ಕಣ್ಣಿಲ್ಲದವರಿಗೆ ಬೆಳಕಾದ ಪಂಚಾಕ್ಷರಿ ಗವಾಯಿಗಳು

ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಅವರಿಗೆ ಮಠಕ್ಕೆ ಅನುದಾನ ನೀಡಲು ಮನವಿ ಮಾಡಲಾಗುವುದು.

Team Udayavani, Sep 27, 2021, 6:25 PM IST

ಕಣ್ಣಿಲ್ಲದವರಿಗೆ ಬೆಳಕಾದ ಪಂಚಾಕ್ಷರಿ ಗವಾಯಿಗಳು

ರಾಯಚೂರು: ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ನಾಲ್ಕು ದಶಕದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಸಂಗೀತಗಾರರ ದೊಡ್ಡ ಬಳಗವೇ ಇದ್ದು, ಗವಾಯಿಗಳ ಆಶಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ತಿಳಿಸಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿ ಸಂಸ್ಥೆಯಿಂದ ಪಂಚಾಕ್ಷರಿ ಗವಾಯಿಗಳ ಪುಣ್ಯದಿನದ ನಿಮಿತ್ತ ಹಮ್ಮಿಕೊಂಡ 41ನೇ ಸಂಗೀತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಕ್ಷರಿ ಗವಾಯಿಗಳು ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಅದನ್ನು ಮುನ್ನಡೆಸಿಕೊಂಡು ಹೋಗುವ ಹೊಣೆ ನನ್ನ ಮೇಲಿದ್ದು, ಅವರ ಆಶೀರ್ವಾದೊಂದಿಗೆ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ಮಠದಲ್ಲಿ ಬರುವ ಮಕ್ಕಳಿಗೆ ಸಂಗೀತ,ಶಿಕ್ಷಣ ಒದಗಿಸಿ ಬೆಳೆಸಲಾಗುತ್ತಿದೆ. ಧರ್ಮದ ಏಳ್ಗೆಗಾಗಿ ಗುಡಿ, ಚರ್ಚ್‌, ಮಸೀದಿಗಳು ಕೆಲಸ ಮಾಡುತ್ತಿದ್ದು, ಕಣ್ಣಿಲ್ಲದ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವ ಕೆಲಸ ಪಂಚಾಕ್ಷರಿ ಅವರು ಮಾಡುತ್ತಿದ್ದಾರೆ. ಕಲಾವಿದರು ಸಂಗೀತವನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಇದು ನಿರಂತರವಾಗಿ ಮುಂದುವರೆಯಲಿ ಎಂದರು. ಗದುಗಿನ ಆಶ್ರಮದಲ್ಲಿ ಈಗಾಗಲೇ 4 ಅಂತಸ್ತಿನ ಕಟ್ಟಡ ಇದ್ದು, ಬರುವ ಭಕ್ತರಿಗೆ ಉಳಿದುಕೊಳ್ಳುವ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದೆ. ಸರ್ಕಾರ ಈವರೆಗೆ ಮಠಕ್ಕೆ ಯಾವುದೇ ಅನುದಾನ ನೀಡಿಲ್ಲ.

ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಅವರಿಗೆ ಮಠಕ್ಕೆ ಅನುದಾನ ನೀಡಲು ಮನವಿ ಮಾಡಲಾಗುವುದು. ಜಿಲ್ಲೆಯಲ್ಲಿ ಗಾನಯೋಗಿ ಪಂಚಾಕ್ಷರಿ ಸಂಸ್ಥೆಗೆ ಸ್ಥಳಾಭಾವ ಕೊರತೆಯಿದ್ದು, ಅದನ್ನು ನೀಗಿಸುವ ಕೆಲಸ ಇಲ್ಲಿನ ಸಂಗೀತ ಹಾಗೂ ಪಂಚಾಕ್ಷರಿ ಗವಾಯಿಗಳ ಭಕ್ತರು ಮಾಡುತ್ತಿದ್ದಾರೆ. ಮಠದ ಭಕ್ತರೊಬ್ಬರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅದನ್ನು ಇಲ್ಲಿಯ ಸಂಗೀತ ಚಟುವಟಿಕೆ ನಡೆಸುವ ಕಟ್ಟಡಕ್ಕೆ ಬಳಕೆಯಾಗಲಿದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪಂಚಾಕ್ಷರಿ ಗವಾಯಿಗಳ ಅವರ ಕಣ್ಣಲ್ಲಿದವರಿಗೆ ಸಂಗೀತ ಮತ್ತು ಶಿಕ್ಷಣ ನೀಡುವ ಕಾಯಕ ಮಾಡುತ್ತಿದ್ದು, ಇದು ಅತ್ಯಂತ ಮಹತ್ವದ ಕಾರ್ಯ ಎಂದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿದರು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ರವಿ ಬೋಸರಾಜ, ಮಹಾಂತೇಶ ಪಾಟೀಲ್‌ ಅತ್ತನೂರು, ಗಿರಿಜಾ ಇದ್ದರು.

ಟಾಪ್ ನ್ಯೂಸ್

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

ರಸಗೊಬ್ಬರ ಖಾಲಿ; ರಾಜ್ಯದಲ್ಲಿ ಹಿಂಗಾರು, ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ರಾಜ್ಯದಲ್ಲಿ ಹಿಂಗಾರು,ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ದೇಗುಲಗಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ

ದೇಗುಲಗಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11addmission

ಶಾಲೆಗೆ ಹೋಗೋಣ ಬನ್ನಿರೋ…!

17pipe

ಬೇಕಾಬಿಟ್ಟಿ ಪೈಪ್‌ಲೈನ್‌ ಕಾಮಗಾರಿಗೆ ವ್ಯಾಪಕ ಆಕ್ರೋಶ

16vaccine

ಮೈಮೇಲೆ ದೇವ್ರು ಬಂದ್ರೂ ನಿಲ್ಲದ ಕೊರೊನಾ ಲಸಿಕೆ ನೀಡಿಕೆ!

14satyagraha

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತರ ಭೇಟಿ

13former

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಆ್ಯಂಬುಲೆನ್ಸ್‌ ನಲ್ಲಿ ಸಾಗುವಾನಿ ನಾಟ ಕಳ್ಳಸಾಗಣೆ

ಆ್ಯಂಬುಲೆನ್ಸ್‌ ನಲ್ಲಿ ಸಾಗುವಾನಿ ನಾಟ ಕಳ್ಳಸಾಗಣೆ

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

ಜನಪ್ರತಿನಿಧಿಗಳೇ ಒತ್ತಡ ಹೇರಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.