ರಾಯಚೂರಲ್ಲಿ ಆಕ್ಸಿಜನ್ ಸಿಗದೆ ಆಸ್ಪತ್ರೆ ಎದುರು ರೋಗಿ ನರಳಾಟ
Team Udayavani, May 17, 2021, 1:06 PM IST
ರಾಯಚೂರು: ಒಪೆಕ್ ಕೋವಿಡ್ ಆಸ್ಪತ್ರೆಗೆ ಆಗಮಿಸಿದ್ದ ಕೋವಿಡ್ ಸೋಂಕಿತ ವ್ಯಕ್ತಿಗೆ ಆಕ್ಸಿಜನ್ ಸಿಗದೆ ಪರದಾಡಿದ ಘಟನೆ ನಡೆದಿದ್ದು, ಇದರ ದೃಶ್ಯದ ವೀಡಿಯೋದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಒಂದೆಡೆ ಜಿಲ್ಲಾಡಳಿತ ಆಕ್ಸಿಜನ್ ಕೊರತೆ ಇಲ್ಲ ಎನ್ನುತ್ತಿದ್ದರೆ ಮತ್ತೊಂದೆಡೆ ಆಕ್ಸಿಜನ್ ಸಿಗದೆ ರೋಗಿಗಳು ಪರದಾಡುವಂತಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಕೇವಲ ಆಕ್ಸಿಜನ್ ಸಮಸ್ಯೆ ಮಾತ್ರವಲ್ಲದೆ ಕೋವಿಡ್ ಕೇಂದ್ರದಲ್ಲಿ ಸೌಲಭ್ಯಗಳಿಲ್ಲದೇ ರೋಗಿಗಳು ಪರದಾಡುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡುತ್ತಿಲ್ಲ. ಸಿಬ್ಬಂದಿ ಸಕಾಲಕ್ಕೆ ಸ್ಪಂದಿಸುತ್ತಿಲ್ಲ ಎಂದು ರೋಗಿಗಳ ಸಂಬಂಧಿಗಳು ದೂರುತ್ತಿದ್ದಾರೆ.