ಬಿಸಿಲೂರ ಜನರ ಕಣ್ಮನ ತಣಿಸಿದ ಚಿತ್ರಸಂತೆ

ವಿವಿಧ ಜಿಲ್ಲೆಗಳ ಕಲಾವಿದರಿಂದ ಚಿತ್ರ ಪ್ರದರ್ಶನ ಜನಾಭಾವದಿಂದ ಕಲಾವಿದರಲ್ಲಿ ನಿರಾಸೆ ಕಲಾಸಕ್ತರಿಂದ ಕಲಾಕೃತಿ ಖರೀದಿ

Team Udayavani, Feb 17, 2020, 1:40 PM IST

17-February-15

ರಾಯಚೂರು: ನಗರದಲ್ಲಿ ರವಿವಾರ ನಡೆದ ಚಿತ್ರಸಂತೆ ಉರಿಬಿಸಿಲಲ್ಲಿಯೂ ಕಲಾಸಕ್ತರ ಕಣ್ಮನ ತಣಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಚಿತ್ರಕಲೆಗಳನ್ನು ಪ್ರದರ್ಶನಕ್ಕಿಟ್ಟಿದ್ದು ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ನಗರದ ಸಾರ್ವಜನಿಕ ಉದ್ಯಾವನ ಮುಂಭಾಗದ ಫುಟ್‌ಪಾತ್‌ ಮೇಲೆ ಕಲಾ ಸಂಕುಲ ಸಂಸ್ಥೆಯಿಂದ ನಗರದಲ್ಲಿ ಎರಡನೇ ವರ್ಷವೂ ಚಿತ್ರ ಸಂತೆ ನಡೆಸಲಾಯಿತು. ಜಿಲ್ಲೆ ಮಾತ್ರವಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಕಲಾವಿದರು ಆಗಮಿಸಿದ್ದರು. ತಾವು ಬಿಡಿಸಿದ ವಿವಿಧ ಬಗೆಯ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಿ ಮಾರಿದರು. ಆದರೆ, ಬೆಳಗ್ಗೆಯೇ ಸಂತೆ ಆರಂಭವಾದರೂ ಜನ ನಿರೀಕ್ಷಿತ ಮಟ್ಟದಲ್ಲಿ ಬಂದಿರದ ಕಾರಣ ಕಲಾವಿದರು ತುಸು ಬೇಸರ ವ್ಯಕ್ತಪಡಿಸಿದರು. ಆದರೆ, ಕೆಲವೊಂದು ಕಲಾಸಕ್ತರು ಆಗಮಿಸಿ ಕಲಾಕೃತಿಗಳನ್ನು ವೀಕ್ಷಿಸಿದ್ದಲ್ಲದೇ ಚಿತ್ರಕಲೆಗಳನ್ನು ಖರೀದಿಸುತ್ತಿದ್ದದ್ದು ಕಂಡು ಬಂತು.

ಧ್ಯಾನಸ್ಥ ಬುದ್ಧ, ಶಿಲ್ಪಕಲಾ ವೈಭವ, ಸುಂದರ ಪ್ರಕೃತಿ, ಹಳ್ಳಿಗಾಡಿನ ಸೊಗಡು ಕಣ್ಕಟ್ಟುವಂಥ ಕಲಾಕೃತಿಗಳು ಸಾಕಷ್ಟಿದ್ದವು. ಕಾಲಕ್ಕೆ ತಕ್ಕಂತೆ ಕಲಾವಿದರು ಬದಲಾವಣೆ ಬಯಸಿದ್ದಾರೆ ಎನ್ನಲಿಕ್ಕೆ ಅನೇಕ ಕಲಾಕೃತಿಗಳು ಪುಷ್ಟಿ ನೀಡಿದವು. ಹೆಡ್‌ಸೆಟ್‌ ಹಾಕಿಕೊಂಡು ಸಂಗೀತ ಆಲಿಸುತ್ತಿರುವ ಫಾರಿನ್‌ ತಳಿಯ ನಾಯಿ, ಸೆಲ್ಫಿ ತೆಗೆದುಕೊಳ್ಳುತ್ತಿರುವ ಕೋತಿಗಳು, ಮೊಬೈಲ್‌ನಲ್ಲೇ ಏನನ್ನೋ ನೋಡುತ್ತಿರುವ ಕೋತಿಗಳ ಚಿತ್ರಗಳು ಸೆಳೆದವು. ಇನ್ನು ಕೆಲ ಕಲಾವಿದರು ಸ್ಥಳದಲ್ಲೇ ಚಿತ್ರ ಬಿಡಿಸಿಕೊಡುತ್ತಿದ್ದರು. ಎದುರಿಗೆ ಕೂಡಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರ ಚಿತ್ರ ಬಿಡಿಸಿ ಕೊಡುತ್ತಿದ್ದರು.

ಶಂಕರಗೌಡರ ಸ್ಮರಣೆ: ಜಿಲ್ಲೆ ಎಂದಿಗೂ ಮರೆಯದ ಕಲಾವಿದರಲ್ಲಿ ಶಂಕರಗೌಡ ಬೆಟ್ಟದೂರು ಅವರ ಹೆಸರು ಅಗ್ರಗಣ್ಯ. ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿದ ಈ ಕಲಾವಿದರ ಕಲಾಕೃತಿಗಳನ್ನು ನೋಡುವುದೇ ಸಂಭ್ರಮ. ಚಿತ್ರಸಂತೆಯ ವೇದಿಕೆಗೆ ಅವರ ಹೆಸರನ್ನೇ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದು ಒಂದು ವಿಶೇಷವಾದರೆ, ಈ ಬಾರಿ ಶಂಕರಗೌಡರು ಬಿಡಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿರುವುದು ಮತ್ತೂಂದು ವಿಶೇಷವಾಗಿತ್ತು. ಅವರ ಮಗ ಶರಣ ಪಾಟೀಲ ಬೆಟ್ಟದೂರು ಅವರೇ ವಿಶೇಷ ಆಸ್ಥೆ ವಹಿಸಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು.

ಟಾಪ್ ನ್ಯೂಸ್

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ವರ್ಷದೊಳಗೆ 3.55 ಕೋಟಿವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13problem

ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ

12water

ನೀರು ಶುದ್ಧೀಕರಣ ಘಟಕಕ್ಕೆ ಬಾದರ್ಲಿ ಭೇಟಿ

11rain

ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ವಿತರಣೆ

15dam

ಒಂದೇ ಮಳೆಗೆ ಮಾರಲದಿನ್ನಿ ಡ್ಯಾಂ ಭರ್ತಿ!

12chaild

ವಿಕಲಚೇತನರ ವಿಶೇಷ ಕೌಶಲ ಬೆಳಗಲಿ: ಡಾ| ಪಾಟೀಲ್

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

ಹೊಸ ಸೇರ್ಪಡೆ

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ವರ್ಷದೊಳಗೆ 3.55 ಕೋಟಿವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.