ಕಾರ್ಯಾಗಾರ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಿ

Team Udayavani, Oct 2, 2019, 2:41 PM IST

ರಾಯಚೂರು:ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಆಯ್ಕೆಯಾಗಿದ್ದು, ಈ ನಿಟ್ಟಿನಲ್ಲಿ ಅ.4ರಿಂದ ಹಮ್ಮಿಕೊಂಡಿರುವ ಕಾರ್ಯಾಗಾರ ಅಚ್ಚುಕಟ್ಟಾಗಿ ನೆರವೇರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಆಯಾಮಗಳ ಕುರಿತು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅ.4 ಮತ್ತು 5ರಂದು ಕಾರ್ಯಾಗಾರ ಜರುಗಲಿದೆ. ಇದರಲ್ಲಿ ಐದು ಪ್ಯಾನಲ್‌ಗ‌ಳಲ್ಲಿ ಚರ್ಚೆ ನಡೆಯಲಿದ್ದು, ಚರ್ಚೆ ನಡೆಯುವ ಕೊಠಡಿಗಳಲ್ಲಿ ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌, ಮೈಕ್‌ಸೆಟ್‌, ವಿಡಿಯೋಗ್ರಾಫಿ ಸೇರಿದಂತೆ ಅಲ್ಲಿ ಚರ್ಚೆಯಾಗುವ ವಿಷಯಗಳ ನಡಾವಳಿಗಳನ್ನು ಸಿದ್ಧಪಡಿಸಲು ಪರಿಣಿತರನ್ನು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ನಿಯೋಜಿಸಬೇಕು ಎಂದರು.

ಜಿಲ್ಲೆಯ ಕೃಷಿ, ಕೈಗಾರಿಕೆ, ಮೂಲಭೂತ ಸೌಕರ್ಯಗಳು, ಕೌಶಲ್ಯಾಭಿವೃದ್ಧಿ, ಆರೋಗ್ಯ ಮತ್ತು ಶೈಕ್ಷಣಿಕ ಸೂಚ್ಯಂಕಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಕಾರ್ಯಾಗಾರ ಬಹಳ ಮಹತ್ವ ಪಡೆಯಲಿದೆ. ಕಾರ್ಯಾಗಾರದಲ್ಲಿ ಯಾವುದೇ ಲೋಪದೋಷಗಳು ಕಾಣದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ, ತೋಟಗಾರಿಕೆ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿರಿಯ ಐಎಎಸ್‌ ಅಧಿ ಕಾರಿಗಳಿಗೆ ಲೈಸನಿಂಗ್‌ ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಅವರು ವಾಸ್ತವ್ಯ ಸೇರಿದಂತೆ ಕಾರ್ಯಾಗಾರದಲ್ಲಿ ಭಾಗವಹಿಸಲು ಹಿರಿಯ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಬರುವ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ತಮ್ಮ ಇಲಾಖೆಗಳ ವಿಷಯಗಳನ್ನು ನಿಖರವಾಗಿ ಮಂಡಿಸಬೇಕು. ಇದಕ್ಕಾಗಿ ಅಂಕಿ ಸಂಖ್ಯೆಗಳ ಸಹಿತ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಅಪರ ಜಿಲ್ಲಾ ಧಿಕಾರಿ ಗೋವಿಂದ ರೆಡ್ಡಿ, ಐಎಎಸ್‌ ಪ್ರೊಬೇಶನರಿ ಅಧಿಕಾರಿ ಯುಕೇಶ ಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಇರ್ಫಾನ್‌, ಡಿಡಿಪಿಐ ಬಿ.ಕೆ. ನಂದನೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಎಂ.ಎಸ್‌.ಕೆ.ನಸೀರ್‌ ಸೇರಿದಂತೆ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಈಗಾಗಲೇ ಘೋಷಣೆಯಾಗಿರುವ ಕಲಬುರಗಿ ರೈಲ್ವೆ ವಿಭಾಗವನ್ನು ಆರಂಭಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಹೋರಾಟದ ರೂಪುರೇಷೆ ರೂಪಿಸಿಲು ಶುಕ್ರವಾರ...

  • „ಸಿದ್ಧಯ್ಯ ಸ್ವಾಮಿ ಕುಕನೂರು ರಾಯಚೂರು: ಸಹಸ್ರಾರು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವ ರಾಯಚೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳಾಭಾವದ್ದೆ ಸಮಸ್ಯೆ. ಗ್ರಂಥಾಲಯಕ್ಕೆ...

  • „ನಾಗರಾಜ ತೇಲ್ಕರ್‌ ದೇವದುರ್ಗ: ಪಟ್ಟಣದ ಕೋರ್ಟ್‌ ವ್ಯಾಪ್ತಿಯ ಸಾರ್ವಜನಿಕ ಕ್ಲಬ್‌ ಆವರಣ ಹಗಲು ಸಭೆ, ಸಮಾರಂಭಗಳಿಗೆ ವೇದಿಕೆ ಆದರೆ, ರಾತ್ರಿ ಕುಡುಕರ ಅಡ್ಡೆಯಾಗಿ...

  • ರಾಯಚೂರು: ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆಯಲ್ಲಿ ಶೇ.6ರಷ್ಟನ್ನು ಗ್ರಂಥಾಲಯ ನಿರ್ವಹಣೆಗೆ ನೀಡಬೇಕು ಎಂಬ ನಿಯಮವನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳು...

  • ಲಿಂಗಸುಗೂರು: ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಿರುವ ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ ದಾಖಲೆಯ ಚಿನ್ನ ಉತ್ಪಾದಿಸಿದೆ. 2019-20ನೇ ಸಾಲಿನಲ್ಲಿ...

ಹೊಸ ಸೇರ್ಪಡೆ