
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
ನಮ್ಮಲ್ಲೂ ಬಹಳ ಉತ್ತಮ ಪ್ರತಿಭೆಗಳುಳ್ಳ ಕ್ರೀಡಾಪಟುಗಳಿದ್ದಾರೆ.
Team Udayavani, Oct 5, 2021, 6:30 PM IST

ರಾಯಚೂರು: ಕೋವಿಡ್ ಕಾರಣಕ್ಕೆ ಸಂಪೂರ್ಣ ಸ್ಥಗಿತಗೊಂಡಿದ್ದ ಕ್ರೀಡಾಕೂಟಗಳು ಮತ್ತೆ ಆರಂಭಗೊಂಡಿರುವುದು ಒಳ್ಳೆಯ ಬೆಳವಣಿಗೆ. ಕ್ರೀಡಾ ಕ್ಷೇತ್ರದ ಬಲವರ್ಧನೆಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಸನ್‌ರೈಸ್ ಯೋನಿಕ್ಸ್ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಅಸೊಸಿಯೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಅಗತ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಬಡತನದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರಿಗೆ ಬೇಕಾದ ನೆರವು ನೀಡಲು ಸದಾ ಸಿದ್ಧವಾಗಿದ್ದು, ಯಾವುದೇ ಕ್ರೀಡಾಕೂಟಗಳಿದ್ದರೂ ಏನೇ ಸಹಾಯ ಬೇಕಾದರೂ ಕೇಳುವಂತೆ ತಿಳಿಸಿದರು. ನಮ್ಮಲ್ಲೂ ಬಹಳ ಉತ್ತಮ ಪ್ರತಿಭೆಗಳುಳ್ಳ ಕ್ರೀಡಾಪಟುಗಳಿದ್ದಾರೆ.
ಇಂಥ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಅಂಥ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸವಾಗಬೇಕು. ಜಿಲ್ಲಾ ಬ್ಯಾಡ್ಮಿಂಟನ್ ಅಸೊಸಿಯೇಶನ್ ಇಂಥದ್ದೊಂದು ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು. ಜಿಲ್ಲಾ ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಮತ್ತು ಮುಖಂಡ ಈ.ಆಂಜನೇಯ ಮಾತನಾಡಿದರು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಾಪಚೆಟ್ಟಿ ಗೋಪಾಲರೆಡ್ಡಿ,
ಮುಖಂಡರಾದ ಜಗದೀಶ ಗುಪ್ತಾ, ಕೆ.ಈರಣ್ಣ, ಮಲ್ಲಿಕಾರ್ಜುನ, ರಾಯಚೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಪಾಧ್ಯಕ್ಷ ಕಿರಣ್ ಬೆಲ್ಲಂ, ನಾಗರಾಜ್ ಗದ್ವಾಲ್ ಸೇರಿದಂತೆ ಇತರರು ಇದ್ದರು.
ಗಮನ ಸೆಳೆದ ಪ್ರತಿಭೆಗಳು
ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ 490 ಕ್ರೀಡಾಪಟುಗಳು ಆಗಮಿಸಿದ್ದು, ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಉಡುಪಿ, ಮಂಗಳೂರು, ಮೈಸೂರು, ಬೆಂಗಳೂರು, ಹಾವೇರಿ, ಕಲಬುರಗಿ, ವಿಜಯಪುರ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದಾರೆ. 155 ಪುರುಷರು, 52 ಮಹಿಳೆಯರು. 19 ವರ್ಷದೊಳಗಿನ 79 ಬಾಲಕರು, 41 ಬಾಲಕಿಯರು. 45 ವರ್ಷ ಮೇಲ್ಪಟ್ಟವರು 15 ಜನ ಪಾಲ್ಗೊಂಡಿದ್ದರು.
ಮೆನ್ ಸಿಂಗಲ್ಸ್, ಅಂಡರ್ 19 ಅರ್ಹತಾ ಸುತ್ತಿನ ಕ್ರೀಡಾಕೂಟ ಮುಗಿದಿದೆ. ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಕಾಲ 19 ವರ್ಷದೊಳಗಿನ ಮತ್ತು ಹೊರಗಿನ ಕ್ರೀಡಾಪಟುಗಳು ಹಾಗೂ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್, ಮಿಕ್ಸ್ ಡಬಲ್ಸ್ ಮತ್ತು 45 ವರ್ಷದ ಮೇಲ್ಪಟ್ಟ ಸಿಂಗಲ್ಸ್ ಡಬಲ್ಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಒಟ್ಟು 72 ಟ್ರೋμಗಳನ್ನು ನೀಡಲಾಗುತ್ತಿದೆ
ಎಂದು ಆಯೋಜಕರು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಡಿಕೆಶಿ, ಸಿದ್ದರಾಮಯ್ಯ ಮಕ್ಕಳು ಬಿಜೆಪಿಗೆ: ನಳಿನ್ ಕುಮಾರ್ ಕಟೀಲ್

ಬಿಜೆಪಿಯಲ್ಲೇ ಕುಟುಂಬ ರಾಜಕಾರಣ ಹೆಚ್ಚು… ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆದರೆ ತಪ್ಪೇನು?

ಫೆ.6ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ; ಕಾರ್ಯಕ್ರಮದ ವಿವರ ಹೀಗಿದೆ

ವಿಮಾನದ ಒಳಗಿನ ಘಟನೆಗಳ ನೈಜ ವರದಿಗಾಗಿ “ಕೊರುಸನ್’ ಬಳಕೆ: ಏರ್ ಇಂಡಿಯಾ

ಫೆ.3ರ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಸಿದ್ಧತೆ