Udayavni Special

ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಿದ್ಧನಿಲ್ಲ: ಪಾಟೀಲ್‌

ನಂದವಾಡಗಿ ಏತ ನೀರಾವರಿ ಮೂಲಕ 2.25 ಟಿಎಂಸಿ ನೀರು ಬಳಕೆಗೆ ಕಾರ್ಯಾದೇಶವಾಗಿದೆ

Team Udayavani, Jan 26, 2021, 6:34 PM IST

ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಿದ್ಧನಿಲ್ಲ: ಪಾಟೀಲ್‌

ಮಸ್ಕಿ: ನಾರಾಯಣಪುರ ಬಲದಂಡೆ 5ಎ ಶಾಖಾ ಕಾಲುವೆ ಅನುಷ್ಠಾನಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಆಗದ್ದನ್ನು ಕೇಳಿದರೆ ಮಾಡಲು ಯಾರಿಂದ ಸಾಧ್ಯ?. ಒಂದು ವೇಳೆ ಇದರ ಜಾರಿಗೆ ತಾಂತ್ರಿಕ ಸಾಧ್ಯತೆ ಇದೆ ಎನ್ನುವವರು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು. ಪಟ್ಟಣದ ಬಸವೇಶ್ವರ ಕಾಲೋನಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೈತರ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಿದ್ಧನಿಲ್ಲ. 5ಎ ಆಗುತ್ತದೆ ಎಂದು ರೈತರಿಗೆ ಸುಳ್ಳು ಭರವಸೆ ನೀಡಿ ಚುನಾವಣೆ ಎದುರಿಸಲಾರೆ. ಜನರ ಬೆಂಬಲ ಇದ್ದರೆ ನಾನು ಗೆಲ್ಲುವುದು ಖಾತ್ರಿ. ಆದರೆ ಕಾಂಗ್ರೆಸ್‌ನವರು ಸೇರಿ ಕೆಲವು ರಾಜಕೀಯ ಮುಖಂಡರು ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. 67 ದಿನಗಳಿಂದ ನಡೆದ ಧರಣಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿ ಎಲ್ಲ ಹಂತದ ಅಧಿ
ಕಾರಿಗಳು ಭೇಟಿ ನೀಡಿ ರೈತರಿಗೆ ಮನವೊಲಿಸುವ ಕೆಲಸ ಮಾಡಿದ್ದಾಗಿದೆ ಎಂದರು.

5ಎ ಕಾಲುವೆ ಜಾರಿಗೆ ಇರುವ ತಾಂತ್ರಿಕ ಸಮಸ್ಯೆ ಕುರಿತು ಮನವರಿಕೆ ಮಾಡಿದಾಗಲೂ ರೈತರು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕೆಲವು ರೈತರು ಇದನ್ನು ಮನಗಂಡು ಸದ್ಯಕ್ಕೆ ಸಿಗುವ ನಂದವಾಡಗಿ ಏತ ನೀರಾವರಿ ಯೋಜನೆ ಒಪ್ಪಿಕೊಂಡಿದ್ದಾರೆ. ಅಂತಹ ರೈತರ ನಿಯೋಗ ಬೆಂಗಳೂರಿಗೆ ಕರೆದೊಯ್ದು ಮಂತ್ರಿಗಳನ್ನು ಭೇಟಿ ಮಾಡಿಸಿದ್ದಾಗಿದೆ. ಇನ್ನೇನು ನಂದವಾಡಗಿ ಏತ ನೀರಾವರಿ ಮೂಲಕ 2.25 ಟಿಎಂಸಿ ನೀರು ಬಳಕೆಗೆ ಕಾರ್ಯಾದೇಶವಾಗಿದೆ. ಹನಿ ನೀರಾವರಿ ಬದಲು ಹರಿ ನೀರಾವರಿಗೂ ಸರ್ಕಾರ ಒಪ್ಪಿಗೆ ನೀಡಿದೆ. ರೈತರು ಸದ್ಯಕ್ಕೆ ಸಿಗುವ ಈ ನೀರಾವರಿ ಸೌಲಭ್ಯ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ 5ಎ ಕಾಲುವೆ ಜಾರಿ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತದೆ ಎಂದು ಮನವಿ ಮಾಡಿದರು.

ಪಿತೂರಿ ನಡೆಯುತ್ತಿದೆ: ಸದ್ಯ ಎದುರಾಗುವ ಮಸ್ಕಿ ಉಪ ಚುನಾವಣೆ ಕಾರಣಕ್ಕಾಗಿಯೇ ಇದನ್ನು ಇಶ್ಯೂ ಮಾಡಲಾಗಿದೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸುವುದೇ ಕೆಲವು ಹೋರಾಟಗಾರರ ಇಚ್ಛೆ. ರೈತರಿಗೆ ಎಲ್ಲ ರೀತಿಯಿಂದ ತಿಳಿ ಹೇಳಿದಾಗಲೂ ಹೋರಾಟ ಮುಂದುವರಿಸುವುದರ
ಹಿಂದಿನ ಉದ್ದೇಶ ಇದಲ್ಲದೇ ಮತ್ತೇನಿರಲು ಸಾಧ್ಯ?. ನನಗಂತೂ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಇಷ್ಟವಿಲ್ಲ. ಹೋರಾಟದ ವೇದಿಕೆಗೆ ತೆರಳಿದ್ದ
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಎಚ್‌.ಬಿ. ಮುರಾರಿ ಅಂತವರಿಗೆ ನೇರವಾಗಿ ನಾನೇ ಖುದ್ದು ಮಾತನಾಡಿದ್ದೇನೆ.

ತಾಂತ್ರಿಕವಾಗಿ ಈ ಯೋಜನೆ ಜಾರಿ ಮಾಡಲು ಸಾಧ್ಯವಿದ್ದರೆ ನಮ್ಮ ಜತೆ ಬನ್ನಿ. ನಿಮ್ಮನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತದೆ. ಸಚಿವರು, ಅ ಧಿಕಾರಿಗಳ ಜತೆ ಸಭೆ ಮಾಡಿ ನಿಮ್ಮ ವಿಚಾರ ಅವರ ಮುಂದಿಟ್ಟು ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದಿರುವೆ. ಆದರೆ ಅವರು ಬರಲಾರರು, ರೈತರು ಒಪ್ಪಲಾರರು. ಹೀಗಿದ್ದಾಗ ಈ ಪರಿಸ್ಥಿತಿ ತಿಳಿಗೊಳಿಸುವುದೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಇದ್ದರು.

ಟಾಪ್ ನ್ಯೂಸ್

ರಮೇಶ ಜಾರಕಿಹೊಳಿ ಪ್ರಕರಣದ ನಂತ್ರ ಬಹಳ‌ಷ್ಟು ಊಹಾಪೋಹಗಳು ಎದ್ದಿವೆ : ಬೊಮ್ಮಾಯಿ

ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ: ಶಾಸಕ ಸಂಗಮೇಶ್ ಎಚ್ಚರಿಕೆ

ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ: ಶಾಸಕ ಸಂಗಮೇಶ್ ಎಚ್ಚರಿಕೆ

ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸೋದು ತಪ್ಪಾ : 6 ಸಚಿವರ ಪರ ಕಟ್ಟಾ ಸುಬ್ರಮಣ್ಯ ಬ್ಯಾಟಿಂಗ್

ಮೋಡಿ ಮಾಡಿದ ಅಕ್ಷರ್ – ಅಶ್ವಿನ್: ಭಾರತದ ಪಾಲಿಗೆ ಟೆಸ್ಟ್ ಸರಣಿ, ಚಾಂಪಿಯನ್ ಶಿಪ್ ಗೆ ಆಯ್ಕೆ

ಮೋಡಿ ಮಾಡಿದ ಅಕ್ಷರ್ – ಅಶ್ವಿನ್: ಭಾರತದ ಪಾಲಿಗೆ ಟೆಸ್ಟ್ ಸರಣಿ, ಚಾಂಪಿಯನ್ ಶಿಪ್ ಗೆ ಆಯ್ಕೆ

ಐಟಿ ದಾಳಿ ಬಗ್ಗೆ ಟ್ವೀಟ್ ಮಾಡಿದ ನಟಿ ತಾಪ್ಸಿ ಪನ್ನು

ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದ ಮೊರೆ, ನಮಗೆ ಯಾವುದೇ ಭಯವಿಲ್ಲ: ಸಚಿವ ನಾರಾಯಣಗೌಡ

ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದ ಮೊರೆ, ನಮಗೆ ಯಾವುದೇ ಭಯವಿಲ್ಲ: ಸಚಿವ ನಾರಾಯಣಗೌಡ

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10 High school but not college at all!

10 ಪ್ರೌಢಶಾಲೆ ಇದ್ದರೂ ಒಂದೂ ಕಾಲೇಜಿಲ್ಲ!

Location verification by the authorities

ಲೋಡ್‌ ಶೆಡ್ಡಿಂಗ್‌ಗೆ ಜನ ಹೈರಾಣ:ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಅಕ್ಕಿ ಅಕ್ರಮ ಅಡ್ಡೆಗಳ ಮೇಲೆ ದಿಢೀರ್‌ ದಾಳಿ

ಅಕ್ಕಿ ಅಕ್ರಮ ಅಡ್ಡೆಗಳ ಮೇಲೆ ದಿಢೀರ್‌ ದಾಳಿ

Jaladurga

ಜಲದುರ್ಗ ನೀರಾವರಿ ಯೋಜನೆಗೆ ಮರುಜೀವ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

MUST WATCH

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಎತ್ತಿನಹೊಳೆ ಯೋಜನೆ ಕಾಮಗಾರಿ ಕಾರ್ಮಿಕರಿಗಿಲ್ಲ ಶುದ್ಧ ನೀರು

ಎತ್ತಿನಹೊಳೆ ಯೋಜನೆ ಕಾಮಗಾರಿ ಕಾರ್ಮಿಕರಿಗಿಲ್ಲ ಶುದ್ಧ ನೀರು

ರಮೇಶ ಜಾರಕಿಹೊಳಿ ಪ್ರಕರಣದ ನಂತ್ರ ಬಹಳ‌ಷ್ಟು ಊಹಾಪೋಹಗಳು ಎದ್ದಿವೆ : ಬೊಮ್ಮಾಯಿ

ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ: ಶಾಸಕ ಸಂಗಮೇಶ್ ಎಚ್ಚರಿಕೆ

ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ: ಶಾಸಕ ಸಂಗಮೇಶ್ ಎಚ್ಚರಿಕೆ

ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸೋದು ತಪ್ಪಾ : 6 ಸಚಿವರ ಪರ ಕಟ್ಟಾ ಸುಬ್ರಮಣ್ಯ ಬ್ಯಾಟಿಂಗ್

ಮೋಡಿ ಮಾಡಿದ ಅಕ್ಷರ್ – ಅಶ್ವಿನ್: ಭಾರತದ ಪಾಲಿಗೆ ಟೆಸ್ಟ್ ಸರಣಿ, ಚಾಂಪಿಯನ್ ಶಿಪ್ ಗೆ ಆಯ್ಕೆ

ಮೋಡಿ ಮಾಡಿದ ಅಕ್ಷರ್ – ಅಶ್ವಿನ್: ಭಾರತದ ಪಾಲಿಗೆ ಟೆಸ್ಟ್ ಸರಣಿ, ಚಾಂಪಿಯನ್ ಶಿಪ್ ಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.