ಲಾಕ್‌ಡೌನ್‌ ಸಂಕಟ; ಪಡಿತರಕ್ಕೆ ಪರದಾಟ

ಅಕ್ರಮ ಎಸಗಿದ ಮೂರು ರೇಷನ್‌ ಅಂಗಡಿ ಪರವಾನಗಿ ರದ್ದು ಆರೋಗ್ಯ ಸಿಬ್ಬಂದಿಗೆ ಸಿಗದ ಸುರಕ್ಷತಾ ಸಾಮಗ್ರಿ

Team Udayavani, Apr 17, 2020, 11:44 AM IST

17-April-06

ರಾಯಚೂರು: ಎನ್‌.ಹೊಸೂರು ನ್ಯಾಯಬೆಲೆ ಅಂಗಡಿಯಲ್ಲಿ ಬಕೆಟ್‌ ನಲ್ಲಿಯೇ ಅಕ್ಕಿ ವಿತರಿಸುತ್ತಿರುವುದು.

ರಾಯಚೂರು: ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಗುಳೆ ಹೋಗಿದ್ದ 50 ಸಾವಿರಕ್ಕೂ ಅಧಿಕ ಜನ ಮರಳಿ ಬಂದಿದ್ದು, ಎರಡು ತಿಂಗಳ ಪಡಿತರ ನೀಡಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಗೆ ವಂಚಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಈಗಾಗಲೇ ಜಿಲ್ಲೆಯ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆಯಾದರೂ ಅಕ್ರಮಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲಿ 19.20 ಲಕ್ಷ ಜನಸಂಖ್ಯೆಯಿದ್ದು, 715 ನ್ಯಾಯಬೆಲೆ ಅಂಗಡಿಗಳಿವೆ. 24 ಅಂಗಡಿ ಸ್ಥಗಿತಗೊಂಡಿದ್ದರೆ, ಮತ್ತೆ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. 53,035 ಅಂತ್ಯೋದಯ, 4,57 ಲಕ್ಷ ಬಿಪಿಎಲ್‌ , 6,719 ಎಪಿಎಲ್‌ ಕಾರ್ಡ್ದಾರರಿದ್ದಾರೆ. ಜಿಲ್ಲೆಗೆ ಈವರೆಗೂ 1.67 ಲಕ್ಷ ಕ್ವಿಂಟಲ್‌ ಅಕ್ಕಿ ಬಂದಿದೆ. ಐದು ದಿನದೊಳಗೆ 2 ತಿಂಗಳ ರೇಶನ್‌ ನೀಡಬೇಕೆಂದು ತಿಳಿಸಿದ್ದರೂ ಇನ್ನೂ ಮುಗಿದಿಲ್ಲ.

ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿಯೊಬ್ಬರಿಗೆ 5 ಕೆ.ಜಿ ಅಕ್ಕಿ, ಎರಡು ಕೆ.ಜಿ ಗೋದಿ ನೀಡಿದರೆ, ಅಂತ್ಯೋದಯ ಕಾರ್ಡ್‌ದಾರರಿಗೆ ತಿಂಗಳಿಗೆ 35 ಕೆ.ಜಿ ಅಕ್ಕಿ ನೀಡಬೇಕು. ಎರಡು ತಿಂಗಳ ಪಡಿತರ ಏಕಕಾಲಕ್ಕೆ ನೀಡಲಾಗುತ್ತಿದೆ. ಆದರೆ, ಸಾಕಷ್ಟು ಕಡೆ ಅಂತ್ಯೋದಯ ಕಾರ್ಡ್‌ದಾರರಿಗೆ ಕಡಿಮೆ ಧಾನ್ಯ ನೀಡಲಾಗುತ್ತಿದೆ. ಇನ್ನೂ ತೂಕದಲ್ಲೂ ಸಾಕಷ್ಟು ವ್ಯತ್ಯಾಸ ಮಾಡಲಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ಹಾಕದೇ ಬಕೆಟ್‌, ಪ್ಲಾಸ್ಟಿಕ್‌ ಡಬ್ಬಿಗಳಲ್ಲೇ ಹಾಕಲಾಗುತ್ತಿದೆ. ಲಾಕ್‌ಡೌನ್‌ ಅವಕಾಶ ಬಳಸಿಕೊಂಡಿರುವ ರೇಶನ್‌ ಅಂಗಡಿ ಮಾಲೀಕರು ಗ್ರಾಹಕರಿಂದ 10-30 ರೂ.ವರೆಗೂ ಹಣ ಪಡೆಯುತ್ತಿದ್ದಾರೆ.

ದೇವದುರ್ಗ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ 100 ರೂ. ಪಡೆದಿರುವ ಕುರಿತು ವರದಿಯಾಗಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಜನ ಗುಂಪು ನಿಂತರೂ ತಿಳಿ ಹೇಳುವವರಿಲ್ಲ. ತಮಗೆ ತಿಳಿದಾಗ ಬಂದು ರೇಶನ್‌ ಹಾಕುತ್ತಿದ್ದಾರೆ.ಹೀಗಾಗಿ ಜನ ಬೆಳಗ್ಗೆಯಿಂದ ಸಂಜೆವರೆಗೂ ಕಾಯುವ ಸ್ಥಿತಿ ಇದೆ.

ಈಗಾಗಲೇ ಎರಡು ತಿಂಗಳ ರೇಶನ್‌ ನೀಡಲಾಗುತ್ತಿದೆ. ಗುಳೆ ಹೋಗಿ ಬಂದವರಲ್ಲಿ ಬಹುತೇಕರಿಗೆ ಬಿಎಪಿಎಲ್‌ ಕಾರ್ಡ್‌ಗಳಿವೆ. ಕಾರ್ಡ್‌ ಇಲ್ಲದವರಿಗೆ ಎಸ್‌ ಡಿಆರ್‌ಎಫ್‌ನಡಿ ಪಡಿತರ ನೀಡುತ್ತಿದ್ದೇವೆ. ಅಕ್ರಮ ನಡೆದಿರುವ ಬಗ್ಗೆ ಖಚಿತ ಮಾಹಿತಿ ನೀಡಿದರೆ ಅಂಥ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಈಗಾಗಲೇ ಜಿಲ್ಲೆಯ 3 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಈವರೆಗೂ ಶೇ.80ಕ್ಕೂ ಅಧಿಕ ಪಡಿತರ ವಿತರಿಸಲಾಗಿದೆ.
ಅರುಣಕುಮಾರ್‌ ಸಂಗಾವಿ,
ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಯಚೂರು

ಟಾಪ್ ನ್ಯೂಸ್

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

once upon a time in jamaaligudda

ಧನಂಜಯ್‌ ಹೊಸಚಿತ್ರ ‘ಜಮಾಲಿಗುಡ್ಡ’ ರಿಲೀಸ್‌ ಡೇಟ್‌ ಫಿಕ್ಸ್‌

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13pension

ನೂತನ ಪಿಂಚಣಿ ಯೋಜನೆ ರದ್ದತಿಗೆ ನೌಕರರ ಒಕ್ಕೂಟ ಆಗ್ರಹ

12takerl

ಟ್ಯಾಟರಲ್‌ ಕಾಮಗಾರಿ ವಿಳಂಬ ಖಂಡಿಸಿ ಪಾದಯಾತ್ರೆ

23leader

ಪ್ರಜ್ಞಾವಂತ ಪ್ರತಿನಿಧಿಗಳ ಆಯ್ಕೆ ಮಾಡಲು ಸಲಹೆ

ಸಿರವಾರ: ಬಸ್ ನಿಲ್ದಾಣದ ಛಾವಣಿ ಕುಸಿದು ಕಾರ್ಮಿಕ ಸಾವು

ಸಿರವಾರ: ಬಸ್ ನಿಲ್ದಾಣದ ಛಾವಣಿ ಕುಸಿದು ಕಾರ್ಮಿಕ ಸಾವು

15PDO

ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲು ಪಿಡಿಒಗಳ ಒತ್ತಾಯ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

ವರುಣನ ಆರ್ಭಟ: ಅಪಾರ ಬೆಳೆ ಹಾನಿ

ವರುಣನ ಆರ್ಭಟ: ಅಪಾರ ಬೆಳೆ ಹಾನಿ

14arrest

262 ಕೆ.ಜಿ ಗಾಂಜಾ ಜಪ್ತಿ; ಇಬ್ಬರ ಸೆರೆ

13pension

ನೂತನ ಪಿಂಚಣಿ ಯೋಜನೆ ರದ್ದತಿಗೆ ನೌಕರರ ಒಕ್ಕೂಟ ಆಗ್ರಹ

17

ತಿಂಗಳಿಗೆ 4 ಬಾರಿ ಡೀಸಿಗಳ ಭೇಟಿ

freedom-fighters

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.