Udayavni Special

ರಾಯಚೂರು ವಿವಿಗೆ ಎರಡು ಕೋಟಿ ಅನುದಾನ ಭರವಸೆ

ಸಾಮಾಜಿಕ ಚಿತ್ರಣ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ

Team Udayavani, Sep 29, 2021, 6:21 PM IST

ರಾಯಚೂರು ವಿವಿಗೆ ಎರಡು ಕೋಟಿ ಅನುದಾನ ಭರವಸೆ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಸರ್ವಾಂಗೀಣ ಪ್ರಗತಿಗೆ ಶಾಸಕರ ಅನುದಾನದಡಿ 2 ಕೋಟಿ ರೂ. ನೀಡುವುದಾಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ತಿಳಿಸಿದರು.

ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಕುಲಪತಿ ಮತ್ತು ಕುಲಸಚಿವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ನನ್ನ ವೃತ್ತಿ, ನನ್ನ ಜನ್ಮ ಭೂಮಿ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಈ ವಿಶ್ವವಿದ್ಯಾಲಯ ಪ್ರಗತಿ ಹೊಂದಲು ಸಾಧ್ಯ. ವಿಶ್ವವಿದ್ಯಾಲಯಕ್ಕೆ 371 (ಜೆ)ಗೆ ಬರುವಂತ ಅನುದಾನ ಬಳಸಲು ಅವಕಾಶವಿದೆ. ಈ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದರು.

ಶಿಕ್ಷಣ, ಅಭಿವೃದ್ಧಿ, ಉದ್ಯೋಗ ಮೂರು ಪ್ರಮುಖ ಅಂಶಗಳು ಸಾಮಾಜಿಕ ಚಿತ್ರಣ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಕುಂದು ಕೊರತೆ ಹಾಗೂ ವಿವಿಯ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿದರು.

ವಿವಿ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ಮಾತನಾಡಿ, ಆದರ್ಶ ವಿಶ್ವವಿದ್ಯಾಲಯ ಮಾಡುವ ದೃಢ ಸಂಕಲ್ಪದಿಂದ ಕಾರ್ಯಾರಂಭಿಸಿದ್ದೇವೆ. ಆರ್ಥಿಕ ಕೊರತೆ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆ ನಡುವೆಯೂ ವಿವಿ ಕಟ್ಟಲು ಶ್ರಮಿಸುತ್ತಿದ್ದೇವೆ ಎಂದರು.

ಯುಜಿಸಿ 2 ಎಫ್‌ ಮಾನ್ಯತೆ ನೀಡಿದ್ದರೂ ಬೋಧಕ ಸಿಬ್ಬಂದಿ ಆಗದಿದ್ದರೆ ಯುಜಿಸಿಯ 12ಬಿ ಮಾನ್ಯತೆ ಸಿಗುವುದಿಲ್ಲ. ಕೇವಲ 88 ಅತಿಥಿ ಉಪನ್ಯಾಸಕರಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಕೇವಲ ಮೂರು ಪ್ರಾಧ್ಯಾಪಕರು ಹಾಗೂ ಏಳು ಬೋಧಕೇತರ ಸಿಬ್ಬಂದಿ ಕಾಯಂ ನೌಕರರಾಗಿದ್ದು ವಿಶ್ವವಿದ್ಯಾಲಯದಲ್ಲಿ ಅನೇಕ ಸಿಬ್ಬಂದಿ ಆರು ತಿಂಗಳಿಂದ ವೇತನ ರಹಿತವಾಗಿ ಕೆಲಸ ಮಾಡುತ್ತಿದ್ದಾರೆ.

ತೀವ್ರತರ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ ಎಂದರು. ಈ ವೇಳೆ ಕುಲಸಚಿವ ಪ್ರೊ| ವಿಶ್ವನಾಥ ಎಂ, ಮೌಲ್ಯಮಾಪನ ಕುಲಸಚಿವ ಪ್ರೊ| ಯರ್ರಿಸ್ವಾಮಿ ಎಂ., ಉಪ ಕುಲಸಚಿವ ಡಾ| ಜಿ.ಎಸ್‌. ಬಿರಾದಾರ್‌, ಸಿಡಿಸಿ ನಿರ್ದೇಶಕ ಡಾ| ರಾಘವೇಂದ್ರ ಫತ್ತೇಪುರ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ| ನುಸ್ರತ್‌ ಫಾತಿಮಾ, ದೈಹಿಕ ಶಿಕ್ಷಣ ನಿರ್ದೇಶಕ ವಾಸುದೇವ ಜೇವರ್ಗಿ ಸೇರಿದಂತೆ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

ಬೆಲೆ ಕುಸಿತ; ಚೆಂಡು ಹೂ ಬೆಳೆಗಾರರಲ್ಲಿ ಆತಂಕ

ffyt

ದಿವಂಗತ ತಾಯಿಯ ಮೂರ್ತಿಗೆ ನಿತ್ಯವು ಪುತ್ರಿಯ ನಮನ

Untitled-1

ಪೊಲೀಸ್ ಕಚೇರಿಯಲ್ಲಿ ಆಯುಧ ಪೂಜೆ ಸಡಗರ

13

ಅಧಿಕಾರಿಗಳು ಕಡ್ಡಾಯ ಹಾಜರಾಗಲು ತಾಕೀತು

13

ರಾಜ್ಯದಲ್ಲಿ ಕ್ರೈಸ್ತರ ರಕ್ಷಣೆಗೆ ಆಗ್ರಹಿಸಿ ರ್‍ಯಾಲಿ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

Uber Cup badminton:

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಭಾರತ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಸ್ಯಾಫ್ ಫುಟ್‌ಬಾಲ್ ಫೈನಲ್‌: ಇಂದು ಭಾರತ-ನೇಪಾಲ ಕಾಳಗ

ಸ್ಯಾಫ್ ಫುಟ್‌ಬಾಲ್ ಫೈನಲ್‌: ಇಂದು ಭಾರತ-ನೇಪಾಲ ಕಾಳಗ

ಕೀನ್ಯಾದ ಖ್ಯಾತ ಓಟಗಾರ್ತಿ ಟಿರೊಪ್‌ ಕೊಲೆ

ಕೀನ್ಯಾದ ಖ್ಯಾತ ಓಟಗಾರ್ತಿ ಟಿರೊಪ್‌ ಕೊಲೆ

ಪಿವಿಆರ್‌ನಲ್ಲಿ ಟಿ20 ವಿಶ್ವಕಪ್‌

ಪಿವಿಆರ್‌ನಲ್ಲಿ ಟಿ20 ವಿಶ್ವಕಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.