ಜೋಳಕ್ಕೆ ಸೈನಿಕನ ಕಾಟ; ಮತ್ತೆ ರೈತರಲ್ಲಿ ಆತಂಕ


Team Udayavani, Dec 11, 2020, 6:50 PM IST

rc-tdy-2

ದೇವದುರ್ಗ: ಹಿಂಗಾರು ಹಂಗಾಮಿನಲ್ಲಿನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಜೋಳಕ್ಕೆ ಸೈನಿಕ ಹುಳು ಬಾಧೆ ಕಂಡುಬಂದಿದ್ದು, ರೈತರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ಜೋಳ ಬಿತ್ತನೆ ಮಾಡಿ 25ರಿಂದ 30 ದಿನಗಳು ಕಳೆಯುತ್ತಿದೆ. ನಾಲ್ಕು ಹೋಬಳಿವ್ಯಾಪ್ತಿಯಲ್ಲಿ 22,766 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟು ಬಿತ್ತನೆ: ಪಟ್ಟಣ ಸೇರಿ ತಾಲೂಕಿನ್ಯಾದಂತ ಹಿಂಗಾರು ಹಂಗಾಮಿನಲ್ಲಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡಲಾಗಿದೆ. ದೇವದುರ್ಗ ನೀರಾವರಿ-785 ಹೆಕ್ಟೇರ್‌, ಗಬ್ಬೂರು-1142ಹೆಕ್ಟೇರ್‌, ಜಾಲಹಳ್ಳಿ-525 ಹೆಕ್ಟೇರ್‌,ಅರಕೇರಾ- 675 ಹೆಕ್ಟೇರ್‌ ನೀರಾವರಿ3,127 ಹೆಕ್ಟೇರ್‌ ಪ್ರದೇಶದಲ್ಲಿ ಜೋಳಬಿತ್ತನೆ ಮಾಡಲಾಗಿದೆ. ಖುಷ್ಕಿ ಪ್ರದೇಶದಲ್ಲಿದೇವದುರ್ಗ-5,785 ಹೆಕ್ಟೇರ್‌, ಗಬ್ಬೂರು-6,169 ಹೆಕ್ಟೇರ್‌, ಜಾಲಹಳ್ಳಿ- 2,975 ಹೆಕ್ಟೇರ್‌, ಅರಕೇರಾ- 4,710 ಹೆಕ್ಟೇರ್‌ ಖುಷ್ಕಿ 19,639 ಹೆಕ್ಟೇರ್‌ ಪ್ರದೇಶದಲ್ಲಿ ಜೋಳಬಿತ್ತನೆ ಮಾಡಿದ್ದು, ಹಿಂಗಾರು ಹಂಗಾಮಿನಲ್ಲಿ22,766 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದಾರೆ.

ಆಂತಕದಲ್ಲಿ ರೈತರು: ಕಳೆದೆರಡು ತಿಂಗಳಹಿಂದೆ ನಿರಂತರ ಸುರಿದ ಮಳೆಯಿಂದಾಗಿ ಮೆಣಿಸಿನಕಾಯಿ, ಹತ್ತಿ, ತೊಗರಿ ಸೇರಿ ಇತರೆಬೆಳೆಗಳ ನಷ್ಟ ಅನುಭವಿಸಿದ್ದಾರೆ. ಹೆಚ್ಚುಮಳೆ ಸುರಿದಿದ್ದರಿಂದ ಬೆಳೆಗಳಿಗೆ ತೇವಾಂಶಹೆಚ್ಚಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸಿದರೈತರೀಗ ಸೈನಿಕ ಹುಳು ಬಾಧೆಗೆ ಆತಂಕ ಪಡುವಂತಾಗಿದೆ.

ಜಾಗೃತಿ ಅಗತ್ಯ: ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಜೋಳಕ್ಕೆ ಸೈನಿಕ ಹುಳು ಬಾಧೆ ಆವರಿಸಿದೆ. ಹುಳುವಿನ ಮೊದಲ ಹಂತದ ಮರಿಹುಳು ಎಲೆ ಕೆರೆದು ತಿನ್ನುವುದರಿಂದ, ಎಲೆಯ ಮೇಲೆ ಬಿಳಿಯಪಾರದರ್ಶಕ ಜಾಲರಿಗಳು ಕಂಡುಬರುತ್ತವೆ.ನಂತರ ಮರಿಹುಳು ಎಲೆ ತಿನ್ನುವ ಜತೆಕತ್ತರಿಸಿದಂತೆ ಕಾಣಿಸುತ್ತದೆ. ಸುಳಿ ಕೊರೆದು ತಿನ್ನುವುದರಿಂದ ಗಿಡ ಒಣಗುತ್ತದೆ. ಹಳದಿ ಮಿಶ್ರತ ಕಂದುಬಣ್ಣದ ಹಿಕ್ಕೆ ಕಂಡು ಬರುತ್ತದೆ. ಸೂಕ್ತ ಸಮಯದಲ್ಲಿ ರೈತರಿಗೆ ಕೃಷಿ ಅ ಧಿಕಾರಿಗಳಿಂದ ಜಾಗೃತಿ ನೀಡುವ ಅಗತ್ಯವಿದೆ.

ಬೆಳೆ ಹತೋಟಿಗೆ: ಜೋಳಕ್ಕೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆ ಸೂಕ್ತ ಸಮಯದಲ್ಲಿ ವಿಜ್ಞಾನಿಗಳ ಸಲಹೆ ಪಡೆದು ಬೆಳೆಗಳು ಹತೋಟಿಗೆ ತರಬೇಕಾಗಿದೆ. 0.40ಗ್ರಾಂ. ಇಮಾಮೆಕ್ಷೆನ್‌ ಬೆಂಜೋಯಟ್‌, 5 ಎಸ್‌.ಜಿ. ಅಥವಾ 0.3 ಮಿ.ಲೀ.ಕ್ಲೋರಾಂಟ್ರಿನಿಲ್‌ ಪ್ರೊಲ್‌, 18.5 ಎಸ್‌.ಸಿ.ಅಥವಾ 0.5ಮಿ.ಲೀ ಸ್ಪೆನೂಟೊರಂ, 12.5 ಎಸ್‌.ಸಿ ಪ್ರತಿ ಲೀ. ನೀರಿಗೆ ಬೆರೆಸಿ ದ್ರಾವಣವು ಸುಳಿಯೊಳಗೆ ಬೀಳುವಂತೆ ಸಿಂಪಡಿಸಬೇಕುಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ| ಗಿರೀಶ್‌ ಮರಡ್ಡಿ, ವಿಜ್ಞಾನಿ ಡಾ| ಕೃಷ್ಣಾ ಬಿರಾದಾರ ಪಾಟೀಲ್‌ ತಿಳಿಸಿದ್ದಾರೆ.

ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಜೋಳಕ್ಕೆ ಸೈನಿಕ ಹುಳು ಬಾಧೆ ಆವರಿಸಿದೆ. ಯಾವ ಹಂತದಲ್ಲಿ ಔಷಧ ಸಿಂಪಡಣೆ ಮಾಡಬೇಕೆಂಬ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಡಾ| ಎಸ್‌. ಪ್ರಿಯಾಂಕ್‌ ಸಹಾಯಕ ಕೃಷಿ ನಿರ್ದೇಶಕಿ

ಕೃಷಿ ಅಧಿಕಾರಿಗಳಿಂದ ರೈತರಿಗೆ ಜಾಗೃತಿ ಕೊರತೆ ಉಂಟಾಗಿದೆ. ಕಳಪೆ ಬೀಜಗಳ ಪೂರೈಕೆಯಿಂದ ಆರಂಭದಲ್ಲೇಬೆಳೆ ನಷ್ಟ ಅನುಭವಿಸಬೇಕಾಗಿದೆ. ಈ ಕುರಿತು ಕೃಷಿ ಇಲಾಖೆ ರೈತರಿಗೆ ಅಗತ್ಯ ಸಲಹೆ-ಸೂಚನೆ ನೀಡಬೇಕು.  –ಶಬ್ಬೀರ ಜಾಲಹಳ್ಳಿ, ರೈತ ಮುಖಂಡ

 

-ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20mango

ಇಳುವರಿ ಕುಂಠಿತ: ಮಾವು ಬೆಳೆಗಾರರು ಕಂಗಾಲು

13problem

ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ

12water

ನೀರು ಶುದ್ಧೀಕರಣ ಘಟಕಕ್ಕೆ ಬಾದರ್ಲಿ ಭೇಟಿ

11rain

ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ವಿತರಣೆ

15dam

ಒಂದೇ ಮಳೆಗೆ ಮಾರಲದಿನ್ನಿ ಡ್ಯಾಂ ಭರ್ತಿ!

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.