ಸಂತ ಹೃದಯಿಗಳೇ ನೈಜ ಜನಪ್ರತಿನಿಧಿ: ಗವಿ ಶ್ರೀ


Team Udayavani, Feb 20, 2018, 2:21 PM IST

ray-3.jpg

ಸಿಂಧನೂರು: ಯಾವ ರಾಜಕಾರಣಿಗಳಲ್ಲಿ ಸಂತನ ಹೃದಯ ಇರುತ್ತದೆ ಅವನೇ ನಿಜವಾದ ಜನಪ್ರತಿನಿಧಿಯಾಗುತ್ತಾನೆ. ಆ ಕೆಲಸವನ್ನು ಶಾಸಕ ಹಂಪನಗೌಡ ಬಾದರ್ಲಿ ಮಾಡಿ ತೋರಿಸಿದ್ದಾರೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಅಭಿಮಾನಿ ಬಳಗದಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಾಮಾಜಿಕ ಜೀವನ
ಮುಳ್ಳಿನ ಹಾಸಿಗೆ ಇದ್ದಂತೆ. ಜಗತ್ತಿಗೆ ಬೆಳಕು ಚೆಲ್ಲಿದ ಯೇಸು ಕ್ರೀಸ್ತನನ್ನು ಸಮಾಜ ಶಿಲುಬೆಗೇರಿರೆಸಿದೆ. ಸಮಾಜದಲ್ಲಿ
ಸಮಾನತೆ ತರಲು ಹೊರಟ ಬಸವಣ್ಣನನ್ನು ಸಮಾಜದಿಂದ ದೂರ ಮಾಡಿತು ಎಂದರು.

ಬದುಕಿನ ಬೆಲೆ ಗೊತ್ತಿರುವವರು ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ನನಗೆ ಕಣ್ಣು ಇಲ್ಲದಿದ್ದರೇನು ಜನರಿಗೆ ಕಣ್ಣು
ಕೊಡುವ ಕೆಲಸವನ್ನು ಮಾಡಬೇಕು ಎಂದು ಪುಟ್ಟರಾಜ ಗವಾಯಿಗಳು ಹೇಳಿದ್ದನ್ನು ಸ್ಮರಿಸಿದ ಪೂಜ್ಯರು, ಕುದುರೆ, ಆನೆ, ಬಂಡೆ, ಬಂಗಾರವಿದ್ದರೇನು? ನಾನು ತಿನ್ನುವುದು ಮುಡಿ ಅಕ್ಕಿ ಮಾತ್ರ, ಜಗತ್ತನ್ನೆ ಬದಲಾವಣೆ ಮಾಡುವಂತ ಸಾಮರ್ಥ್ಯವಿರುವ ಮನುಷ್ಯ ಮನೆಯ ಟಿವಿ ಚಾನೆಲ್‌ ಬದಲಾವಣೆ ಮಾಡಲಾರದಂತಹ ಹೀನಾಯ ಸ್ಥಿತಿಗೆ ಬಂದು
ನಿಂತಿದ್ದಾನೆ.

ಆರೋಗ್ಯ ಸಚಿವ ರಮೇಶಕುಮಾರ್‌ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ಸರ್ಕಾರದಿಂದ ನೂರಾರು ಕೋಟಿ
ರೂ. ಅನುದಾನ ತಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜಕಾರಣಿಗಳಿಗೆ ಸಂಸಾರವಿದ್ದು, ಸ್ವಾಮಿಗಳಿಗೆ ಸಂಸಾರವಿರುವುದಿಲ್ಲ. ಸುಮಾರು 30 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಸಂಸಾರ ಮತ್ತು ಸಾಮಾಜಿಕ ಜೀವನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.

ಚುನಾವಣೆಗಳಲ್ಲಿ ಹಣ ಕೊಟ್ಟು ಗೆಲ್ಲುವ ಹಾಗೂ ಹಣ ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವ ರಾಜಕಾರಣಿಗಳನ್ನು ನಾನು ನೋಡಿದ್ದೇನೆ. ತಾಲೂಕಿನ ಸಾರ್ವಜನಿಕರು ಸ್ವಇಚ್ಛೆಯಿಂದ ಶಾಸಕರಿಗೆ ಸನ್ಮಾನ ಮಾಡುತ್ತಿರುವುದು ಮಾದರಿಯಾಗಿದೆ. ಉತ್ತಮ ರಾಜಕಾರಣಿಗಳಲ್ಲಿ ಹಂಪನಗೌಡರು ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಕಾರಣಿಗಳ ಬದುಕು ಕೆಸರು ಗದ್ದೆಯಾಗಿದ್ದು ಕಮಲದಂತೆ ಎದ್ದು ಬಂದು ನಿಸ್ವಾರ್ಥದಿಂದ ಸೇವೆ ಮಾಡುವವನೇ ನಿಜವಾದ ಸಮಾಜ ಸೇವಕ, ಜನನಾಯಕ. ಯಾವ ರಾಜಕಾರಣಿ ಕೋಪ ಮಾಡಿಕೊಳ್ಳುತ್ತಾನೆ ಅವನಲ್ಲಿ
ನೈಜತೆ ಇರುವುದೆಂದು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ತಂದೆ-ತಾಯಿ, ಸಹೋದರರ, ಸಹಾಯ, ಸಹಕಾರ, ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿ ಮೇಲೆ ಬರುವಂತೆ ಮಾಡಿದ ಕ್ಷೇತ್ರದ ಜನತೆಯನ್ನು ಎಂದಿಗೂ ಮರೆಯಲಾರೆ ಎಂದರು.

ರಾಯಚೂರು ಸಂಸದ ಬಿ.ವಿ. ನಾಯಕ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌, ಮಾನ್ವಿ ಶಾಸಕ ಹಂಪಯ್ಯ ನಾಯಕ, ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು, ಬಸವರಾಜ ಇಟಗಿ, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಸಂತಕುಮಾರ್‌, ನಿವೃತ್ತ ಪ್ರಾಂಶುಪಾಲ ಶಾಶ್ವತಯ್ಯ ಸ್ವಾಮಿ ಮುಕ್ಕುಂದಿ ಮಠ, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್‌, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ್ರ ಇತರರು ಇದ್ದರು.

ಟಾಪ್ ನ್ಯೂಸ್

ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌ 2.5 ಲಕ್ಷ ರೂ.ಗಳಿಗೆ ಏರಿಕೆ?

ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌ 2.5 ಲಕ್ಷ ರೂ.ಗಳಿಗೆ ಏರಿಕೆ?

ಕೃಷ್ಣಾಪುರ ಶ್ರೀಗಳ ಚತುರ್ಥ ಪರ್ಯಾಯ ಆರಂಭ

ಕೃಷ್ಣಾಪುರ ಶ್ರೀಗಳ ಚತುರ್ಥ ಪರ್ಯಾಯ ಆರಂಭ

ಹಸಿವಿನಿಂದಾದ ಸಾವುಗಳ ಬಗ್ಗೆ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಹಸಿವಿನಿಂದಾದ ಸಾವುಗಳ ಬಗ್ಗೆ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಏಕದಿನ ಸರಣಿ: ಎಲ್ಲರ ಕಣ್ಣು ಕೊಹ್ಲಿ ಮೇಲೆ

ಏಕದಿನ ಸರಣಿ: ಎಲ್ಲರ ಕಣ್ಣು ಕೊಹ್ಲಿ ಮೇಲೆ

ಕೋವಿಡ್‌ ಹೆಚ್ಚಳ: “ವೈದ್ಯರ ನಡೆ ಹಳ್ಳಿ ಕಡೆ’ ಪುನರಾರಂಭಿಸಲು ಸೂಚನೆ

ಕೋವಿಡ್‌ ಹೆಚ್ಚಳ: “ವೈದ್ಯರ ನಡೆ ಹಳ್ಳಿ ಕಡೆ’ ಪುನರಾರಂಭಿಸಲು ಸೂಚನೆ

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20court

ನ್ಯಾಯಾಲಯದಲ್ಲಿ ಜನರಿಗೆ ಪ್ರವೇಶ ನಿಷೇಧ

18protest

ಮತಾಂತರ ನಿಷೇಧ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ಮನವಿ

17undevolping

ಪ್ರಗತಿ ಹೇಳದ ಕೆಆರ್‌ಐಡಿಎಲ್‌ “ಆಟ’ ಬಯಲು

19school

ಏಳು ಪ್ರೌಢಶಾಲೆ ಕಾಲೇಜುಗಳಾಗಿ ಮೇಲ್ದರ್ಜೆಗೆ

12MLA

ಶಾಸಕರ ನಿವಾಸಕ್ಕೆ ಅನ್ನದಾತರ ದಂಡು

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌ 2.5 ಲಕ್ಷ ರೂ.ಗಳಿಗೆ ಏರಿಕೆ?

ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌ 2.5 ಲಕ್ಷ ರೂ.ಗಳಿಗೆ ಏರಿಕೆ?

ಕೃಷ್ಣಾಪುರ ಶ್ರೀಗಳ ಚತುರ್ಥ ಪರ್ಯಾಯ ಆರಂಭ

ಕೃಷ್ಣಾಪುರ ಶ್ರೀಗಳ ಚತುರ್ಥ ಪರ್ಯಾಯ ಆರಂಭ

ತಾ.ಪಂ, ಜಿ.ಪಂ ಚುನಾವಣೆ: ವಿಚಾರಣೆ ಮುಂದಕ್ಕೆ

ತಾ.ಪಂ, ಜಿ.ಪಂ ಚುನಾವಣೆ: ವಿಚಾರಣೆ ಫೆ.14ಕ್ಕೆ ಮುಂದೂಡಿದ ಹೈಕೋರ್ಟ್‌

ಹಸಿವಿನಿಂದಾದ ಸಾವುಗಳ ಬಗ್ಗೆ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಹಸಿವಿನಿಂದಾದ ಸಾವುಗಳ ಬಗ್ಗೆ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಏಕದಿನ ಸರಣಿ: ಎಲ್ಲರ ಕಣ್ಣು ಕೊಹ್ಲಿ ಮೇಲೆ

ಏಕದಿನ ಸರಣಿ: ಎಲ್ಲರ ಕಣ್ಣು ಕೊಹ್ಲಿ ಮೇಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.