Udayavni Special

ಖಾಸಗೀಕರಣ -ಶುಲ ಇಳಿಕೆ; ನಲುಗಿದ ಎಪಿಎಂಸಿ

ಮೆಣಸಿನಕಾಯಿ ಬೆಳೆಯಿಂದ ಒಂದು ಕೋಟಿಗೂ ಅಧಿಕ ಶುಲ್ಕ ಸಂಗ್ರಹವಾಗುತ್ತಿತ್ತು.

Team Udayavani, Feb 24, 2021, 6:26 PM IST

ಖಾಸಗೀಕರಣ -ಶುಲ ಇಳಿಕೆ; ನಲುಗಿದ ಎಪಿಎಂಸಿ

ರಾಯಚೂರು: ರಾಜ್ಯದಲ್ಲೇ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿದ್ದ ರಾಯಚೂರಿನ ರಾಜೇಂದ್ರ ಗಂಜ್‌ಗೆ ಈಗ ಆರ್ಥಿಕ ಗ್ರಹಣ ಹಿಡಿದಿದೆ. ಖಾಸಗೀಕರಣ ಹಾಗೂ ಶುಲ್ಕ ಇಳಿಕೆಯಿಂದಾಗಿ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ನಿರ್ವಹಣೆ ಸವಾಲು ಆಡಳಿತ ಮಂಡಳಿ ಕಂಗೆಡಿಸಿದೆ. ಕಳೆದ ವರ್ಷ ಮೇನಲ್ಲಿ ಸರ್ಕಾರ ಎಪಿಎಂಸಿ ಖಾಸಗೀಕರಣ ಮಸೂದೆ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆ ಮಾಡಿತು. ಈ ಎರಡು ಕಾರಣಗಳಿಂದ ಎಪಿಎಂಸಿ ದೊಡ್ಡ ಪೆಟ್ಟು ಬಿದ್ದಂತಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 18.18 ಕೋಟಿ ರೂ. ಆದಾಯ ಕಂಡಿದ್ದ ಎಪಿಂಎಸಿಗೆ ಈ ಸಾಲಿನಲ್ಲಿ ಈವರೆಗೆ 5 ಕೋಟಿ ಕೂಡ ಸಂಗ್ರಹಗೊಂಡಿಲ್ಲ. 2020ರ ಏಪ್ರಿಲ್‌, ಮೇ ತಿಂಗಳಲ್ಲಿ ಇನ್ನೂ ಮಾರುಕಟ್ಟೆ ಶುಲ್ಕ 1.50 ರೂ. ಇದ್ದ ಕಾರಣ ಎರಡು ಕೋಟಿಗೂ ಅಧಿಕ ಶುಲ್ಕ ಗ್ರಹಗೊಂಡಿತ್ತು.ಅದಾದ ಮೇಲೆ ಶುಲ್ಕ 35 ಪೈಸೆಗೆ ಇಳಿಕೆಯಾಯಿತು.ವರ್ತಕರ ಒತ್ತಡದಿಂದ 60 ಪೈಸೆಗೆ ಹೆಚ್ಚಿಸಲಾಯಿತು.

ಇದರಿಂದ ಕೇವಲ ಎರಡು ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇನ್ನೊಂದು ತಿಂಗಳಲ್ಲಿ 40ರಿಂದ 50 ಲಕ್ಷ ರೂ. ಸಂಗ್ರಹವಾದರೆ ಹೆಚ್ಚು ಎನ್ನುವುದು ಅಧಿ
ಕಾರಿಗಳ ವಿವರಣೆ. ಈ ಕಾರಣಕ್ಕೆ ಎಪಿಎಂಸಿಗೆ ಆದಾಯ ಕುಗ್ಗಿದ್ದು, ನಿರ್ವಹಣೆ ಸವಾಲು ಎದುರಾಗಿದೆ.

ಶೇ.65 ಆದಾಯಕ್ಕೆ ಕೊಕ್ಕೆ: ಅಧಿಕಾರಿಗಳ ಮಾಹಿತಿ  ಪ್ರಕಾರ ಈ ವರ್ಷ ಶೇ.65-70ರಷ್ಟು ಆದಾಯಕ್ಕೆ ಕೊಕ್ಕೆ ಬಿದ್ದಿದೆ. ರೈತರ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿಸಿ ಅದರಿಂದ ಬರುತ್ತಿದ್ದ ಆದಾಯದಲ್ಲೇ ಎಪಿಎಂಸಿ ನಿರ್ವಹಿಸಲಾಗುತ್ತಿತ್ತು. ಖಾಸಗೀಕರಣದಿಂದ ರೈತರು ಬೇರೆ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಬಹುದಾಗಿದ್ದು, ವರ್ತಕರು ಎಪಿಎಂಸಿಗೆ ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಜಿಲ್ಲೆಯಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಯಿಂದಲೇ 10 ಕೋಟಿಗೂ
ಹೆಚ್ಚು ಆದಾಯ ಬರುತ್ತಿತ್ತು.

ಈ ಮೂರು ಉತ್ಪನ್ನಗಳು ಎಪಿಎಂಸಿ ಹೊರಗೆ ಖರೀದಿಯಾಗುತ್ತಿವೆ. ನೇರವಾಗಿ ಮಿಲ್ಲರ್ಗಳೇ ರೈತರಿಂದ ಖರೀದಿಸುತ್ತಿರುವ ಕಾರಣಕ್ಕೆ ಎಪಿಎಂಸಿಗೆ ಹಣವೇ ಇಲ್ಲದಾಗಿದೆ. ದೇವದುರ್ಗ ಎಪಿಎಂಸಿಯಿಂದ ಮೆಣಸಿನಕಾಯಿ ಬೆಳೆಯಿಂದ ಒಂದು ಕೋಟಿಗೂ ಅಧಿಕ ಶುಲ್ಕ ಸಂಗ್ರಹವಾಗುತ್ತಿತ್ತು.ಈ ವರ್ಷ ನಯಾಪೈಸೆ ಬಂದಿಲ್ಲ.

ಖರ್ಚಿಗೂ ಕತ್ತರಿ ಪ್ರಯೋಗ: ರಾಯಚೂರು ಎಪಿಎಂಸಿಯಲ್ಲಿ 16 ಪ್ಲಾಟ್‌ ಫಾರ್ಮ್ಗಳಿದ್ದು, 225 ವ್ಯಾಪಾರ ಮಳಿಗೆಗಳಿವೆ. ಎಪಿಎಂಸಿ ಹೊರಗೆ ವಹಿವಾಟು
ನಡೆಸಿದರೆ ಶುಲ್ಕ ಕಟ್ಟುವಂತಿಲ್ಲ ಎನ್ನುವ ಕಾರಣಕ್ಕೆ ವರ್ತಕರು ಎಪಿಎಂಸಿಯತ್ತ ಸುಳಿಯುತ್ತಿಲ್ಲ. ಇದರಿಂದ ನಿರ್ವಹಣೆ ಸವಾಲು ಎದುರಾಗಿದೆ. ಈಗ ಬಂದಿರುವ
ಆದಾಯದಲ್ಲಿ ನಿರ್ವಹಣೆಗಾಗಿ ಈಗಾಗಲೇ ಎರಡು ಕೋಟಿ ರೂ. ಖರ್ಚಾಗಿದೆ. ಎಲ್ಲ ಮಳಿಗೆಗಳಿಂದ ತಿಂಗಳಿಗೆ 1.20 ಲಕ್ಷ ರೂ. ಆದಾಯವಿದೆ. ಹೀಗಾಗಿ ಇರುವ
ಖರ್ಚುಗಳಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡಲು ಆಡಳಿತ ಮಂಡಳಿ ಮುಂದಾಗಿದೆ.

ಅನಗತ್ಯ ವಿದ್ಯುತ್‌ ಬಳಕೆಗೆ ಕಡಿವಾಣ ಹಾಕಲಾಗಿದೆ. 3 ಲಕ್ಷ ರೂ. ಬರುತ್ತಿದ್ದ ವಿದ್ಯುತ್‌ ಬಿಲ್‌ ಈಗ 1.80 ಲಕ್ಷ ರೂ. ಬರುತ್ತಿದೆ. ಕಂಪ್ಯೂಟರ್‌ ಆಪರೇಟರ್‌,
ಸಹಾಯಕರು, ಚಾಲಕರು, ಸೆಕ್ಯುರಿಟಿ ಗಾರ್ಡ್‌ ಸೇರಿದಂತೆ 96 ಸಿಬ್ಬಂದಿಗಳಲ್ಲಿ 60 ಜನರನ್ನು ತೆಗೆಯಲಾಗಿದೆ.

ಎಪಿಎಂಸಿ ಖಾಸಗೀಕರಣ, ಶುಲ್ಕ ಇಳಿಕೆಯಿಂದ ಎಪಿಎಂಸಿ ಆದಾಯದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಸರ್ಕಾರಕ್ಕೆ ಪಾವತಿಸಿದ ಶುಲ್ಕದ ಹಣ ಹೊರತಾಗಿಸಿ ಆವರ್ತ ನಿಧಿಯಲ್ಲೇ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈಗ ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಿಲ್ಲ. ಮಾರ್ಚ್‌ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು.
ಬಿ.ಎಂ. ಶ್ರೀನಿವಾಸ,
ಎಪಿಎಂಸಿ ಕಾರ್ಯದರ್ಶಿ

*ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ಜ್ಗಹ್‍‍ದಸ

ರಾಜ್ಯದಲ್ಲಿ ಇಂದು 15785 ಜನರಿಗೆ ಕೋವಿಡ್ ಸೋಂಕು : 146 ಮಂದಿ ಸಾವು!

fgdfgsddf

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ಗೆ ಕೋವಿಡ್ ಪಾಸಿಟಿವ್ ದೃಢ

fhfghdghdf

48 ಗಂಟೆಯೊಳಗೆ ಲಾಕ್ ಡೌನ್ ಘೋಷಿಸುವಂತೆ ತೆಲಂಗಾಣ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

ಗಹ್ಗದಸದ

ಕೋವಿಡ್ ಆತಂಕ : ರಾಜ್ಯಸರ್ಕಾರದಿಂದ ಯಾವುದೇ ಮಾರ್ಗಸೂಚಿ ಪ್ರಕಟ ಇಲ್ಲ

ಕಜಹಗ್ರದ

ಮುಷ್ಕರ ಸ್ಥಗಿತಗೊಳಿಸಿ, ಕೆಲಸಕ್ಕೆ ಹಾಜರಾಗಿ : ಸಾರಿಗೆ ನೌಕರರಿಗೆ ಬಸವರಾಜ ಬೊಮ್ಮಾಯಿ ಮನವಿ

gfgdd

ಒಂದು ಸಿಂಗಲ್ ಆಕ್ಸಿಜನ್ಗಾಗಿ ಇಡೀ ದಿನ ಒದ್ದಾಡಿದ್ದೀನಿ: ಕೋವಿಡ್ ಕರಾಳತೆ ಬಿಚ್ಚಿಟ್ಟ ಸಾಧುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

Poll

ಸ್ಟ್ರಾಂಗ್‌ ರೂಂ ಸೇರಿದ ಮತಯಂತ್ರ-ಭದ್ರತೆ

Ganekal

ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲು ಆಗ್ರಹಿಸಿ ರಸ್ತೆತಡೆ

ಮನಬವ್‍‍ರ

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

ಹ್ಜಜ

ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಜ್ಗಹ್‍‍ದಸ

ರಾಜ್ಯದಲ್ಲಿ ಇಂದು 15785 ಜನರಿಗೆ ಕೋವಿಡ್ ಸೋಂಕು : 146 ಮಂದಿ ಸಾವು!

fgdfgsddf

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ಗೆ ಕೋವಿಡ್ ಪಾಸಿಟಿವ್ ದೃಢ

19-26

ಕಲ್ಯಾಣದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ

19-25

ಅತಿ ಹೆಚ್ಚು ಮತದಾನ; ಯಾರಿಗೆ ವರದಾನ?

19-24

ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಪಾಲಕರು ಮಾಡಲಿ: ಸುಮಂಗಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.