Udayavni Special

ವಿದ್ಯಾರ್ಥಿಗಳಿಗೆ ಶೀಘ್ರ ಸೈಕಲ್ ಭಾಗ್ಯ

• 31 ಪ್ರೌಢಶಾಲೆಗಳ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ಸಿದ್ಧತೆ

Team Udayavani, Jul 16, 2019, 12:21 PM IST

rc-tdy-2..

ದೇವದುರ್ಗ: ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಜೋಡಣೆಯಾದ ನೂರಾರು ಸೈಕಲ್ಗಳು.

ದೇವದುರ್ಗ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಸೈಕಲ್ ಭಾಗ್ಯ ದೊರೆಯಲಿದ್ದು, ಈಗಾಗಲೇ ಸೈಕಲ್ಗಳ ಜೋಡಣೆ ಕಾರ್ಯ ಭರದಿಂದ ಸಾಗಿದೆ.

ಪಟ್ಟಣ ಸೇರಿ ತಾಲೂಕಿನಾದ್ಯಂತ 31 ಸರಕಾರಿ ಪ್ರೌಢಶಾಲೆಗಳ 8ನೇ ತರಗತಿಯ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ ದೊರೆಯಲಿದೆ. ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆ, ಗಬ್ಬೂರು, ಜಾಲಹಳ್ಳಿ ಪ್ರೌಢಶಾಲೆಗಳ ಆವರಣದಲ್ಲಿ ಕಾರ್ಮಿಕರು ಸೈಕಲ್ ಜೋಡಣೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ. ಇನ್ನು ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಬಾಕಿ ಇದೆ. ದೇವದುರ್ಗ, ಜಾಲಹಳ್ಳಿ, ಗಬ್ಬೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೈಕಲ್ ಜೋಡಣೆ ನಡೆದಿದ್ದು, ಒಂದೊಂದು ಕೇಂದ್ರದಲ್ಲಿ ಸುಮಾರು 1200ಕ್ಕೂ ಹೆಚ್ಚು ಸೈಕಲ್ ಜೋಡಣೆ ಕಾರ್ಯ ಭರದಿಂದ ಸಾಗಿದೆ. ಮಹಾರಾಷ್ಟ್ರ ಮೂಲದವರಿಗೆ ಸೈಕಲ್ ಪೂರೈಕೆ ಟೆಂಡರ್‌ ಆಗಿದೆ ಎನ್ನಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಗುಣಮಟ್ಟದ ಸೈಕಲ್ ಪೂರೈಕೆ ಜೊತೆಗೆ ಉತ್ತಮವಾಗಿ ಸೈಕಲ್ ಜೋಡಣೆ ಮಾಡುವಂತೆ ಸೂಚಿಸಿದ್ದಾರೆ. ಪ್ರೌಢಶಾಲೆ ವಿದ್ಯಾರ್ಥಿಗಳು ಸೈಕಲ್ ಏರಿ ಶಾಲೆಗೆ ಹೋಗುವ ಸಂತಸದಲ್ಲಿದ್ದಾರೆ.

ಶೂ ಭಾಗ್ಯ ವಿಳಂಬ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಒಂದು ಸೆಟ್ ಸಮವಸ್ತ್ರ ವಿತರಣೆ ಮಾಡಲಾಗಿದೆ. ಇನ್ನೊಂದು ಸೆಟ್ ವಿತರಿಸಬೇಕಿದೆ. ಸೈಕಲ್ ವಿತರಣೆಗೆ ಸಿದ್ಧತೆ ನಡೆದಿದೆ. ಆದರೆ ಇನ್ನೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಣೆ ಬಾಕಿಇದೆ. ಪ್ರತಿವರ್ಷ ಜುಲೈ ತಿಂಗಳಲ್ಲೇ ಶೂ, ಸಾಕ್ಸ್‌ ವಿತರಣೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಆಗುತ್ತಿತ್ತು. ಈ ವರ್ಷ ಇನ್ನೂ ಅನುದಾನ ಬಾರದ್ದರಿಂದ ಶೂ, ಸಾಕ್ಸ್‌ ವಿತರಣೆ ವಿಳಂಬವಾಗಿದೆ. ಇದಕ್ಕೆ ರಾಜ್ಯ ರಾಜಕೀಯದಲ್ಲಿನ ಕಿತ್ತಾಟವೂ ಕಾರಣವಾಗಿದೆ ಎನ್ನಲಾಗುತ್ತಿದೆ. ಕೂಡಲೇ ಮಕ್ಕಳಿಗೆ ಶೂ, ಸಾಕ್ಸ್‌ ಮತ್ತು ಎರಡನೇ ಸಮವಸ್ತ್ರ ವಿತರಣೆಗೆ ಕ್ರಮ ವಹಿಸಬೇಕೆಂದು ಶಿಕ್ಷಣ ಪ್ರೇಮಿ ಹನುಮಗೌಡ ಆಗ್ರಹಿಸಿದ್ದಾರೆ.

ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು ಸರಕಾರಿ ಶಾಲೆಗಳ ಆವರಣದಲ್ಲಿ ಸೈಕಲ್ ಜೋಡಣೆ ಕಾರ್ಯ ನಡೆದಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಗುಣಮಟ್ಟದಲ್ಲಿ ಜೋಡಣೆ ಮಾಡುವಂತೆ ಸೂಚನೆ ನೀಡಲಾಗಿದೆ.•ಡಾ| ಎಸ್‌.ಎಂ. ಹತ್ತಿ,ಕ್ಷೇತ್ರ ಶಿಕ್ಷಣಾಧಿಕಾರಿ

 

•ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

ftfgggg

ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ ಎನ್ನುವುದು ಬಿಜೆಪಿಯ ಕೈಲಾಗದ ಮಾತುಗಳು : ಕುಮಾರಸ್ವಾಮಿ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

madras-high-court-warns-against-religious-intolerance-after-muslims-object-to-conduct-of-hindu-festival

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fghjhgfghjh

ವ್ಯಾಪಾರ ವಲಯಕ್ಕೆ ಕರ್ಫ್ಯೂ ಕಾರ್ಮೋಡ!

jjjjjjjjjjjjjjjjjjjjjjjjjjjjjjjjjj

ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ

rrrrrrrrrrrrrrrrrrrrrrrrrrrrrrrrrrrrrrrrrrr

ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ

gfdfghgf

ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಸಿದ ಕೋವಿಡ್!

jhgfdfgh

ಕಾಂಗ್ರೆಸ್‌ ನಿಂದ ಸೋಂಕಿತರಿಗೆ ಪೌಷ್ಟಿ ಕ ಆಹಾರ ವಿತರಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

ftfgggg

ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ ಎನ್ನುವುದು ಬಿಜೆಪಿಯ ಕೈಲಾಗದ ಮಾತುಗಳು : ಕುಮಾರಸ್ವಾಮಿ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

jhgfnhgf

ಡಿ ಆರ್ ಡಿ ಒ ನಿರ್ದೇಶಕರ ಕಾರ್ಯಾಲಯಕ್ಕೆ ಸುಧಾಕರ್ ಭೇಟಿ-ಪರಿಶೀಲನೆ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.