ಮಳೆ-ಗಾಳಿಗೆ ಜನಜೀವನಅಸ್ತವ್ಯಸ್ತ: ಮನೆಗಳಿಗೆ ಹಾನಿ

Team Udayavani, May 14, 2018, 4:45 PM IST

ಮುದಗಲ್ಲ: ಸಮೀಪದ ದೇಸಾಯಿ ಭೋಗಾಪುರ ತಾಂಡಾ, ದೇಸಾಯಿ ಭೋಗಾಪುರ, ತಲೇಖಾನ, ಯರದೊಡ್ಡಿ ಹಾಗೂ ಹಡಗಲಿ ಮತ್ತು ಹಡಗಲಿ ತಾಂಡಾ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ಸುರಿದ ಮಳೆ-ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಶನಿವಾರ ಸಂಜೆ ಗುಡಗು-ಸಿಡಿಲಿನ ಆರ್ಭಟ ಮತ್ತು ಬಿರುಗಾಳಿಯೊಂದಿಗೆ ಮಳೆ ಸುರಿದಿದೆ. ಬಿರುಗಾಳಿಗೆ
ಮೇವಿನ ಬಣವೆಗಳು, ಗಿಡ, ವಿದ್ಯುತ್‌ ಕಂಬಗಳಿಗೆ ಧಕ್ಕೆಯಾಗಿದ್ದರೆ, ಮನೆ ಹಾಗೂ ಜಾನುವಾರು ಶೆಡ್‌ಗಳ ಟಿನ್‌
ಗಳು ಹಾರಿಹೋಗಿವೆ. 

ತಲೇಖಾನ ಗ್ರಾಪಂ ವ್ಯಾಪ್ತಿಯ ದಾದುಡಿ ತಾಂಡಾದ ಸಿದ್ದಪ್ಪ ರುಕ್ಕಪ್ಪನಿಗೆ ಸೇರಿದ ಗುಡಿಸಲು ಮನೆ ಕುಸಿದು ಬಿದಿದ್ದರಿಂದ ಮನೆಯಲ್ಲಿದ್ದ ಅಮರವ್ವ (55) ಎಂಬವರ ಕಾಲಿಗೆ ತೀವ್ರ ಗಾಯವಾಗಿದೆ. 

ಕಸ್ತೂರಿನಾಯ್ಕ ತಾಂಡಾದ ಗಮ್ಮವ್ವ ಮಾನಪ್ಪ ಎಂಬುವರ ಮನೆ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಮನೆಯಲ್ಲಿದ್ದ ಗಮ್ಮವ್ವ ಮತ್ತು ಮೊಮ್ಮಗಳಾದ ಸ್ನೇಹಾಳಿಗೆ ಗಾಯಗಳಾಗಿವೆ. ಆದೇ ತಾಂಡಾದ ರಶುರಾಮ ಕಂಬಾರನ ಕೊಲಿಮೆ ಶೆಡ್‌ನ‌ ತಗಡುಗಳು ಗಾಳಿಗೆ ಹಾರಿ ಹೋಗಿವೆ. ರಮೇಶ ಠಾಕರೆಪ್ಪ ಅವರ ಜಾನುವಾರು ಶೆಡ್‌, ರಘುಕಾಂತ ಅವರ ಮನೆ, ತಿರುಪತಿ ಅವರಿಗೆ ಸೇರಿದ ಜಾನುವಾರು ಶೆಡ್‌, ನಾಗೇಶ ದೇವಪ್ಪ ಅವರ ಜಾನುವಾರು ಶೆಡ್‌, ಡಾಕಪ್ಪ ರಾಮಜಪ್ಪ ಅವರ ಜಾನುವಾರು ಶೆಡ್‌, ಅಮರೇಶ ತಂಬೂ ಎಂಬುವರ ಹೋಟೆಲ್‌ನ ಮೇಲ್ಛಾವಣಿ ತಗಡು ಹಾಗೂ ರಾಮಪ್ಪನ ತಾಂಡಾದ ಚೆನ್ನಪ್ಪ ಮೂರ್ಶಪ್ಪ ಎಂಬುವರ ಶೆಡ್‌ನ‌ ತಗಡುಗಳು ಬಹುದೂರ ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು, ರಂಬೆಕೊಂಬೆಗಳು ಮುರಿದು ಬಿದ್ದಿವೆ. ಇನ್ನು ಕೆಲವೆಡೆ ಗಿಡಮರಗಳು ಬುಡಸಮೇತ ಧರೆಗುರುಳಿವೆ.

ವಿದ್ಯುತ್‌ ಕಟ್‌: ಕನ್ನಾಳ ಭಾಗ ಸೇರಿ ರಾಮಪ್ಪನ ತಾಂಡಾ, ವೇಣ್ಯಪ್ಪನ ತಾಂಡಾ, ಹಡಗಲಿ ತಾಂಡಾದಲ್ಲಿ ವಿದ್ಯುತ್‌ ಕಂಬ ಮುರಿದು ಬಿದ್ದ ಪರಿಣಾಮ ರಾತ್ರಿ-ಹಗಲು ವಿದ್ಯುತ್‌ ಇಲ್ಲದೆ ಜನ ಕುಡಿಯುವ ನೀರಿಗೂ ಪರಿತಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಬಾರದ ಕಂದಾಯ ಅಧಿಕಾರಿಗಳು: ತಾಂಡಾ ಹಾಗೂ ಗ್ರಾಮಗಳಲ್ಲಿ ಮಳೆ-ಗಾಳಿಗೆ ಸಾಕಷ್ಟು ಹಾನಿ ಆಗಿದ್ದರೂ ಯಾವೊಬ್ಬ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ. ಹಾನಿ ಸಮೀಕ್ಷೆ ನಡೆಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆಗ್ರಹ: ಬೇಸಿಗೆ ಮಳೆಗೆ ಸಾಕಷ್ಟು ಜನ ನೋವು, ಹಾನಿ ಅನುಭವಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು
ಬಾಧಿತ ತಾಂಡಾ, ಗ್ರಾಮಗಳಿಗೆ ಭೇಟಿ ನೀಡಿ ಸರ್ವೆ ನಡೆಸಬೇಕು. ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ
ನೀಡಬೇಕೆಂದು ಹಡಗಲಿ ಕ್ಷೇತ್ರದ ತಾಪಂ ಸದಸ್ಯೆ ಶಾರದಾ ಡಿ. ರಾಠೊಡ ಆಗ್ರಹಿಸಿದ್ದಾರೆ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಯಚೂರು: ವ್ಯಂಗ್ಯಚಿತ್ರಗಳು ಅಕ್ಷರಗಳಿಗಿಂತ ಪ್ರಭಾವಶಾಲಿ. ಸಾವಿರಾರು ಪದಗಳು ಹೇಳುವ ವಿಚಾರವನ್ನು ಒಂದು ವ್ಯಂಗ್ಯಚಿತ್ರ ಪರಿಣಾಮಕಾರಿಯಾಗಿ ಹೇಳಬಲ್ಲದು ಎಂದು...

  • ನಾರಾಯಣಪುರ: ಮಕ್ಕಳ ಹಕ್ಕುಗಳ ರಕ್ಷಣೆ ದೃಷ್ಟಿಕೋನದಿಂದ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಹಕ್ಕುಗಳ...

  • ಮಾನ್ವಿ: ಭಾರತೀಯ ಪರಂಪರೆಯಲ್ಲಿ ಸಾಹಿತ್ಯಕ್ಕೆ ಉನ್ನತ ಸ್ಥಾನ ನೀಡಲಾಗಿದೆ. ಎಲ್ಲ ಸಾಹಿತ್ಯದ ತಾಯಿ ಬೇರು ಜಾನಪದ ಸಾಹಿತ್ಯವಾಗಿದೆ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌...

  • ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿಗೆ 2019 ಡಿಸೆಂಬರ್‌ 1ರಿಂದ 2020ರ ಮಾರ್ಚ್‌ 20ರ ವರೆಗೆ ವಾರಾಬಂದಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು...

  • ಮುದಗಲ್ಲ: 2016-17ನೇ ಸಾಲಿನ ಪಿಎಂಜಿಎಸ್‌ವೈ ಯಡಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಛತ್ತರ ರಾಮಜಿನಾಯ್ಕ ತಾಂಡಾದಿಂದ ಹಡಗಲಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಗುತ್ತಿಗೆ...

ಹೊಸ ಸೇರ್ಪಡೆ