿರೋಜಖಾನ್‌, ಸಿಪಿಐ ಟ. ಸಂಜೀವಕುಮಾರ, ಆದಿಕಮಲಮ್ಮ, ಶಿವರಾಜ ಬಿರಾದಾರ, ಪ್ರಾಚಾರ್ಯ ಎಂ.ಎಂ. ದೊಡ್ಡಮನಿ, ಇಕ್ಬಾಲ್‌, ರಾಘವೇಂದ್ರ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಶಿಕ್ಷಣ ಸುಧಾರಣೆಗೆ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದ್ದು,...

  • ಲಿಂಗಸುಗೂರು: ಕಳೆದ ತಿಂಗಳು ಕಾಲುವೆಗೆ ಹರಿಸಿದ ನೀರಿನ ಒತ್ತಡಕ್ಕೆ ಹಾಗೂ ಇತ್ತೀಚೆಗೆ ಎರಡ್ಮೂರು ದಿನ ಸುರಿದ ಮಳೆಗೆ ತಾಲೂಕಿನ ರಾಂಪುರ ಏತ ನೀರಾವರಿ ಯೋಜನೆ ಮುಖ್ಯ ನಾಲೆಯಲ್ಲಿ...

  • „ಶಿವರಾಜ ಕೆಂಬಾವಿ ಲಿಂಗಸುಗೂರು: ಹೊರಗೆ ಹಸಿರಿನಿಂದ ಕಂಗೊಳಿಸುವ ಸುಂದರ ಪರಿಸರ, ಒಳಗೆ ಹೋದರೆ ಕಟ್ಟಡಗಳ ಸಿಮೆಂಟ್‌ ಉದುರಿ ಕಾಣುವ ಕಬ್ಬಿಣದ ಸರಳುಗಳು, ಕಟ್ಟಡಗಳಲ್ಲಿ...

  • ರಾಯಚೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಜಿಲ್ಲೆಯ ಗೂಗಲ್‌ ಬ್ರಿಡ್ಜ್ ಕಂ ಬ್ಯಾರೇಜ್‌ನ ಸ್ಥಬ್ಧಚಿತ್ರ ಮಿಂಚಲಿದ್ದು, ಅದರೊಟ್ಟಿಗೆ ಪ್ರಧಾನಮಂತ್ರಿ ಕೃಷಿ...

  • ಚಂದ್ರಶೇಖರ ನಾಡಗೌಡ ಜಾಲಹಳ್ಳಿ: ಪಟ್ಟಣದ 33 ಕೆವಿ ವಿದ್ಯುತ್‌ ಪ್ರಸರಣ ಉಪ ಕೇಂದ್ರ ಅಲ್ಪ ಮಳೆ ಸುರಿದರೂ ಜಲಾವೃತ್ತವಾಗುವುದರಿಂದ ಕೇಂದ್ರ ವ್ಯಾಪ್ತಿಯ ಹಳ್ಳಿಗಳಲ್ಲಿ...

ಹೊಸ ಸೇರ್ಪಡೆ