ಜಿಲ್ಲೆ ವ್ಯಾದಿಗೆ ಮದ್ದರೆಯುವರೇ ಬಿಎಸ್‌ವೈ?

ಕಲ್ಯಾಣ ಭಾಗದ ರಾಯಚೂರಿಗೆ ವಿಶೇಷ ಕೊಡುಗೆ ಏನು? ನೀರಾವರಿ ಸಮಸ್ಯೆಗೆ ಸಿಗುವುದೇ ಶಾಶ್ವತ ಪರಿಹಾರ?

Team Udayavani, Feb 28, 2020, 12:29 PM IST

28-Febraury-8

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಪಣ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಗೆ ಅದ್ಯಾವ ಕೊಡುಗೆ ನೀಡುತ್ತಾರೋ ಎಂದು ಜನ ಕಾತರದಿಂದ ಕಾಯುತ್ತಿದ್ದಾರೆ. ಸಾಕಷ್ಟು ಹಳೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜತೆಗೆ ಹೊಸ ಘೋಷಣೆಗಳ ನಿರೀಕ್ಷೆಗಳು ಹೆಚ್ಚಾಗಿವೆ.

ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್‌ ಕರ್ನಾಟಕದ ಹೆಸರು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸಿಎಂ, ಈ ಭಾಗಕ್ಕೆ ಬಂದಾಗಲೊಮ್ಮೆ ಅಭಿವೃದ್ಧಿಯ ಮಾತನ್ನಾಡಿದ್ದಾರೆ. ಅವರ ಮಾತುಗಳು ಈ ಸಾಲಿನ ಬಜೆಟ್‌ ಎಷ್ಟರ ಮಟ್ಟಿಗೆ ಸಾಕ್ಷೀಕರಿಸುವುದೋ ಕಾದು ನೋಡಬೇಕು. ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಕಮಲಕ್ಕೆ ಅಧಿಕಾರ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶಾಸಕರಲ್ಲಿ ಜಿಲ್ಲೆಯ ಮಸ್ಕಿ ಕ್ಷೇತ್ರ ಪ್ರತಾಪಗೌಡ ಕೂಡ ಇದ್ದಾರೆ. ಆ ಒಂದು ಕೃತಜ್ಞ ಭಾವದಲ್ಲಿ ಜಿಲ್ಲೆಗೇನಾದರೂ ಹೊಸ ಯೋಜನೆ ಬರಬಹುದು. ಅದರ ಜತೆಗೆ ನೀರಾವರಿ, ಕೃಷಿ, ಶಿಕ್ಷಣ, ಸಾರಿಗೆ ಸೌಲಭ್ಯದಂತ ಸಾಕಷ್ಟು ಸಂಗತಿಗಳು ಬೇಡಿಕೆ ಪಟ್ಟಿಯಲ್ಲಿವೆ.

ಡಿಪಿಆರ್‌ನಲ್ಲೇ ಉಳಿದ ಜಲಾಶಯ: ರಾಜ್ಯದಲ್ಲಿ ಯಾವ ಸರ್ಕಾರ ಅಧಿ ಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಹರಿಯುವ ಜೀವ ನದಿಗಳಾದ ಕೃಷ್ಣಾ, ತುಂಗಭದ್ರಾವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕಳೆದ ವರ್ಷ ಅಪ್ಪಳಿಸಿದ ನೆರೆಯಿಂದ ಹೆಚ್ಚು ಕಡಿಮೆ ಉಭಯ ನದಿಗಳಲ್ಲಿ ಸಾವಿರ ಟಿಎಂಸಿ ನೀರು ವೃಥಾ ಹರಿದು ಹೋಗಿದೆ ಎನ್ನುತ್ತಾರೆ ತಜ್ಞರು. ಆ ನೀರನ್ನು ಹಿಡಿದಿಡುವ ಯೋಜನೆ ರೂಪಿಸಿದ್ದೇ ಆದಲ್ಲಿ ಲಕ್ಷಾಂತರ ರೈತ ಕುಟುಂಬಗಳ ಬದುಕು ಹಸನಾಗಲಿದೆ.

ತುಂಗಭದ್ರಾ ಜಲಾಶಯಕ್ಕೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ವಿಚಾರ ಇನ್ನೂ ಡಿಪಿಆರ್‌ ಮಾಡುವ ಹಂತದಲ್ಲಿಯೇ ಇದೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪಿಸಿತ್ತು. ಅಲ್ಲೆದೇ, ಡಿಪಿಆರ್‌ ಮಾಡಲು 9 ಕೋಟಿ ಬೇಕು ಎಂದು ತಿಳಿಸಿತ್ತು. ಆದರೆ, ಅದಾಗಲಿಲ್ಲ. ಈಗ 14 ಕೋಟಿ ರೂ. ಬೇಕಾಗಬಹುದು ಎನ್ನಲಾಗುತ್ತಿದೆ. ಅಲ್ಲದೇ, ಜಲಾಶಯ ನಿರ್ಮಿಸಲು ಸರಿಸುಮಾರು 10 ಸಾವಿರ ಕೋಟಿಗೂ ಅಧಿಕ ಹಣ ಬೇಕಾಗಬಹುದು ಎಂದು ಹಿಂದಿನ ಸರ್ಕಾರ ಅಂದಾಜಿಸಿತ್ತು.

ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಕೊನೆ ಭಾಗಕ್ಕೆ ನೀರು ಸಿಗುತ್ತಿಲ್ಲ. ನವಲಿ ಮತ್ತು ಕವಿತಾಳ ಬಳಿ ಸಮಾನಾಂತರ ಜಲಾಶಯ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದ ಬೇಡಿಕೆ ಈ ಬಾರಿ ಪರಿಷ್ಕಾರ ಸಿಗುವುದೇ ನೋಡಬೇಕು. ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಮುಗಿಸಬೇಕಿದೆ. ಕೆರೆಗಳ ಪುನಶ್ಚೇತನಕ್ಕೂ ಒತ್ತು ನೀಡುವ ಅಗತ್ಯವಿದೆ.

ಏರ್‌ಪೋರ್ಟ್‌ಗೆ ರೆಕ್ಕೆ ಪುಕ್ಕ: ಇಷ್ಟು ದಿನ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದ್ದ ವಿಮಾನ ನಿಲ್ದಾಣ ಬೇಡಿಕೆ ಈಗ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಯರಮರಸ್‌ ಬಳಿ ಅದಕ್ಕಾಗಿ 400 ಎಕರೆ ಸ್ಥಳ ನಿಗದಿ ಮಾಡಲಾಗಿದೆ. ಕಲಬುರಗಿ, ಬೀದರ್‌ನಲ್ಲಿ ವಿಮಾನ ನಿಲ್ದಾಣ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕೂಗೆದ್ದಿದೆ. ತಜ್ಞರ ತಂಡ ಬಂದು ಈಗಾಗಲೇ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಕಾರಣ ಜಿಲ್ಲೆಯ ಜನಪ್ರತಿನಿ ಧಿಗಳು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಆರಂಭಿಕ ಹಂತದಲ್ಲಿ 250 ಕೋಟಿ ರೂ. ನೀಡಬೇಕು. ತ್ವರತಿಗತಿಯಲ್ಲಿ ನಾಗರಿಕ ವಿಮಾನಯಾನ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಐಐಐಟಿಗೆ ಬೇಕು ಹಣ: ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಐಐಐಟಿ ಸಂಸ್ಥೆಗೆ 125 ಕೋಟಿ ರೂ. ಬೇಕಾಗಬಹುದು ಎಂದು ಶಿಕ್ಷಣ ಸಚಿವರೇ ತಿಳಿಸಿದ್ದಾರೆ. ಅದು ಕೇಂದ್ರ ಸರ್ಕಾರ ಸಹಭಾಗಿತ್ವದಡಿ ಸ್ಥಾಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಕೂಡ
ಹಣ ನೀಡಬೇಕು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣ ಬಿಡುಗಡೆ ಮಾಡಬೇಕಿದೆ. ಈಗಾಗಲೇ ಸ್ಥಳ ನಿಗದಿ ಮಾಡಿದ್ದು ಕೆಲಸ ಕಾರ್ಯಗಳು ಶುರುವಾಗಿವೆ. ಕೆಕೆಆರ್‌ಡಿಬಿಯಿಂದ 2.50 ಕೋಟಿ ಪಡೆದು ಇಂಜಿನಿಯರಿಂಗ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಥೆ ಆರಂಭಿಸಲಾಗುತ್ತಿದೆ.

ಬಗೆಹರಿಯದ ಒಪೆಕ್‌ ಸಮಸ್ಯೆ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಒಪೆಕ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸಮಸ್ಯೆ ಇಂದಿಗೂ ಇತ್ಯರ್ಥಗೊಂಡಿಲ್ಲ. ಒಂದೆಡೆ ನಿರ್ವಹಣೆ ಸಮಸ್ಯೆ ಕಾಡುತ್ತಿದ್ದರೆ ಮತ್ತೂಂದೆಡೆ ಆಡಳಿತಾತ್ಮಕ ಸಮಸ್ಯೆಗಳು ಇವೆ. ಒಪೆಕ್‌ ಸ್ವಾಯತ್ತ ಸಂಸ್ಥೆಯನ್ನಾಗಿಸಿ ವಿಶೇಷ ಅನುದಾನ ಘೋಷಿಸಿದರೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಮತ್ತೆ ಉತ್ತಮ ಸೇವೆ ನೀಡಬಹುದು.

ಮಹಾನಗರ ಪಾಲಿಕೆ: ರಾಯಚೂರು ನಗರಸಭೆ ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದು, ಈಗ ಮಹಾನಗರ ಪಾಲಿಕೆ ರಚನೆ ಬೇಡಿಕೆ ಹೆಚ್ಚುತ್ತಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಕೂಡ ಸಿಎಂಗೆ ಬೇಡಿಕೆ ಸಲ್ಲಿಸಿದೆ. ಶಕ್ತಿನಗರ ಒಳಗೊಂಡಂತೆ ಮಹಾನಗರ ಪಾಲಿಕೆ ರಚಿಸಲು ಸರ್ಕಾರ ಮುಂದಾಗಬೇಕಿದೆ. ಅದರ ಜತೆಗೆ ಪ್ರತ್ಯೇಕ ವಿವಿ ಸ್ಥಾಪನೆಗೆ ವಿಶೇಷ ಅನುದಾನ, ಹೊಸ ತಾಲೂಕುಗಳಿಗೆ ಅನುದಾನದ ಕೊರತೆ ಇದ್ದರೆ, ಮತ್ತೆರಡು ತಾಲೂಕು ರಚನೆಗೆ ಬೇಡಿಕೆ ಇದೆ. ಹೊಸ ತಾಲೂಕುಗಳಿಗೆ ಸೂಕ್ತ ಸೌಲಭ್ಯ, ನಗರಕ್ಕೆ ರಿಂಗ್‌ ರಸ್ತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತು ನೀಡಬೇಕಿದೆ.

ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

jameer-ak

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18social

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

17report

20ರಂದು ಮಾನ್ವಿ ಬಂದ್‌ಗೆ ಕರೆ

16education

ಶಿಕ್ಷಣದಿಂದ ವ್ಯಕ್ತಿಯ ಸಮಗ್ರ ಅಭಿವೃದ್ದಿ

15water

ಅನಧಿಕೃತ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್‌ ಸ್ಥಗಿತ

14economic

ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಕೊಡುಗೆ ಅಪಾರ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

18social

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.