Udayavni Special

ರಾಯಚೂರು: ವ್ಯಾಪಾರ-ವಹಿವಾಟು ಮುಕ್ತ, ಮುಂಜಾಗ್ರತೆ ವಹಿಸಲು ಸಲಹೆ

ಅಲ್ಲದೇ ನಿತ್ಯ ಸ್ಯಾನಿಟೈಸೇಶನ್‌ ಮಾಡುವಂತೆಯೂ ತಿಳಿಸಲಾಗಿದೆ ಎಂದು ವಿವರಿಸುತ್ತಾರೆ ಅಧಿಕಾರಿಗಳು

Team Udayavani, Jun 21, 2021, 8:13 PM IST

Unlock

ರಾಯಚೂರು: ಕೊರೊನಾ 2ನೇ ಅಲೆ ಕಾರಣಕ್ಕೆ ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಕೆಲ ದಿನಗಳಿಂದ ಜಿಲ್ಲಾದ್ಯಂತ ಹೇರಿದ್ದ ಲಾಕ್‌ ಡೌನ್‌ ತೆರವುಗೊಳಿಸಿದ್ದು, ಸೋಮವಾರದಿಂದ ವ್ಯಾಪಾರ ವಹಿವಾಟಿಗೆ ಮುಕ್ತಗೊಳಿಸಲಾಗಿದೆ. ಸಂಜೆ 7ಗಂಟೆ ನಂತರ ಮತ್ತೆ ನೈಟ್‌ ಕರ್ಫ್ಯೂ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನಿರ್ದಿಷ್ಟ ವ್ಯಾಪಾರ ವಹಿವಾಟು ಹೊರತಾಗಿಸಿ ಬಹುತೇಕ ಎಲ್ಲ ವ್ಯಾಪಾರ ಮೊದಲಿನಂತೆ ಇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೋವಿಡ್‌-19ರ 2ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಜೂ.21ರ ಬೆಳಗ್ಗೆ 6 ಗಂಟೆಯಿಂದ ಜು.5ರ ಬೆಳಗ್ಗೆ 5 ಗಂಟೆವರೆಗೆ ಜಿಲ್ಲಾದ್ಯಂತ
ಕಂಟೈನ್‌ಮೆಂಟ್‌ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಕೆಲವೊಂದು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಅಗತ್ಯ ವಸ್ತುಗಳು ಖರೀದಿ, ಅಗತ್ಯ ಸೇವೆಗಳು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಒಳಗೊಂಡಂತೆ ಇನ್ನೂ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನೂ ನಿತ್ಯ ಸಂಜೆ 7ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ವಾರಂತ್ಯದ ಕರ್ಫ್ಯೂನ್ನು ಜೂ.25ರ ರಾತ್ರಿ 7ಗಂಟೆಯಿಂದ ಜೂ.28ರ ಬೆಳಗ್ಗೆ 5ರ ವರೆಗೆ ಹಾಗೂ ಜು.2ರ ರಾತ್ರಿ 7 ಗಂಟೆಯಿಂದ ಜು.5ರ ಬೆಳಗ್ಗೆ 5ರವರೆಗೆ ಜಾರಿಗೊಳಿಸಲಾಗುವುದು.

ಹವಾನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ಶಾಪಿಂಗ್‌ ಸಂಕೀರ್ಣಗಳು, ಮಾಲ್‌ಗ‌ಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಹವಾನಿಯಂತ್ರಿತ ಹೊರತುಪಡಿಸಿ ಎಲ್ಲ ಹೋಟೆಲ್‌ಗ‌ಳು, ರೆಸ್ಟೋರೆಂಟ್‌ಗಳು, ಬಾರ್‌ ಗಳು ಮತ್ತು ಕ್ಲಬ್‌ಗಳು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಆಸನದ ಸಾಮರ್ಥ್ಯ 50ರಷ್ಟು ಮೀರದಂತೆ ಕೆಲಸ ನಿರ್ವಹಿಸಬಹುದು. ಆದರೆ, ಬಾರ್‌, ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ಇರುವುದಿಲ್ಲ. ವಾರಂತ್ಯದ ಕರ್ಫ್ಯೂ ವೇಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅನುಮತಿಸಲಾಗಿದೆ.

ಸಾರಿಗೆ ಬಸ್‌ ಸಂಚಾರ ಆರಂಭ: ಇನ್ನೂ ಮುಖ್ಯವಾಗಿ ಸಾರಿಗೆ ಬಸ್‌ಗಳ ಸಂಚಾರ ಕೂಡ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸೋಮವಾರದಿಂದ 100 ಬಸ್‌ಗಳು ಓಡಾಟ ಆರಂಭಿಸಲಿವೆ. ರಸ್ತೆಗಿಳಿಯಲಿವೆ. ಪ್ರತಿ ಬಸ್‌ ನಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ವ್ಯಾಕ್ಸಿನೇಶನ್‌ ಹಾಗೂ ಕೊರೊನಾ ನೆಗೆಟಿವ್‌ ಇರುವ ಸಿಬ್ಬಂದಿಗೆ ಮಾತ್ರ ಸೇವೆಗೆ ಬರಲು ತಿಳಿಸಲಾಗಿದೆ. ಅಲ್ಲದೇ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈಗಾಗಲೇ ಬಸ್‌ ಗಳು, ನಿಲ್ದಾಣಗಳು ಹಾಗೂ ಡಿಪೋಗಳನ್ನು ಸ್ಯಾನಿಟೈಸೇಶನ್‌ ಮಾಡಿಸಲಾಗಿದೆ. ಅಲ್ಲದೇ ನಿತ್ಯ ಸ್ಯಾನಿಟೈಸೇಶನ್‌ ಮಾಡುವಂತೆಯೂ ತಿಳಿಸಲಾಗಿದೆ ಎಂದು ವಿವರಿಸುತ್ತಾರೆ ಅಧಿಕಾರಿಗಳು

ಜೂ.21ರಿಂದ ಸಾರಿಗೆ ಬಸ್‌ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಈಗಾಗಲೇ ನಮ್ಮ ನಿಗಮದ ಶೇ.96ರಷ್ಟು ಸಿಬ್ಬಂದಿ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ಅದರ ಜತೆಗೆ ಕೊರೊನಾ ನೆಗೆಟಿವ್‌ ವರದಿ ಇದ್ದವರು ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರಕ್ಕೆ ಅನುಮತಿ ಸಿಕ್ಕಿದ್ದು, ಸದ್ಯಕ್ಕೆ ಹೈದರಾಬಾದ್‌ ಗೆ ಮಾತ್ರ ಬಸ್‌ ಓಡಿಸಲಾಗುವುದು. ಕ್ರಮೇಣ ಬೇಡಿಕೆಯನುಸಾರ ಎಲ್ಲ ಕಡೆ ಸಂಚಾರಕ್ಕೆ ಮುಕ್ತ ಮಾಡಲಾಗುವುದು.
ವೆಂಕಟೇಶ, ವಿಭಾಗೀಯ
ನಿಯಂತ್ರಕರು, ಸಾರಿಗೆ ವಿಭಾಗ

ಟಾಪ್ ನ್ಯೂಸ್

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Siddaramaiah alleges that ED’s attack on Zameer’s house is politically motivated

ಜಮೀರ್ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಆರೋಪ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

Parliament disrupted to protect interest of one family: Ravi Shankar Prasad attacks Congress on Pegasus row

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High-School

ತರಗತಿ ನಡೆಯದ ಶಾಲೆಗೆ ಪುಂಡರ ಕಾಟ!

Onions

ಈರುಳ್ಳಿಗೆ ರೋಗಬಾಧೆ; ಅನ್ನದಾತ ಕಂಗಾಲು

gem-logo

ಪಂಚಾಯ್ತಿಗಳಿಗೂ ಆನ್‌ಲೈನ್‌ ಬಜಾರ್‌ ಮುಕ್ತ

Govt-school

ತರಗತಿ ನಡೆಯದ ಶಾಲೆಗೆ ಪುಂಡರ ಕಾಟ!

ಈರುಳ್ಳಿಗೆ ರೋಗಬಾಧೆ; ಅನ್ನದಾತ ಕಂಗಾಲು

ಈರುಳ್ಳಿಗೆ ರೋಗಬಾಧೆ; ಅನ್ನದಾತ ಕಂಗಾಲು

MUST WATCH

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

udayavani youtube

ಪಾಕಿಸ್ತಾನ ಹಿಂದೂ ದೇವಾಲಯದ ಮೇಲೆ ದಾಳಿ , ಧ್ವಂಸ !

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

ಹೊಸ ಸೇರ್ಪಡೆ

Terror-Attack

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಉಗ್ರರ ಕರಿನೆರಳು

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Siddaramaiah alleges that ED’s attack on Zameer’s house is politically motivated

ಜಮೀರ್ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಆರೋಪ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.