ಹಟ್ಟಿ ಪಪಂಗೆ 5 ಕೋಟಿ ಅನುದಾನ: ಹೂಲಗೇರಿ

Team Udayavani, Dec 23, 2018, 4:06 PM IST

ಹಟ್ಟಿ ಚಿನ್ನದ ಗಣಿ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಹಟ್ಟಿ ಪಟ್ಟಣ ಪಂಚಾಯತಿಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪಟ್ಟಣದ ರಸ್ತೆಗಳು ತೀರಾ ಹದಗೆಟಿದ್ದರಿಂದ ಪ್ರಮುಖ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಿ.ಎಸ್‌. ಹೂಲಗೇರಿ ಹೇಳಿದರು.

ಪಟ್ಟಣದ ಪ್ರಮುಖ ರಸ್ತೆಗಳ ಸುಧಾರಣೆಗಾಗಿ ರಸ್ತೆ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಟ್ಟಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದ ನಂತರ ಯಾವುದೆ ಅನುದಾನ ಬಂದಿರಲಿಲ್ಲ. ಈ ಬಗ್ಗೆ ಲಿಖೀತವಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಪೌರಾಡಳಿತ ಸಚಿವ ರಮೇಶ ಜಾರಕಿಹೋಳಿ ಹಟ್ಟಿ ಪಟ್ಟಣ ಪಂಚಾಯತಿಗೆ 5 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.

 ಸಚಿವರು ಉತ್ತರ ನೀಡಿದ ಒಂದು ವಾರದೊಳಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಗಿದೆ. ಇದರಲ್ಲಿ 3.50 ಕೋಟಿ ರೂ. ಗಳನ್ನು ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೆ ಬಳಸಲಾಗುವುದು. ಉಳಿದ 1.50 ಕೋಟಿ ರೂ.ಗಳನ್ನು ನೀರು, ವಿದ್ಯುತ್‌ ದೀಪ ಸೇರಿ ಮೂಲ ಸೌಲಭ್ಯ ಒದಗಿಸಲು ಬಳಸಲಾಗುವುದು. ಒಳ ರಸ್ತೆಗಳ ಸುಧಾರಣೆಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ 3 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ.

ಆ ಹಣ ಬಂದ ನಂತರ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.ಪಟ್ಟಣ ಪಂಚಾಯತಿ ಸಿಬ್ಬಂದಿ ಸಭೆ: ರಸ್ತೆ ವೀಕ್ಷಣೆಗೂ ಮುನ್ನ ಶಾಸಕರು ಚಿನ್ನದ ಗಣಿ ಕಂಪನಿ ಅತಿಥಿ ಗೃಹದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಸಭೆ ನಡೆಸಿ, ಅನುದಾನ ಬಳಕೆಗೆ ಕ್ರಿಯಾ ಯೋಜನೆ ತಯಾರಿಸುವಂತೆ ಸೂಚಿಸಿದರು.

ಪಟ್ಟಣ ಪಂಚಾಯತಿಯಲ್ಲಿ ಕರ ವಸೂಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ನಿಗದಿತ ಗುರಿಯಂತೆ ಕರ ಸಂಗ್ರಹವಾಗದಿದ್ದಲ್ಲಿ ಸಿಬ್ಬಂದಿಗೆ ವೇತನ ಕೊಡುವುದು ಕಷ್ಟವಾಗಲಿದೆ. ಈಗಾಗಲೇ ಸಿಬ್ಬಂದಿಗಳ ಹಲವು ತಿಂಗಳ ವೇತನ ಬಾಕಿ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಕ್ರಮ ಕೈಗೊಳ್ಳಿ ಎಂದು ಶಾಸಕರು ಮುಖ್ಯಾಧಿಕಾರಿ ದುರುಗಪ್ಪ ಹಗೇದಾಳ ಅವರಿಗೆ ಸೂಚಿಸಿದರು.

ನೈರ್ಮಲ್ಯ ಅಧಿಕಾರಿಗಳಾದ ಖಾಜಾಹುಸೇನ್‌, ಖಯಾಜ್‌ ಖಾನ್‌, ಕರ ವಸೂಲಿಗಾರ ರಾಜಪ್ಪ ಮಾಚನೂರು, ಪಪಂ ಸದಸ್ಯರಾದ ಜಿ. ಶ್ರೀನಿವಾಸ್‌, ರಂಗನಾಥ ಮುಂಡರಗಿ, ಬಾಬು ನಾಯೊಡಿ, ಮುಖಂಡರಾದ ಶಂಕರಗೌಡ ಬಳಗಾನೂರು, ಹನುಮಂತರೆಡ್ಡಿ, ನಿಂಗಪ್ಪ ಮನಗೂಳಿ, ಮೌಲಾಸಾಬ ಮಾಸ್ತರ್‌, ಕರಿಯಪ್ಪ, ಬುಜ್ಜಾ ನಾಯಕ, ಮಹಿಬೂಬ್‌ ಮೆಕ್ಯಾನಿಕ್‌, ದೇವೇಂದ್ರಪ್ಪ, ಶಿವಣ್ಣ ನಾಯಕ ಕೋಠಾ, ಹನುಮಂತ ನಾಯಕ ಮಲ್ಲಾಪುರ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

  • ದೇವದುರ್ಗ: ತಾಲೂಕಿನ ಬಾಗೂರು, ನಿಲವಂಜಿ, ಕರಿಗುಡ್ಡ, ಅಂಜಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಇಲ್ಲಿವರೆಗೆ...

  • ರಾಯಚೂರು: ದೇಶದಲ್ಲಿ ಎದ್ದ ಮೋದಿ ಅಲೆಯಲ್ಲಿ ಗೆದ್ದ ಸ್ಥಾನಗಳಲ್ಲಿ ರಾಯಚೂರು ಕೂಡ ಒಂದು. ಹಾಲಿ ಸಂಸದ ಬಿ.ವಿ. ನಾಯಕ ಅವರನ್ನು 1,17,716 ಮತಗಳ ಅಂತರದಿಂದ ಹೀನಾಯವಾಗಿ ಸೋಲಿಸುವ...

  • ದೇವದುರ್ಗ: ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗುವುದರಿಂದ ರಾಜ್ಯ ಸರಕಾರ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಿದೆ. ಬೆಳಗ್ಗೆ 8:30ರಿಂದ...

  • ರಾಯಚೂರು: ಲೋಕಸಭೆ ಚುನಾವಣೆ ದೇಶದ ವಿಚಾರಗಳ ಮೇಲೆ ನಡೆಯುವುದು ಸಾಮಾನ್ಯ. ಅದರ ಜತೆಗೆ ಆಯಾ ಕ್ಷೇತ್ರಗಳ ಶಾಸಕರ ಪ್ರಾಬಲ್ಯ ಪ್ರದರ್ಶನಕ್ಕೂ ಇದು ವೇದಿಕೆಯಾಗಿರುತ್ತದೆ....

ಹೊಸ ಸೇರ್ಪಡೆ