ಕೇಳಿದರೂ ಸಿಗುತ್ತಿಲ್ಲ ಸರ್ಕಾರಕ್ಕೆ ಕ್ವಿಂಟಲ್‌ ಭತ್ತ!

ಸರಕಾರದ ಷರತ್ತುಗಳಿಗೆ ಬೆದರಿದ ಅನ್ನದಾತ

Team Udayavani, Dec 30, 2020, 4:58 PM IST

ಕೇಳಿದರೂ ಸಿಗುತ್ತಿಲ್ಲ ಸರ್ಕಾರಕ್ಕೆ ಕ್ವಿಂಟಲ್‌ ಭತ್ತ!

ಸಿಂಧನೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಅಧಿಕಾರಿಗಳುಉತ್ಸುಕವಾದರೂ ಕ್ವಿಂಟಲ್‌ ಭತ್ತವೂ ಮಾರಾಟಕ್ಕೆ ಬಂದಿಲ್ಲ.

ಸರಕಾರದಿಂದ ಆರಂಭಿಸುವ ಖರೀದಿ ಕೇಂದ್ರಗಳು ಮಾರುಕಟ್ಟೆಯಲ್ಲಿ ಬೆಲೆ ಚೇತರಿಸಲು ಬೇಕಾದ ಬೆದರುಗೊಂಬೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಈಗಾಗಲೇ ಖರೀದಿ ಆರಂಭಿಸಲುತಕ್ಕಡಿ ಹಿಡಿದು ಕುಳಿತರೂ ರೈತರುಮುಂದೆ ಬಂದಿಲ್ಲ. ಶೇ.17ಕ್ಕಿಂತಲೂಕಡಿಮೆ ತೇವಾಂಶ ಇರುವ ಭತ್ತವನ್ನೇತರಬೇಕು. ಪಹಣಿ ಕಾಲಂನಲ್ಲಿ ಭತ್ತದಬೆಳೆಯೆಂದು ನಮೂದಾಗಿರಬೇಕು. ಹಣವನ್ನು ಖರೀದಿಸಿದ ಮೇಲೆ ಬ್ಯಾಂಕ್‌ಖಾತೆಗೆ ಜಮಾ ಮಾಡಲಾಗುತ್ತದೆಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ರೈತರು ಹಿಂದೆ ಸರಿಯಲು ಕಾರಣವಾಗಿದೆ.

ನೋಂದಣಿಯಲ್ಲಿ ವೇಗ: ಸರಕಾರ ಘೋಷಿಸಿರುವ ಬೆಂಬಲ ಬೆಲೆಗೂಹಾಗೂ ಮಾರುಕಟ್ಟೆಯಲ್ಲಿಯಲ್ಲಿನ ಬೆಲೆಗೂ ಈ ಹಿಂದೆ ಕ್ವಿಂಟಲ್‌ಗೆ 400 ರೂ.ನಿಂದ 500 ರೂ. ನಷ್ಟು ವ್ಯತ್ಯಾಸ ಇದ್ದಾಗ ಅನ್ನದಾತರು ಖರೀದಿ ಕೇಂದ್ರದತ್ತ ಮುಖ ಮಾಡಿದ್ದರು. ನವೆಂಬರ್‌ನಲ್ಲಿಯೇಭತ್ತ ಮಾರಾಟ ಮಾಡುವುದಕ್ಕಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ದೇವದುರ್ಗದಲ್ಲಿ 121, ಲಿಂಗಸುಗೂರಿನಲ್ಲಿ 60, ಮಾನ್ವಿಯಲ್ಲಿ 303, ರಾಯಚೂರಿನಲ್ಲಿ 157 ರೈತರುಭತ್ತ ಮಾರಾಟಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿದರೆ, ಭತ್ತದ ಕಣಜಖ್ಯಾತಿಯ ಸಿಂಧನೂರಿನಲ್ಲಿ 2,056ರೈತರು ಭತ್ತ ಮಾರಾಟ ಮಾಡಲುಖರೀದಿ ಕೇಂದ್ರಗಳಲ್ಲಿ ಹೆಸರು ನಮೂದಿಸಿದ್ದರು. ರಾಜ್ಯದಲ್ಲಿಅತ್ಯಧಿಕ ಸಂಖ್ಯೆಯಲ್ಲಿ ತಾಲೂಕಿನಲ್ಲಿ ನೋಂದಣಿಯಾಗಿದ್ದು, ಗಮನಾರ್ಹ.ರಾಯಚೂರು ಜಿಲ್ಲೆಯ 2,697ರೈತರು 1.56 ಲಕ್ಷ ಕ್ವಿಂಟಲ್‌ಗ‌ೂ ಹೆಚ್ಚುಭತ್ತ ಕೊಡಲು ಸಿದ್ಧರಾಗಿದ್ದರು. ಆದರೆ,ಡಿಸೆಂಬರ್‌ ಕೊನೆಯ ಹೊತ್ತಿಗೆ ರೈತರೇ ಹಿಂದೆ ಸರಿದಂತಾಗಿದೆ.

ಅಧಿಕಾರಿಗಳ ತಂಡವೇ ಜಮೀನಿಗೆ: ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಅದನ್ನೇ ಎನ್ನುವ ಮಾತು ಭತ್ತ ಖರೀದಿ ವಿಷಯದಲ್ಲೂ ನಿಜವೆಂಬಂತಾಗಿದೆ. ಇತಿಹಾಸದದಲ್ಲಿಯಾವತ್ತೂ ಒಂದೇ ಒಂದು ಚೀಲ ಭತ್ತವನ್ನು ಖರೀದಿ ಮಾಡದಕೇಂದ್ರಗಳನ್ನು ಸಾರ್ಥಕಗೊಳಿಸುವ ಪ್ರಯತ್ನ ಫಲಕಾರಿಯಾಗಿಲ್ಲ. ಈ ಬಾರಿ ಅಕ್ಕಿ ಮಿಲ್ಲರ್ಗಳನ್ನು ಸೇರಿಸಿಕೊಂಡುಭತ್ತ ನುರಿಸಲು ಸಜ್ಜಾಗಿದ್ದರು. ಈ ಹಿಂದೆ ಜೋಳ, ರಾಗಿಯನ್ನುಪಡಿತರ ವಿತರಣೆಗೆ ಖರೀದಿಸುವಮೂಲಕ ಸರಕಾರ ರೈತರಿಗೂ ಹಾಗೂಪಡಿತರರಿಗೆ ಅನುಕೂಲ ಕಲ್ಪಿಸಿತ್ತು. ಅದೇ ಮಾದರಿಯನ್ನು ಭತ್ತಕ್ಕೆ ಅನ್ವಯಿಸಲು ಹೋದಾಗ ಯಶಸ್ಸು ಲಭಿಸಿಲ್ಲ.

ನೋಂದಣಿ ಪ್ರಮಾಣ ದಾಖಲಾರ್ಹವಾದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಭತ್ತ ಖರೀದಿ ಮಾಡಿ, ಕಳಂಕ ಮುಕ್ತವಾಗಲು ಇಲಾಖೆ ಮನಸ್ಸು ಮಾಡಿದರೂ ಸ್ಪಂದನೆ ನೀರಸವಾಗಿದೆ. ಪಟ್ಟು ಬಿಡದ ಇಲಾಖೆಯ ಅಧಿಕಾರಿಗಳ ತಂಡ ರೈತರ ಜಮೀನುಗಳಿಗೂ ಲಗ್ಗೆ ಹಾಕಿದೆ. ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ 1,868 ರೂ.ನಷ್ಟು ಬೆಲೆ ಇರುವುದರಿಂದ ಭತ್ತಕೊಡುವಂತೆ ಕೇಳುತ್ತಿದ್ದಾರೆ.

ಸರಕಾರ ಕೇಂದ್ರ ತೆರೆದ 2 ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಚೇತರಿಕೆಕಾಣಿಸಿರುವುದರಿಂದ ಯಾವೊಬ್ಬ ರೈತರು ಮಾರಾಟಕ್ಕೆ ಮುಂದಾಗುತ್ತಿಲ್ಲ. ಬಹುತೇಕರ ಬಳಿ ಭತ್ತವೂ ಇಲ್ಲ.100 ರೂ. ಕಡಿಮೆಯಾದರೂ ಸರಿ,ವ್ಯಾಪಾರಸ್ಥರಿಗೆ ಕೊಟ್ಟರೆ ನೇರವಾಗಿಹಣ ದೊರೆಯುತ್ತದೆಂಬ ಮಾರ್ಗತುಳಿದಿದ್ದಾರೆ. ಪರಿಣಾಮ ಭತ್ತವನ್ನು ಖರೀದಿಸಿ ಮಿಲ್‌ಗ‌ಳಲ್ಲಿ ನುರಿಸಿ ಮರಳಿ ಪಡಿತರರಿಗೆ ಅಕ್ಕಿಯನ್ನು ವಿತರಿಸಲು ಮುಂದಾಗಿದ್ದ ಇಲಾಖೆಗೆ ಸದ್ಯ ನಿರೀಕ್ಷಿತ ಸ್ಪಂದನೆ ಇಲ್ಲವಾಗಿದೆ.

ರೈಸ್‌ಮಿಲ್‌ ಅಸೋಸಿಯೇಶನ್‌ ಅಧ್ಯಕ್ಷರಿಗೂ ಮಾತನಾಡಲಾಗಿತ್ತು. ಖರೀದಿಗೆ ನಾವು ಸಿದ್ಧ. 1.56 ಲಕ್ಷ ಕ್ವಿಂಟಲ್‌ ನೋಂದಣಿ ಯಾಗಿದ್ದು,ಮಾರಾಟಕ್ಕೆ ಬರಬಹುದು. ನಾವು ಇಂದು ಕೂಡ ಮೂರ್‍ನಾಲ್ಕು ರೈತರನ್ನುಭೇಟಿಯಾಗಿ ಕೇಳಿದಾಗ, ಅವರು ಇನ್ನೆರಡು ದಿನ ನೋಡುವುದಾಗಿ ಹೇಳಿದ್ದಾರೆ. -ಅರಣುಕುಮಾರ್‌ ಸಂಗಾವಿ, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಯಚೂರು

-ಯಮನಪ್ಪ ಪವಾರ

ಟಾಪ್ ನ್ಯೂಸ್

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24corn

ಜೋಳ ಖರೀದಿಗೆ ಆಗ್ರಹಿಸಿ ಹೋರಾಟ: ಬಾದರ್ಲಿ

20protest

ಅಂಬೇಡ್ಕರ್ ಗೆ ಅವಮಾನ: ಹುಣಸೂರಿನಲ್ಲಿ ನ್ಯಾಯಾಧೀಶರ ವಿರುದ್ದ ಪ್ರತಿಭಟನೆ

8rice

4.92 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

7ambedkar

ಅಂಬೇಡ್ಕರ್‌ ಭಾವಚಿತ್ರ ಹಾಕಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

5gandhi

ಗಾಂಧೀಜಿ-ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಅಧ್ಯಯನಕ್ಕೆ ಸಿಗಲಿ ಮಾನ್ಯತೆ;  ವಿಶ್ವವಿದ್ಯಾನಿಲಯಗಳಲ್ಲಿ  ಹೆಸರಿಗಷ್ಟೇ ಅಧ್ಯಯನ ಪೀಠ

ಅಧ್ಯಯನಕ್ಕೆ ಸಿಗಲಿ ಮಾನ್ಯತೆ;  ವಿಶ್ವವಿದ್ಯಾನಿಲಯಗಳಲ್ಲಿ  ಹೆಸರಿಗಷ್ಟೇ ಅಧ್ಯಯನ ಪೀಠ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.